ಅವಕಾಶ ಪರಿಪೂರ್ಣ ಬಳಕೆ ಸಾಧನೆಗೆ ಮೂಲ: ಗಿರೀಶ್
ದೊಡ್ಡಬಳ್ಳಾಪುರ: ಕಲಿಯುವ ಹಕ್ಕು ಬಡವ, ಸಿರಿವಂತರೆನ್ನದೆ ಎಲ್ಲರಿಗೂ ಇದೆ. ಪರಿಪೂರ್ಣವಾಗಿ ಅವಕಾಶ ಬಳಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ಗ್ರಾಪಂ ಸದಸ್ಯ ಕೆ.ಎಸ್. ಗಿರೀಶ್ ಹೇಳಿದರು.
ತಾಲೂಕಿನ ಕನಸವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀನಿಯಸ್ ಕಂಪ್ಯೂಟರ್ ಎಜುಕೇಶನ್ ಸೊಸೈಟಿ ಆಯೋಜಿಸಿದ್ದ ಕಂಪ್ಯೂಟರ್ ಕೋರ್ಸ್‌ಗಳ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಡತನ ಯಾವತ್ತೂ ಕಲಿಕೆಗೆ ಅಡ್ಡಿಯಾಗಬಾರದು. ಭರವಸೆಗಳನ್ನು ಹುಟ್ಟುಹಾಕುವ ಶಿಕ್ಷಣ ಇಂದಿನ ಅನಿವಾರ್ಯ. ಗ್ರಾಮೀಣ ವಿದ್ಯಾರ್ಥಿಗಳ ಅಭ್ಯುದಯವೇ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರು ಮತ್ತು ಈ ವರ್ಷ 15 ವಿದ್ಯಾರ್ಥಿಗಳ ಕಂಪ್ಯೂಟರ್ ತರಬೇತಿ ಶುಲ್ಕ ಹಾಗೂ ಬಡವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ವೈಯಕ್ತಿಕವಾಗಿ ನೀಡುವ ವಾಗ್ದಾನ ಮಾಡಿದರು.
ಜೀನಿಯಸ್ ಕಂಪ್ಯೂಟರ್ ಶಿಕ್ಷಣ ಕೇಂದ್ರದ ಅಧ್ಯಕ್ಷ ಎನ್. ಗಂಗರಾಜು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ರಾಜಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಆನಂದ್, ಉಪನ್ಯಾಸಕ ಎಸ್.ಕೆ. ಹನುಮೇಗೌಡ, ಎಸ್.ಪಿ. ವೃಂದಮ್ಮ, ಕಂಪ್ಯೂಟರ್ ತರಬೇತುದಾರರಾದ ಸುಮಾ, ಮಂಜುನಾಥ್, ರತ್ನ, ಲತಾಶ್ರೀ, ಲೋಕೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

