'ಗಮಕ ಕಾವ್ಯ ಸತ್ವದ ಪ್ರತಿಪಾದಕ'
ದೊಡ್ಡಬಳ್ಳಾಪುರ: ಕಾವ್ಯವನ್ನು ಸಹೃದಯಿಗಳಿಗೆ ಮುಟ್ಟಿಸುವ ಸಂವಾಹಕವಾಗಿ ಗಮಕ ಎಲ್ಲ ಕಾಲದಲ್ಲೂ ಕೆಲಸ ಮಾಡುತ್ತಲೇ ಬರುತ್ತಿದೆ. ಈ ದಿಸೆಯಲ್ಲಿ ಗಮಕ ಕಲೆಯ ಪ್ರಸರಣಕ್ಕೆ ಕರ್ನಾಟಕ ಗಮಕ ಕಲಾ ಪರಿಷತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ ಅಧ್ಯಕ್ಷ ಎಂ.ಆರ್.ಸತ್ಯನಾರಾಯಣ ಹೇಳಿದರು.
ಇಲ್ಲಿನ ದೇವಾಂಗ ಮಂಡಲಿ ಕಲ್ಯಾಣ ಮಂದಿರದಲ್ಲಿ ಸುಸ್ವರ ಟ್ರಸ್ಟ್ ಮತ್ತು ತಾಲೂಕು ಕಸಾಪ ನೇತೃತ್ವದಲ್ಲಿ ನಡೆದ ಗಮಕ ವಾಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಕಾವ್ಯಗಳನ್ನು ಜನರಿಗೆ ತಲುಪಿಸುವ ಮತ್ತು ಗಮಕ ಕಲೆಯನ್ನು ಬೆಳೆಸುವ ಸಲುವಾಗಿ ಗಮಕ ಪರಿಷತ್ತು ಸ್ಥಾಪನೆಯಾಗಿದೆ. ನಾಡಿನಾದ್ಯಂತ ಗಮಕ ವಾಚನ, ಕಮ್ಮಟಗಳನ್ನು ನಡೆಸುತ್ತಾ, ಸಂಗೀತ-ಸಾಹಿತ್ಯ ಎರಡರ ಸರಸ ಸಾಮರಸ್ಯಗಳನ್ನು ಬಿಂಬಿಸುವ ಮೂಲಕ ವಿಶೇಷ ಮನ್ನಣೆ ಪಡೆದಿದೆ. ಹೊಸ ಗಮಕಿಗಳಿಗೆ ಉತ್ತೇಜನ ನೀಡುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದ ಅವರು, ಸಾಹಿತ್ಯದ ಭಾವ ಅತ್ಯಂತ ಶ್ರಾವ್ಯವಾಗಿ ಮೈದಾಳಿರುವುದು ಗಮಕದಲ್ಲಿಯೇ. ಕವಿಯ ಕಾವ್ಯವು ಗಮಕಿಯ ಮೂಲಕ ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗುತ್ತದೆ. ಕವಿಯ ಓದು, ಸಹೃದಯನ ಓದು ಅರುವಂತೆಯೇ ಗಮಕ ಸಂಗೀತದ ಓದೂ ಇರುತ್ತದೆ. ಕಾವ್ಯಗಳನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಗಮಕಿ ಕಾಲದಿಂದ ಕಾಲಕ್ಕೆ ತನ್ನ ವಾಚನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಕನ್ನಡ ಸಾಹಿತ್ಯ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದ ಕವಿಗಳ ಕಾವ್ಯಗಳು ಗಮಕ ಕಲೆಗೆ ಸದಾ ನವ ನವೀನ್ಯತೆ ತಂದುಕೊಡುತ್ತಾ ಬಂದಿದೆ. ಕುಮಾರವ್ಯಾಸನ ಕಾವ್ಯ ಓದುವ ಸಹೃದಯನಿಗೆ ಪದ ಸಂಪತ್ತು ಹೆಚ್ಚುತ್ತದೆ. ಗಮಕ ಕಲೆಗಳಂತಹ ಕಲೆಗಳಿಂದ ಸಂಸ್ಕಾರ ವೃದ್ಧಿಯಾಗುತ್ತದೆ ಎಂದರು. ಗಮಕ ವಾಚನ ಕಾರ್ಯಕ್ರಮದಲ್ಲಿ ವಿದ್ವಾನ್ ಎಂ.ಆರ್.ಸತ್ಯನಾರಾಯಣ ಸುಶ್ರಾವ್ಯವಾಗಿ ವಾಚನ ಮಾಡಿದರು. ದೂರದರ್ಶನ ಮತ್ತು ಆಕಾಶವಾಣಿ ಕೇಂದ್ರ ನಿವೃತ್ತ ಅಧಿಕಾರಿ ಸಿ.ಎನ್.ಕೃಷ್ಣಮಾಚಾರ್ ವ್ಯಾಖ್ಯಾನ ನೀಡಿದರು.
ಸುಸ್ವರ ಟ್ರಸ್ಟ್ ಅಧ್ಯಕ್ಷ ಎ.ಆರ್.ನಾಗರಾಜನ್, ಟ್ರಸ್ಟಿ ನಾಗಪ್ರಿಯ, ಡಾ.ಎ.ಓ.ಆವಲಮೂರ್ತಿ, ಅನಿಕೇತನ ಟ್ರಸ್ಟ್ ನಟರಾಜ್, ಗೋವಿಂದರಾಜು, ಕಸಾಪ ತಾಲೂಕು ಅಧ್ಯಕ್ಷ ಶ್ರೀಕಾಂತ, ಕಾರ್ಯದರ್ಶಿ ಪ್ರಕಾಶ್, ಜ್ಯೋತಿಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಪಶು ಇಲಾಖೆ ಸೌಲತ್ತು ಸದುಪಯೋಗಿಸಿಕೊಳ್ಳಿ
ಮಾಗಡಿ: ಪಶು ಇಲಾಖೆಯಿಂದ ಸಿಗುವ ಸೌಲತ್ತು ರೈತರು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ತಿಳಿಸಿದರು.
ಅವರು ಮಾಗಡಿ ಪಶು ಇಲಾಖೆ ಅವರಣದಲ್ಲಿ 2013-14ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಮೇವಿನ ಬೇರು, ರಾಸಾಯನಿಕ ಗೊಬ್ಬರ ಹಾಗೂ ಉಪಕರಣಗಳನ್ನು ಪಲಾನುಭವಿಗಳಿಗೆ ವಿತರಿಸಿ ಮಾತನಾಡಿ, ತಾಲೂಕಿನಲ್ಲಿ ಹೈನೋದ್ಯಮ ಅಭಿವೃದ್ಧಿಯಾಗುತ್ತಿದೆ.
ರೈತರು ಸಾಕುವ ಜಾನುವಾರುಗಳಿಗೆ ಅಗತ್ಯ ಮೇವು ಪೂರೈಕೆ ಮಾಡಿಕೊಳ್ಳಲೆಂದು ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಸೌಲತ್ತುಗಳನ್ನು ನೀಡಿದ್ದು, ರೈತರು ಪ್ರಾಮಾಣಿಕವಾಗಿ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈಗಾಗಲೇ ಸುಮಾರು 25 ಮಂದಿಗೆ ಸೌಲತ್ತುಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು. ಕುಮಾರ್, ರಾಜು, ವೆಂಕಟೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

