ಕೊಲೆ ಆರೋಪಿಗಳಿಗೆ ಗಂಭೀರ ಶಿಕ್ಷೆಯಾಗಲಿ
ದೊಡ್ಡಬಳ್ಳಾಪುರ: ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿರುವ ಮಾರಹಳ್ಳಿಯ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಗಂಭೀರ ಶಿಕ್ಷೆಯಾಗಬೇಕು. ಕಾನೂನು ರೀತ್ಯ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಪೊಲೀಸ್ ಇಲಾಖೆ/್ಚಂದಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಮಾರಹಳ್ಳಿ ಗ್ರಾಮಸ್ಥರು ಮತ್ತು ಕೊಲೆಯಾದ ಆನಂದ್ ಮತ್ತು ಚಂದ್ರಶೇಖರ್ ಕುಟುಂಬದವರು ಡಿವೈಎಸ್ಪಿ ಕೋನಪ್ಪ ರ್ಘೆಜ್ಘಜಿ ಅವರಿಗೆ ಮನವಿ ಮಾಡಿದ್ದಾರೆ.
ಇಲ್ಲಿನ ಉಪವಿಭಾಗ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು, ಈ ಪ್ರಕರಣ ಅತ್ಯಂತ ಘೋರ ಕೃತ್ಯವಾಗಿದೆ. ಪ್ರಕರಣ ನಡೆದು 6 ವರ್ಷಗಳೇ ಕಳೆದಿದ್ದರೂ ಕೊಲೆ ವಿಚಾರ ಇತ್ತೀಚಿನವರೆಗೆ ಬೆಳಕಿಗೇ ಬಂದಿರಲಿಲ್ಲ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಡ್ಡಿ ಕೃಷ್ಣಪ್ಪ ಗ್ರಾಮದ ಆನಂದ್ ಮತ್ತು ಚಂದ್ರಶೇಖರ್ ಎಂಬ ಇಬ್ಬರನ್ನು ಕೊಲೆ ಮಾಡಿ ಪ್ರತ್ಯೇಕ ಸ್ಥಳಗಳಲ್ಲಿ ಹೂತು ಹಾಕಿದ್ದ. ಆತನ ಮಗ ಶಾಂತಕುಮಾರ್ ಮತ್ತು ಕೆಲವರು ಈ ಕೃತ್ಯಕ್ಕೆ ಸಹಕಾರ ನೀಡಿದ್ದರು ಎನ್ನಲಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇದು ಸ್ವಾಗತಾರ್ಹ. ಈ ಕೂಡಲೇ ಪೊಲೀಸರು ಬಡ್ಡಿ ಕೃಷ್ಣಪ್ಪ ಪರವಾನಗಿ ಪಡೆದು ತನ್ನ ಬಳಿ ಹೊಂದಿರುವ ನಾಡ ಬಂದೂಕನ್ನು ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಜನರ ಮನವಿಗೆ ಸ್ಪಂದಿಸಿದ ಡಿವೈಎಸ್ಪಿ ಟಿ.ಕೋನಪ್ಪರೆಡ್ಡಿ, ಈ ಪ್ರಕರಣದ ಕುರಿತು ಗಂಭೀರ ಸ್ವರೂಪದ ತನಿಖೆ ನಡೆಯುತ್ತಿದ್ದು, ಕೊಲೆ ಆರೋಪಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಅವಕಾಶವಿಲ್ಲ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

