ಕೆಂಕೇರಮ್ಮ ದೇಗುಲ ರಾಜಗೋಪುರ ಉದ್ಘಾಟನೆ
ಕನಕಪುರ: ಗ್ರಾಮದೇವತೆ ಕೆಂಕೇರಮ್ಮ ದೇವಾಲಯದ ರಾಜಗೋಪುರ ಉದ್ಘಾಟನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ನಡೆಯಿತು. ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮೀಜಿ, ಮರಳೇಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಹಾಗೂ ಬಿಲ್ವಪತ್ರೆ ಮಠದ ಶಿವಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ತಮ್ಮ ಕುಲದೈವ ಕೆಂಕೇರಮ್ಮ ತಾಲೂಕಿನ ಅನೇಕ ಹೋಬಳಿಗಳ ಸಾವಿರಾರು ಕುಟುಂಬಗಳ ಆರಾಧ್ಯದೈವವಾಗಿದ್ದು ಎಲ್ಲರಿಗೂ ಕೃಪೆ ನೀಡುತ್ತಿದ್ದಾಳೆ. ಕೆಂಕೇರಮ್ಮ ದೇವಿ ದೇವಾಲಯವನ್ನು ತಾಲೂಕಿನಲ್ಲಿಯೇ ಬೃಹತ್ತಾಗಿರುವಂತೆ ನಿರ್ಮಿಸಲಾಗುತ್ತಿದೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರವಿ, ಜಿಪಂ ಸದಸ್ಯ ಇಕ್ಬಾಲ್ಹುಸೇನ್, ಹೊನ್ನಿಗನಹಳ್ಳಿ ಶ್ರೀಕಂಠು,ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯದೇವ್, ಜಿಲ್ಲಾ ಉಪಾಧ್ಯಕ್ಷ ವಿ.ಶ್ರೀನಿವಾಸ್, ಮಾಜಿ ಪುರಸಭಾಧ್ಯಕ್ಷ ಆರ್.ಕೃಷ್ಣಮೂರ್ತಿ, ಬಿ.ನಾಗರಾಜು, ಆರ್.ಶ್ರೀನಿವಾಸ್, ಕೃಷ್ಣಪ್ಪ, ಎಂ.ಮಂಜುನಾಥ್, ಮಳಗಾಳು ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಮಲ್ಲೇಶ್ ಪಾಲ್ಗೊಂಡಿದ್ದರು. ವಿವಿಧ ಹವನ ಹೋಮಗಳು,ಕುಂಭಾಭಿಷೇಕ, ಪೂರ್ಣಾಹುತಿ,ಅನ್ನದಾನ ಹಾಗೂ ಪ್ರಸಿದ್ಧ ತಂಡಗಳಿಂದ ಸಂಗೀತ ರಸಮಂಜರಿ ನಡೆಯಿತು.
12ರಂದು ವಿಜಯಪುರ, 14 ರಂದು ದೇವನಹಳ್ಳಿ ಪುರಸಭಾಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ದೇವನಹಳ್ಳಿ: ದೇವನಹಳ್ಳಿ ಮತ್ತು ವಿಜಯಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ದಿನಾಂಕ ಗೊತ್ತುಪಡಿಸಲಾಗಿದೆ ಎಂದು ತಹಸೀಲ್ದಾರ್ ಡಾ.ವೆಂಕಟರಾಜು ತಿಳಿಸಿದ್ದಾರೆ. ವಿಜಯಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮಾ.12 ರಂದು ಹಾಗೂ ದೇವನಹಳ್ಳಿ ಪುರಸಭಾಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಮಾ.14 ರಂದು ಈ ಹಿಂದೆ ನಿಗದಿಯಾಗಿದ್ದ ಮೀಸಲಾತಿಯಂತೆ ನಡೆಸಲಾಗುವುದು ಎಂದು ತಹಸೀಲ್ದಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

