ಬೆಂಗಳೂರು ಗ್ರಾಮಾಂತರ

ಶ್ರಮ ಇದ್ದಲ್ಲಿ ಸಾಧನೆ ಸಾಧ್ಯ: ಗುರುರಾಜ ಕರ್ಜಗಿ

Published On :

ಆನೇಕಲ್ಲು: ಯಶಸ್ಸಿನ ಹಾದಿ ತಲುಪುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ಯಶಸ್ಸನ್ನು ಬೆನ್ನಟ್ಟಿ ಸಾಧಿಸಿದ ಕೆಲವೇ ವ್ಯಕ್ತಿಗಳ ಆದರ್ಶ  ಅಧ್ಯಯನ ಮಾಡಿ ನಿಮ್ಮ ಹಾದಿ ಮತ್ತು ಗುರಿಯನ್ನು ನಿರ್ಧರಿಸಿಕೊಳ್ಳಿ ಎಂದು ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿ  ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿನ ಶಿರಡಿಸಾಯಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ 14ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಬ್ಬ ಯಶಸ್ವಿ ವ್ಯಕ್ತಿಯು ಇನ್ನಾರದೋ ಮರ್ಜಿ ಅಥವಾ ಮಾರ್ಗದರ್ಶನದಿಂದ ಗುರಿ ತಲುಪಿದ ಉದಾಹರಣೆಯಿಲ್ಲ. ಈ ಹಿನ್ನೆಲೆಯಲ್ಲಿ ಪದವೀಧರರಾದ ನೀವೇ ನಿಮ್ಮ ಗುರಿಯನ್ನು ಆಯ್ಕೆ ಮಾಡಿಕೊಂಡು ಹಿರಿಯರ ಆಸೆ ಹಾಗೂ ದೇಶದ ಒಳಿತಿಗಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮನದಟ್ಟು ಮಾಡಿದರು.
ಸಾಯಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸಾಯಿ ಲಿಯೋ ಮುತ್ತು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಾಣರು ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ. ವಿಟಿಯು ಜ್ಞಾನ ಭಂಡಾರದಿಂದ ಪದವೀಧರರು ನೂತನ ಆವಿಷ್ಕಾರಗಳನ್ನು ಮಾಡಬೇಕೆಂದರು. ಉದ್ಯೋಗ ಮತ್ತು ಸಂಬಳ ಎಂಬ ಬಂಧನದಿಂದ ಹೊರಬಂದು ಹೊಸತನ್ನು ಸಾಧಿಸುವ ಛಲ ರೂಢಿಸಿಕೊಳ್ಳಬೇಕೆಂದರು. ಉಪ ಕುಲಪತಿ ಶೇಖರಪ್ಪ, ಕಾಲೇಜು ಆಡಳಿತ ಮಂಡಳಿ ಸಿಬ್ಬಂದಿ ಅರುಣ್‌ಪಟೇಲ್, ಪ್ರಾಂಶುಪಾಲರು ಮತ್ತು ಬೋಧಕ ಸಿಬ್ಬಂದಿ ವೇದಿಕೆಯಲ್ಲಿದ್ದರು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.