ಬಿರುಗಾಳಿಗೆ ಬಿದ್ದ ವಿದ್ಯುತ್ ಕಂಬಗಳು
ಸೂಲಿಬೆಲೆ: ಹೊಸಕೋಟೆ ತಾಲೂಕಿನ ಬಹುತೇಕ ಕಡೆ ಸೋಮವಾರ ಭಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮರಗಳು ನೆಲ ಕಚ್ಚಿವೆ. ಮನೆಯ ಶೀಟುಗಳು ಗಾಳಿಗೆ ಹಾರಿ ಹೋಗಿವೆ.
ನಂದಗುಡಿ ಹೋಬಳಿಯ ಬಾಣಮಾಕನಹಳ್ಳಿ, ತಾವರೆಕೆರೆ, ಹೆತ್ತಕ್ಕಿ ಇನ್ನೂ ಮುಂತಾದ ಗ್ರಾಮಗಳ ಸುತ್ತಮುತ್ತ ಬೀರುಗಾಳಿ ಬೀಸಿದ್ದು, ಬಾಣಮಾಕನಹಳ್ಳಿಯಲ್ಲಿ ಮೂರು
ವಿದ್ಯುತ್ ಕಂಬಗಳು ನೆಲಕಚ್ಚಿವೆ. ಗಾಳಿ ಶುರುವಾಗುತ್ತಿದಂತೆ ಬೆದರಿದ ಜನ ಮನೆಗಳಿಗೆ ಹೋಗಿ ಸೇರಿಕೊಂಡಿದ್ದಾರೆ. ಈ ವೇಳೆ ವಿದ್ಯುತ್ಸ್ ಸ್ಥಗಿತಗೊಂಡಿದೆ. ಕೆಲ ಹೊತ್ತು ಬಿರುಗಾಳಿ ತನ್ನ ಆರ್ಭಟ ತೋರಿಸಿ ಮೂರು ವಿದ್ಯುತ್ ಕಂಬಗಳನ್ನು ಉರುಳಿಸಿದೆ. ವಿದ್ಯುತ್ ತಂತಿಗಳು ಮನೆಗಳ ಮೇಲೆ ಬಿದ್ದಿದ್ದು, ಕಂಬಗಳ ಜನವಸತಿ ಸ್ಥಳಗಳಲ್ಲಿ ಬಿದ್ದಿವೆ. ಕಂಬಗಳು ಬೀಳುವ ವೇಳೆ ವಿದ್ಯುತ್ ಸರಬರಾಜು ಇದ್ದಿದ್ದರೆ ಭಾರಿ ಅಪಾಯವಾಗುತ್ತಿತ್ತು. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಮದಲ್ಲಿ ವಿದ್ಯುತ್ ಪೂರೈಕೆಗಾಗಿ ಹಾಕಲಾಗಿರುವ ವಿದ್ಯುತ್ ಕಂಬಗಳು ಸಾಕಷ್ಟು ಶಿಥಿಲಗೊಂಡು ಕಂಬದಲ್ಲಿನ ಸಿಮೆಂಟ್ ಕಿತ್ತು ಹೋಗಿ ಕಬ್ಬಿಣದ ಕಂಬಿಗಳು ಕಾಣಿಸುತ್ತಿವೆ. ಬೀಳುವ ಸ್ಥಿತಿಯಲ್ಲಿರುವ ಕಂಬಗಳನ್ನು ಕೂಡಲೇ ಬದಲಿಸಿ ಎಂದು ಅನೇಕ ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಂಬಗಳು ಮುರಿದು ಬಿದ್ದಿವೆ. ಸದ್ಯ ಯಾವುದೇ ಅಪಾಯವಾಗಿಲ್ಲ, ಹಾಗೊಂದು ವೇಳೆ ಜನ ಸಂಚಾರವಿದ್ದಾಗ ಕಂಬ ಮುರಿದು ಬಿದ್ದು ಏನಾದರೂ ಅಪಾಯವಾಗಿದ್ದರೆ ಯಾರು ಹೊಣೆ, ಅಧಿಕಾರಗಳ ಬೇಜವಾಬ್ದಾರಿ ತನಕ್ಕೆ ಕಂಬ ಯಾವಾಗ ಬೀಳುತ್ತೋ ಎಂದು ಸದಾ ಆತಂಕದಿಂದ ಜನ ಬದುಕುವಂತಾಗಿದೆ. ಕೆಲ ಕಂಬಗಳು ಬೀಳದಂತೆ ಮರಗಳನ್ನು ಅದಕ್ಕೆ ಅಡ್ಡವಾಗಿ ಇಟ್ಟು ಕಾಪಾಡಲಾಗುತ್ತಿದೆ. ಬೆಸ್ಕಾಂ ಅಧಿಕಾರಿಗಳಿಗೆ ಇದು ಕಾಣುವುದಿಲ್ಲವೋ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರಕಲಾ ಸ್ಪರ್ಧೆ ಆಯೋಜನೆ
ರಾಮನಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂ.5ರ ಬೆಳಗ್ಗೆ 11ಕ್ಕೆ ನಗರದ ಬಾಲಕರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಪ್ರತಿ ಶಾಲೆಯಿಂದ 5 ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

