ವಿವಾದಕ್ಕೆ ಎಡೆಮಾಡಿದ 2 ಮತ ನಾಪತ್ತೆ
ಚನ್ನಪಟ್ಟಣ: ಗ್ರಾಪಂ ಉಪಚುನಾವಣೆ ಮತ ಏಣಿಕೆ ಕಾರ್ಯದಲ್ಲಿ ಅಧಿಕಾರಿ ವೈಫಲ್ಯದಿಂದಾಗಿ ಎರಡು ಮತಗಳು ನಾಪತ್ತೆಯಾಗುವ ಮೂಲಕ ವಿವಾದಕ್ಕೆ ಎಡೆಮಾಡಿದ ಘಟನೆ ತಾಲೂಕು ಕಚೇರಿಯಲ್ಲಿ ಬುಧವಾರ ನಡೆಯಿತು.
ತಾಲೂಕಿನ ರಾಂಪುರ ಗ್ರಾಪಂ ಸದಸ್ಯ ಸ್ಥಾನಕ್ಕೆ ಹಾಲಿ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆದಿತ್ತು. ಬುಧವಾರ ಮತ ಏಣಿಕೆ ಕಾರ್ಯ ವಿದ್ದು ತಾಲೂಕು ಕಚೇರಿಯಲ್ಲಿ ಮತ ಏಣಿಕೆ ಮಾಡಲಾಯಿತು. ಈ ಮತಗಟ್ಟೆಯಲ್ಲಿ 792 ಮತಗಳ ಚಲಾವಣೆ ಗೊಂಡಿದ್ದವಾದರೂ ಮತ ಏಣಿಕೆ ವೇಳೆ ಸಿಕ್ಕಿದ್ದು 790 ಮತಗಳು. ಇದರಿಂದಾಗಿ ಸಾಕಷ್ಟು ವಿವಾದ ಸೃಷ್ಟಿಯಾಯಿತು.
ಚುನಾವಣೆಯಲ್ಲಿ ನಿಂಗಮ್ಮ 378, ವಸಂತಮ್ಮ 373, ಬೀರಮ್ಮ 25 ಮತ ಪಡೆದಿದ್ದು 14 ಮತಗಳು ತಿರಸ್ಕೃತಗೊಂಡವು. ಚಲಾವಣೆ ಗೊಂಡ ಮತಗಳಿಗೂ ಏಣಿಕೆ ಮಾಡಿದ ಮತಗಳಿಗೂ ಸಾಕಷ್ಟು ವ್ಯತ್ಯಾಸ ವಿದ್ದರೂ ಅಧಿಕಾರಿಗಳು ನಿಂಗಮ್ಮ ವಿಜೇತ ಅಭ್ಯರ್ಥಿ ಎಂದು ಘೋಷಿಸಿದ್ದು ಪರಾಜಿತ ಅಭ್ಯರ್ಥಿಯ ಬೆಂಬಲಿಗರನ್ನು ಕೆರಳುವಂತೆ ಮಾಡಿತು.
ಅಧಿಕಾರಿಗೆ ಮುತ್ತಿಗೆ: ಮತ ಏಣಿಕೆಯಲ್ಲಿ ಲೋಪವಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ್ಞಜರ್ಯಕರ್ತರು ಮತ್ತು ಮುಖಂಡರು ಚುನಾವಣಾಧಿಕಾರಿಗೆ ದಿಗ್ಭಂದನ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ ದಾಸಪ್ಪ ಮತಪತ್ರಗಳನ್ನು ಕಳವು ಮಾಡಿದ್ದು, ಅಧಿಕಾರಿಗಳು ಸಾಕಷ್ಟು ವಂಚನೆ ಮಾಡಿದ್ದಾರೆ. ನಮಗೇ ಮತ ಚಲಾವಣೆ ಗೊಂಡಿದ್ದ ಕೆಲ ಮತಪತ್ರಗಳನ್ನು ತಿರಸ್ಕರಿಸಿದ್ದು ಅಧಿಕಾರಿಗಳ ಅನ್ಯಾಯ ದಿಂದಾಗಿ ನಮಗೆ ಸೋಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಜೆಡಿಎಸ್ ಮುಖಂಡ ರಾಂಪುರ ರಾಜಣ್ಣ, ಮಾಜಿ ಗ್ರಾ.ಪಂ ಸದಸ್ಯ ಆರ್.ಬಿ.ಸ್ವಾಮಿ, ನಾಗರಾಜು ಮತ್ತು ಗ್ರಾಮಸ್ಥರು ಮರು ಚುನಾವಣೆ ನಡೆಸ ಬೇಕು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಪಟ್ಟು ಹಿಡಿದರು.
ಮತ ಪತ್ರದಲ್ಲಾದ ಗೊಂದಲಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ನೇತೃತ್ವದಲ್ಲಿ ಚರ್ಚೆ ನಡೆಸಿ, ಕಾಣೆಯಾಗಿರುವ ಮತಗಳು ಯಾರಿಗೆ ಚಲಾವಣೆ ಗೊಂಡರು ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದ ಕಾರಣ ಫಲಿತಾಂಶ ಘೋಷಣೆ ಮಾಡುವುದಾಗಿ ತೀರ್ಮಾನಿಸಲಾಯಿತು.ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

