ಬೆಂಗಳೂರು ಗ್ರಾಮಾಂತರ

'ಕಲಾಕೇಸರಿ ಉದಯಕುಮಾರ್ ಕಲಾಸೇವೆ ಅಜರಾಮರ'

Published On :

ಆನೇಕಲ್: ಕಲಾ ಕೇಸರಿ ಉದಯಕುಮಾರ್ ಕನ್ನಡ ಚಿತ್ರರಂಗದ ಮೇರು ನಟ. ಅವರ ಅಭಿನಯ ಪ್ರೌಢಿಮೆ, ಡೈಲಾಗ್ ಡೆಲಿವರಿ ಶೈಲಿ ಮತ್ತು ಶುದ್ಧ ಭಾಷಾ ಪ್ರಯೋಗದಿಂದ ಅಭಿಮಾನಿಗಳನ್ನು ಮೋಡಿ ಮಾಡಿದ್ದರು ಎಂದು ಹಿರಿಯ ಚಿತ್ರ ನಟ ಕಲಾ ತಪಸ್ವಿ ರಾಜೇಶ್ ಹೇಳಿದರು.
ಪಟ್ಟಣದ ಪವನಸುತ ಕೇಸರಿ ಕಲಾ ಶಾಲಾ ಪ್ರತಿಷ್ಠಾನ ಉದಯಕುಮಾರ್ 81ನೆಯ ಜನ್ಮ ದಿನ ಅಂಗವಾಗಿ ಸಿದ್ಧಪಡಿಸಿದ ಕಲಾ ಕೇಸರಿ ಒಂದು ಸವಿ ನೆನಪು ಸಾಕ್ಷಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
60ರ ದಶಕದಲ್ಲಿ ರಾಜಕುಮಾರ್, ಉದಯಕುಮಾರ್ ಹಾಗೂ ಕಲ್ಯಾಣ ಕುಮಾರ್ ಕನ್ನಡ ಚಿತ್ರರಂಗದ ಆಧಾರ ಸ್ಥಂಭಗಳಾಗಿದ್ದರು. ಪೌರಾಣಿಕ, ಸಾಮಾಜಿಕ ಹಾಗೂ ಪತ್ತೇದಾರಿ ಚಿತ್ರಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದರು. ಉದಯಕುಮಾರ್ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು ಎಂದು ತಿಳಿಸಿದರು.
ನಿರ್ಮಾಪಕ ಹಾಗೂ ನಿರ್ದೇಶಕ ಕೆ.ಎಸ್‌ಎಲ್ ಸ್ವಾಮಿ ಮಾತನಾಡಿ ಉದಯಕುಮಾರ್ ಸರಳತೆ, ಸಮಯ ಪ್ರಜ್ಞೆ ಪಾತ್ರದಲ್ಲಿ ತೊಡಗಿಸಿಕೊಳ್ಳುವಿಕೆ ಇಂದಿಗೂ ಆದರ್ಶಮಯವಾಗಿದೆ. ಆಶು ಕವಿಯಾಗಿದ್ದ ಅವರು ಚಿತ್ರ ಕಥೆಯ ಜೊತೆಗೆ ವಿಶೇಷವಾದ ಹಾಡುಗಳನ್ನು ರಚಿಸಿದ್ದರು. ಸ್ವಾಭಿಮಾನಿಯಾಗಿದ್ದ ಅವರು ಸ್ವಂತಿಕೆಗೆ ಧಕ್ಕೆಯಾದಲ್ಲಿ ಯಾವುದೇ ರಾಜಿ ಕಬೂಲಿಗೂ ಮಣಿಯುತ್ತಿರಲಿಲ್ಲ ಎಂದು ಅವರ ಒಡನಾಟ ನೆನೆದರು.
ಪ್ರತಿಷ್ಠಾನದ ಅಧ್ಯಕ್ಷ ವಿಕ್ರಂ ಉದಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಾಪುರದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಬಿ. ಶಿವಣ್ಣ, ಮಾಜಿ ಸಚಿವ ಎ. ನಾರಾಯಣಸ್ವಾಮಿ, ಚಿತ್ರ ನಿರ್ದೇಶಕ ಸಿ.ವಿ. ಶಿವಶಂಕರ್, ನಾದಹಂಸ ವೆಂಕಟರಾಘವನ್, ಪತ್ರಕರ್ತ ಶ್ರೀಕೃಪ, ಶ್ರೀಹರಿ ಎಲ್. ಖೋಡೆ, ಸಾಹಿತಿ ತಾನಂ ಕುಮಾರಸ್ವಾಮಿ, ಕಜಾವೇ ರಾಜ್ಯಾಧ್ಯಕ್ಷ ಮಂಜುನಾಥ ದೇವ ಉದಯಕುಮಾರ್ ಬಗ್ಗೆ ಮಾತನಾಡಿದರು. ಎಂಡಿ ಶಶಿಧರ ಬಾಬು ವಂದಿಸಿದರು. ನೃತ್ಯಪಟು ಪಲ್ಲವಿ, ಕು. ಅನನ್ಯ ಉತ್ತಮ ಪ್ರದರ್ಶನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.