ರೌಡಿ ಚೇತನ್ ಕೊಲೆ ಪ್ರಕರಣ: 7 ಮಂದಿ ಬಂಧನ
ರಾಮನಗರ: ತಾವರೆಕೆರೆ ಪೊಲೀಸ್ ಠಾಣೆ ಸರಹದ್ದಿನ ನಾಗರಹೊಳೆ ಸರ್ಕಲ್ ಬಳಿ ನಡೆದಿದ್ದ ರೌಡಿ ಚೇತನ್ ಅಲಿಯಾಸ್ ಎಸ್.ಟಿ.ಡಿ.ಚೇತು ಕೊಲೆ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಹೇಳಿದರು.
ನರಸಿಂಹ, ಅರುಣ್, ರವಿ, ರವಿಕುಮಾರ್, ವೆಂಕಟರಾಜು, ಶ್ರೀನಿವಾಸ್, ಪ್ರತಾಪ, ಬಸವರಾಜು ಬಂಧಿತ ಆರೋಪಿಗಳು. ಅವರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್, ಮಾರಕಾಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕುಖ್ಯಾತ ರೌಡಿಯಾಗಿದ್ದ ಚೇತನ್ ಅಲಿಯಾಸ್ ಎಸ್.ಟಿ.ಡಿ. ಚೇತು ಕೆಲ ದಿನಗಳ ಹಿಂದಷ್ಟೇ ನರಸಿಂಹ ಅಲಿಯಾಸ್ ಸಿ.ಡಿ.ನರಸಿಂಹನ ಮೇಲೆ ಹಲ್ಲೆ ನಡೆಸಿದ್ದನು. ಅದಕ್ಕೆ ಪ್ರತೀಕಾರವಾಗಿ ನರಸಿಂಹ ಸಂಚು ರೂಪಿಸಿ ಸಹಚರರ ಜತೆಗೂಡಿ ಜು.13ರಂದು ಚೇತನನನ್ನು ಕೊಲೆ ಮಾಡಿದ್ದಾನೆ ಎಂದರು.
ನರಸಿಂಹ ಕೂಡ ರೌಡಿ ಪಟ್ಟಿಯಲ್ಲಿರುವ ವ್ಯಕ್ತಿ. ಈ ಪ್ರಕರಣದ ಉಳಿದ ಆರೋಪಿಗಳ ಮೇಲೂ ರೌಡಿ ಶೀಟ್ ತೆರೆಯಲಾಗುತ್ತದೆ. ಜಿಲ್ಲೆಯಲ್ಲಿ ರೌಡಿಸಂ ನಿಯಂತ್ರಿಸಲು ಗೂಂಡಾ ಕಾಯ್ದೆ ಬಳಕೆಗೂ ಚಿಂತನೆ ನಡೆದಿದೆ ಎಂದು ಅನುಪಮ್ ಅಗ್ರವಾಲ್ ಹೇಳಿದರು.
ಡಿವೈಎಸ್ಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಚೇತನ್ ಕೊಲೆ ಪ್ರಕರಣ ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮಾಗಡಿ ಸರ್ಕಲ್ ಇನ್ಸ್ಪೆಕ್ಟರ್ ಎ.ಯಲಗಯ್ಯ, ಸಬ್ ಇನ್ಸ್ಪೆಕ್ಟರ್ಗಳಾದ ಜಗದೀಶ್, ಚಂದ್ರಶೇಖರ್ ಮತ್ತು ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

