ಬೆಂಗಳೂರು ಗ್ರಾಮಾಂತರ

ಅಕ್ರಮ ಮದ್ಯ ಮಾರಾಟ: ಕಟ್ಟೆಚ್ಚರ

Published On :

ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಮದ್ಯ, ಕಳ್ಳಭಟ್ಟಿ ತಯಾರಿಕೆ, ಸರಬರಾಜು, ಮಾರಾಟ ಹಾಗೂ ಸಂಗ್ರಹಣೆಯಾಗದಂತೆ ಕಟ್ಟೆಚ್ಚರ ವಹಿಸಲು ಅಬಕಾರಿ ಇಲಾಖೆಯು ಕ್ರಿಯಾ ಯೋಜನೆ ರೂಪಿಸಿ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತೆ ಕೆ.ರೂಪಶ್ರೀ ತಿಳಿಸಿದ್ದಾರೆ.
ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಆಯುಕ್ತೆ ರೂಪಶ್ರೀ ಇದರ ಮೇಲ್ವಿಚಾರಕರಾಗಿ, ಅಬಕಾರಿ ಉಪ ಅಧೀಕ್ಷಕ ಜೆ.ದೀಪಕ್ ಉಪ ಮೇಲ್ವಿಕಾರಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು. ಸಾರ್ವಜನಿಕರು ದೂರುಗಳನ್ನು ದೂ.08113-7271059 ಹಾಗೂ ಮೊ.9449597771, 9449597772 ಸಲ್ಲಿಸಬಹುದಾಗಿದೆ.
ರಾಮನಗರ ಉಪ ವಿಭಾಗದ ಮೇಲ್ವಿಚಾರಣಾಧಿಕಾರಿಯಾಗಿ ಜಿ.ಪಿ.ನರೇಂದ್ರಕುಮಾರ್ ಕಾರ್ಯ ನಿರ್ವಹಿಸುವರು. ದೂ.08113-7274812, ಮೊ. 9449597032. ಅಬಕಾರಿ ನಿರೀಕ್ಷಕ ಕೆ.ವಿ. ಲೋಹಿತ್ ರಾಮನಗರ ಉಪವಿಭಾಗ, ದೂ.08113-7278412, ಮೊ. 9449597033.
ಅಬಕಾರಿ ವಲಯ ಹಂತದಲ್ಲಿಯೂ ಅಬಕಾರಿ ಅಕ್ರಮಗಳನ್ನು ನಿಯಂತ್ರಿಸಲು ವಲಯ ನಿಯಂತ್ರಣ ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗಳು ಇಂತಿವೆ.
ರಾಮನಗರ ವಲಯ ಕಂಟ್ರೋಲ್ ರೂಂನ ದೂ.080-27274812, ಮೇಲ್ವಿಚಾರಕರಾಗಿ ಅಬಕಾರಿ ನಿರೀಕ್ಷಕ ಎಂ.ಎಸ್. ನಾರಾಯಣ ನಾಯಕ್ ಕಾರ್ಯ ನಿರ್ವಹಿಸುವರು. ಮೊ.8050734835.
ಚನ್ನಪಟ್ಟಣ ವಲಯ ಕಂಟ್ರೋಲ್ ರೂಂ ದೂ.080-27253268, ಮೇಲ್ವಿಚಾರಕರಾಗಿ ಅಬಕಾರಿ ನಿರೀಕ್ಷಕ ನಾರಾಯಣ ಮೊ.9449597273, ಡಿ.ಸುನೀಲ್, ಅ.ಉ.ನಿ, ಕಾರ್ಯ ನಿರ್ವಹಿಸುವರು. ಮೊ.9141263785.
ಕನಕಪುರ ವಲಯ ಕಂಟ್ರೋಲ್ ರೂಂ ದೂ.080-27523865 ಮೇಲ್ವಿಚಾರಕರಾಗಿ ಅಬಕಾರಿ ನಿರೀಕ್ಷಕ ಸುರೇಶ್, ಅರುಣ್‌ಕುಮಾರ್, ಅ.ಉ.ನೀ -1, ಮೊ.ಸಂ. 9035164814, ಕೇಶವಮೂರ್ತಿ, ಅ.ಉ.ನೀ. ಕಾರ್ಯ ನಿರ್ವಹಿಸುವರು. ಮೊ.9844157027,
ಮಾಗಡಿ ವಲಯ ಕಂಟ್ರೋಲ್ ರೂಂ ದೂ.080-27745209, ಮೇಲ್ವಿಚಾರಕರಾಗಿ ಅಬಕಾರಿ ನಿರೀಕ್ಷಕ ಟಿ.ರುದ್ರಪ್ಪ ಮೊ.9449597274, ಅಬಕಾರಿ ಉಪ ನಿರೀಕ್ಷಕ-1 ಬಿ.ನಾರಾಯಣ ಮೊ.9740714046, ಅಬಕಾರಿ ಉಪ ನಿರೀಕ್ಷಕ-2 ಮೊ.9980630818 ಕಾರ್ಯ ನಿರ್ವಹಿಸುವರು.
ವಲಯ ಕಂಟ್ರೋಲ್ ರೂಂಗಳು ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯಿಂದ ಬರುವ ನಿರ್ದೇಶನಗಳನ್ನು ಪಾಲಿಸಿ ತಾಲೂಕಿಗೆ ಹೊಂದಿಕೊಂಡಿರುವ ಬೇರೆ ಜಿಲ್ಲೆಗಳ ಗಡಿಭಾಗಗಳಲ್ಲಿ ಸ್ಥಾಪನೆಯಾದ ಚೆಕ್ ಪೋಸ್ಟ್‌ಗಳಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಆಗದಂತೆ ಕಾವಲು ಕಾಯುವುದು. ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ, ಕಳ್ಳಭಟ್ಟಿ ತಯಾರಿಕೆ, ಸಂಗಹ್ರಣೆ, ಸಾಗಾಣಿಕೆ, ಮಾರಾಟ ಆಗದಂತೆ ಗಸ್ತು ಹಾಗೂ ದಾಳಿ ನಡೆಸಲಿವೆ.
ನಿಯಂತ್ರಣ ಕೊಠಡಿಯಲ್ಲಿ ದೂರು ವಹಿ ತೆರೆದು ಸಾರ್ವಜನಿಕರಿಂದ ಬರುವ ಮಾಹಿತಿಗಳನ್ನು ದಾಖಲಿಸಿ, ಕ್ರಮ ಕೈಗೊಂಡು ಕೇಂದ್ರ ನಿಯಂತ್ರಣ ಕೊಠಡಿಗೆ ತಕ್ಷಣವೇ ವರದಿ ಸಲ್ಲಿಸಬೇಕು.
ಕಾನೂನಿನನ್ವಯ ಕ್ರಮ
ವಲಯ ವ್ಯಾಪ್ತಿ ಮದ್ಯದಂಗಡಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮದ್ಯದ ದಾಸ್ತಾನು ಆಗದಂತೆ ನಿಗಾವಹಿಸಿ ಕೆ.ಎಸ್.ಬಿ.ಸಿ.ಎ.ನಿಂದ ಖರೀದಿಸಿದ ಮದ್ಯವು ಚುನಾವಣಾ ಸಮಯದಲ್ಲಿ ದುರ್ಬಳಕೆಯಾಗದಂತೆ ತಡೆಯಬೇಕು. ಅಕ್ರಮಗಳು ಕಂಡು ಬಂದಲ್ಲಿ ಕಾನೂನಿನನ್ವಯ ಕ್ರಮ ಜರುಗಿಸಬೇಕು. ಇಲಾಖೆಯ ಅಧಿಕಾರಿ ಮತ್ತು ನೌಕರರು ಚುನಾವಣೆ ಅವಧಿಯಲ್ಲಿ ಯಾವುದೇ ರಜೆ ಪಡೆಯುವಂತಿಲ್ಲ,  ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡುವಂತಿಲ್ಲ. ಮೊಬೈಲ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಯಾವುದೇ ವೇಳೆಯಲ್ಲಾದರೂ ಕರೆ ಸ್ವೀಕರಿಸಬೇಕು ಎಂದು ಆದೇಶಿಸಲಾಗಿದೆ.
ಎಚ್ಚರಿಕೆ
ಚುನಾವಣಾ ಕಾರ್ಯ ಮುಗಿಯುವವರೆಗೂ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು. ನೀಡಿರುವ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಉಪ ಆಯುಕ್ತೆ ಕೆ.ರೂಪಶ್ರೀ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.