ಅಮರಮ್ಮ ಪ್ರಶಸ್ತಿ ಪ್ರದಾನ ನಾಳೆ
ಬೆಳಗಾವಿ: ಶ್ರೀಮತಿ ಅಮರಮ್ಮ ಚನ್ನಬಸವಪ್ಪ ಪ್ರತಿಷ್ಠಾನದ 2012 ನೇ ಸಾಲಿನ ಪ್ರಶಸ್ತಿ 'ಎನ್ನ ನಾ ಹಾಡಿಕೊಂಡೆ' (ಬಸವಣ್ಣನವರ ಎಲ್ಲ ವಚನಗಳ ವಿಶ್ಲೇಷಣೆ) ಎಂಬ ಡಾ.ವಿದ್ಯಾಶಂಕರ ಅವರ ಕೃತಿಗೆ ದೊರಕಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಮಾನ್ವಿಯಲ್ಲಿ ಇದೇ ಜೂ. 13 ರಂದು ನಡೆಯಲಿದೆ. ರಾಜ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ.ವೀರಣ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಆಗಮಿಸಲಿದ್ದಾರೆ.2013ನೇ ಸಾಲಿನ ಕೃತಿಗಳ ಆಹ್ವಾನ: 2013 ನೇ ಸಾಲಿನ ಶ್ರೀಮತಿ ಅಮರಮ್ಮ ಚೆನ್ನಬಸವಪ್ಪ ಪ್ರತಿಷ್ಠಾನದ ಪ್ರಶಸ್ತಿಗಾಗಿ 2013 ರಲ್ಲಿ ಪ್ರಕಟವಾದ ಶರಣ ಸಾಹಿತ್ಯ ಮತ್ತು ವೈಚಾರಿಕ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಜುಲೈ 31 ರೊಳಗೆ ತಮ್ಮ ಕೃತಿಗಳ ಪ್ರತಿಯನ್ನು ಅಲ್ಲಮಪ್ರಭು ಬೆಟ್ಟದೂರು, ಅಮರಚೇತನ, ಕಲ್ಯಾಣ ನಗರ, ಕಿನ್ನಾಳ ರಸ್ತೆ ಕೊಪ್ಪಳ- 583231 ಕಳುಹಿಸಬಹುದು.. ಮಾಹಿತಿಗೆ 98440-49205 ಸಂಪರ್ಕಿಸಬಹುದು.
ಅತ್ಯಾಚಾರ ಎಸಗಿ ಕೊಲೆ
ರಾಮದುರ್ಗ: ಹಣ ಕೊಡಲು ನಿರಾಕರಿಸಿದ ಪ್ರೇಯಿಸಿಯನ್ನು ಪ್ರಿಯಕರನೇ ಅತ್ಯಾಚಾರವೆಸಗಿ ಕತ್ತು ಹಿಸುಕಿಕೊಲೆ ಮಾಡಿದ ಘಟನೆ ರಾಮದುರ್ಗ ತಾಲೂಕಿನ ಸಾಲಹಳ್ಳಿ(ಬೂದನೂರ) ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಜರುಗಿದೆ.
ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಶಿವಕ್ಕ ಹಣಮವ್ವ ಮಾದರ(40) ಎಂಬವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅದೇ ಗ್ರಾಮದ ಆರೋಪಿ ಶಿವಪ್ಪ ಅರ್ಜುನ ಪಂಚಗಾಂವಿ ವ್ಯವಸಾಯಕ್ಕೆ ಎತ್ತುಗಳನ್ನು ಖರೀದಿಸುವ ಸಲುವಾಗಿ 5 ಸಾವಿರ ಕೇಳಿದ್ದಾನೆ. ಅವಳು ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಕೊಲೆ ಮಾಡಿರುವದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಆರೋಪಿ ಶಿವಪ್ಪನನ್ನು ಕಟಕೋಳ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ಪ, ಡಿಎಸ್ಪಿ ಎಸ್.ಬಿ. ಮಾಸ್ತಮರಡಿ, ಸಿಪಿಐ ವಿನಾಯಕ ಬಡಿಗೇರ ಭೇಟಿ ನೀಡಿ ಪರಿಶೀಲನೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

