ಬೆಂಗಳೂರು ಗ್ರಾಮಾಂತರ

ವನಿತೆಯರಿಂದ ವಿಶೇಷ ಮಾರಾಟ ಮೇಳ ಆಯೋಜನೆ

Published On :

ದೊಡ್ಡಬಳ್ಳಾಪುರ: ಇಲ್ಲಿನ ಆರ್ಯವೈಶ್ಯ ಮಂಡಲಿ, ವಾಸವಿ ಯುವಜನ ಸಂಘದ ಸಹಯೋಗದಲ್ಲಿ ವಾಸವಿ ಮಹಿಳಾ ಮಂಡಲಿ ನೇತೃತ್ವದಲ್ಲಿ ಸೇಲ್ಸ್ ಬೊನಾಂಜ (ಮಾರಾಟ ಮೇಳ) ವಾಸವಿ ಕಲ್ಯಾಣ ಮಂದಿರದಲ್ಲಿ ಜು.13ರ ಭಾನುವಾರ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಲಿದೆ. ದೊಡ್ಡಬಳ್ಳಾಪುರದಲ್ಲಿ ಮೊದಲ ಬಾರಿಗೆ ಮಹಿಳೆಯರೇ ಆಯೋಜಿಸಿರುವ ಈ ಮೇಳದಲ್ಲಿ ತರಾವರಿ ತಿಂಡಿ-ತಿನಿಸು, ಸ್ಥಳೀಯ ರುಚಿಯ ಅಡುಗೆ-ಖಾದ್ಯಗಳು ಲಭ್ಯವಿರಲಿವೆ. ಈ ಮೇಳದಲ್ಲಿ ಮಹಿಳೆಯರ ಮನಸ್ಸಿಗೆ ಒಪ್ಪುವ ಅನೇಕ ಆಕರ್ಷಣೆಗಳಿವೆ. ಆಕರ್ಷಕ ಸೀರೆಗಳು, ಇಂಟಿಮೇಷನ್ ಜ್ಯುವೆಲರಿ, ಸಿಲ್ವರ್ ಜ್ಯೂವೆಲರಿ, ಪೂಜಾ ಸಾಮಗ್ರಿಗಳು, ಗೃಹಾಲಂಕಾರ ವಸ್ತುಗಳು, ತಿಂಡಿ-ತಿನಿಸುಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ತರಾವರಿ ಮೆಹಂದಿ, ಕೆರಿಯರ್ ಹೆಲ್ಪ್‌ಲೈನ್ ಕಾರ್ಯಕ್ರಮ, ಲಕ್ಕಿ ಡ್ರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಸವಿ ಮಹಿಳಾ ಮಂಡಲಿ  ತಿಳಿಸಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.