ಬೆಂಗಳೂರು ಗ್ರಾಮಾಂತರ

ಪೊಲೀಸರು ರಕ್ಷಕರಲ್ಲ ರಾಕ್ಷಸರು: ಕೃಷ್ಣಪ್ಪ

Published On :

ಆನೇಕಲ್ಲು: ಉತ್ತರ ಪ್ರದೇಶ ಬದಾಯಿ ಜಿಲ್ಲೆಯ ಶಹದಾಫ್ ಗಾಂಜ್ ನಲ್ಲಿ ಅಪ್ರಾಪ್ತ ವಯಸ್ಸಿನ ಸಹೋದರಿಯರ ಮೇಲೆ ಅತ್ಯಾಚಾರಗೈದು ನಂತರ ಮರಕ್ಕೆ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ಮನುಕುಲ ನಾಚಿ ತಲೆತಗ್ಗಿಸುವ ವಿಚಾರವಾಗಿದೆ. ದೂರು ನೀಡಲು ಹೋದವರ ಮೇಲೆ ಪೊಲೀಸರು  ಅಮಾನವೀಯವಾಗಿ ವರ್ತಿಸಿ ತಾವು ರಕ್ಷಕರಲ್ಲ ರಾಕ್ಷಸರು ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಸಾರ್ವಜನಿಕರ ಮುಂದೆ ನೇಣಿಗೇರಿಸಬೇಕೆಂದು ಪಿವಿಸಿ ಸಮತಾವಾದದ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಆಗ್ರಹಿಸಿದ್ದಾರೆ. ಅವರು ಆನೇಕಲ್ ಘಟಕ ತಾಲೂಕು ಕಚೇರಿ ಮುಂದೆ ಏರ್ಪಡಿಸಿದ್ದ ಪ್ರತಿಭಟನಾ ಜಾಥಾದಲ್ಲಿ ಮಾತನಾಡಿ ಬಡ ದಲಿತ ಹೆಣ್ಣು ಮಗಳು ಶೌಚಕ್ಕೆ ತೆರಳಿದಾಗಿ ಈ ಘಟನೆ ನಡೆದಿದ್ದು ಸರ್ಕಾರ ಹಾಗೂ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ನೀಡದ ಕಾರಣ ಈ ಬರ್ಬರ ಹತ್ಯೆಗೆ ನೇರ ಕಾರಣರಾಗಿದ್ದಾರೆ. ಸಾಮಾಜಿಕ ನ್ಯಾಯ ನೀಡಬೇಕಾದ ಸರ್ಕಾರ ಈ ಬಗ್ಗೆ ಕ್ರಮ ವಹಿಸದಿರುವುದು ಶೋಚನೀಯ. ಈ ಕೂಡಲೇ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿಗಳ ಆಡಳಿತಕ್ಕೆ ಆದೇಶ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಅವರು ಕಾನೂನು ಸುವ್ಯವಸ್ಥೆ ವಿಫಲವಾದ ಕಾರಣ ಮಾನವೀಯ ಮೌಲ್ಯಗಳ ಮರುಸ್ಥಾಪನ ಯಾಗಬೇಕಿದೆ. ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಬೇಕೆಂದೂ ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ ಕೋರಿದ್ದಾರೆ. ರಾಜ್ಯ ಮುಖಂಡರಾದ ಇಂಡ್ಲವಾಡಿ ಬಸವರಾಜು, ರಘೇಶ್, ಅಶ್ವತ್ಥ, ಕೃಷ್ಣಪ್ಪ, ರವಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.