ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿಗೆ ಬಿಬಿಎಂಪಿ ವಿಭಜನೆ

Published On :

ಕೃಷ್ಣರಾಜಪುರ: ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಬಿಎಂಪಿಯನ್ನು ಇಬ್ಭಾಗ ಮಾಡಲು ಸರ್ಕಾರ ಮುಂದಾಗಿದೆಯೇ ಹೊರತು ಸೋಲಿನ ಭೀತಿಯಿಂದಲ್ಲ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು.   ಕೆಆರ್‌ಪುರದ ಐಟಿಐ ಸ್ಟೇಷನ್‌ನಿಂದ ರಾಮಮೂರ್ತಿನಗರ ಮುಖ್ಯರಸ್ತೆಯ ಮುನಿನಂಜಪ್ಪ ಲೇಔಟ್‌ವರೆಗೆ ನಿರಂತರ ವಿದ್ಯುತ್ ಸರಬರಾಜಿಗಾಗಿ ಗ್ರೌಂಡ್ ಕೇಬಲ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.  ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸರ್ಕಾರ ಬಿಬಿಎಂಪಿಯನ್ನು ಇಬ್ಭಾಗ ಮಾಡಲು ಹೊರಟಿದೆ ಎಂದು ಬಿಜೆಪಿ ಅಪಪ್ರಚಾರ ನಡೆಸುತ್ತಿದೆ. ಬೆಂಗಳೂರು ನಗರ ದಿನೇದಿನೇ ಬೆಳವಣಿಗೆ ಹೊಂದುತ್ತಿದೆ. ಒಬ್ಬ ಆಯುಕ್ತರೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಹೆಚ್ಚಾದಂತೆ ಸಮಸ್ಯೆ ಬೇಗ ನಿವಾರಿಸಬಹುದು. ಈ ದೃಷ್ಟಿಯಿಂದ ಸರ್ಕಾರ ಬಿಬಿಎಂಪಿಯನ್ನು ಇಬ್ಭಾಗ ಮಾಡಲು ಮುಂದಾಗಿದೆ ಎಂದು ಹೇಳಿದರು.   ಕ್ಷೇತ್ರದ ಐದು ಭಾಗಗಳಲ್ಲಿ ಈ ರೀತಿಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾರ್ಯಕ್ಕೆ 6 ಕೋಟಿ ರು. ಅನುದಾನ ತರಲಾಗಿದೆ ಎಂದರು.  ಇಂದು ಚಾಲನೆ ನೀಡಿರುವ ಗ್ರೌಂಡ್ ಕೇಬಲ್‌ನಿಂದ ದಯಾನಂದ ಲೇಔಟ್, ಮುನಿನಂಜಪ್ಪ ಲೇಔಟ್, ಹೊಯ್ಸಳನಗರ, ಕೋದಂಡರಾಮರೆಡ್ಡಿ ಲೇಔಟ್, ವಿಜಿನಾಪುರ, ಕುವೆಂಪುನಗರ, ಸುಬ್ರಮಣ್ಯ ಲೇಔಟ್‌ಗಳಿಗೆ ವಿದ್ಯುತ್ ತಲುಪಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಕಡೆ ಈ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
  ಈ ಸಂದರ್ಭದಲ್ಲಿ ಕೆಆರ್ ಪುರ ಬ್ಲಾಕ್ ಾಂಗ್ರೆಸ್ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಮಾಜಿ ನಗರ ಸಭಾ ಸದಸ್ಯರಾದ ಮುನೇಗೌಡ, ಲೋಕೇಶ್, ದಾಮೋದರರಾಜು, ಅಮಾನುಲ್ಲಾ, ಎ.ಡಬ್ಲ್ಯೂ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.