ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ
ಚನ್ನಪಟ್ಟಣ: ಸಾಹಿತ್ಯ ರೂಪವಾಗಿ ಪ್ರೇಕ್ಷಕರ ಮನಸ್ಸನ್ನು ರಂಜಿಸುವುದೊಂದೆ ಅಲ್ಲದೆ ದೃಶ್ಯ ರೂಪದಲ್ಲಿ ಸರ್ವಜನರಿಗೂ ಉಲ್ಲಾಸಕರವಾಗಿರುವುದು ಹಾಗೂ ಜನ ಸಮುದಾಯದ ಜೀವನ ರಹಸ್ಯಗಳು, ಭಾವ ವಿಲಾಸಗಳು, ಪರಿಶ್ರಮ ಕೌಶಲಗಳು ನಾಟಕದಲ್ಲಿ ಪ್ರತಿಬಿಂಬಿತವಾಗಿರುತ್ತದೆ ಎಂದು ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಅಧ್ಯಕ್ಷ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ದಕ್ಷಯಜ್ಞ ಅಥವಾ ಪೌರಾಣಿಕ ನಾಟಕ ಪ್ರದರ್ಶನ ಅಧ್ಯಕ್ಷತೆ ವಹಿಸಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಂಗ ಕಲಾವಿದರಿಗೆ ಗೌರವಾರ್ಪಣೆ ಅರ್ಪಿಸಿ ಮಾತನಾಡಿ ನಾಟಕ ನೋಡುವವರ ಸಂಖ್ಯೆ ಹೆಚ್ಚಾದರೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷ ನಿಂಗೇಗೌಡ ಮಾತನಾಡಿದರು.
ಕಾರ್ಯದರ್ಶಿ ಟಿ.ಕೆ.ಯೋಗೀಶ್, ಟಿ.ಕೆ.ನಾಗರಾಜು, ಸಿ.ಅಜೇಯ್ ಕುಮಾರ್, ಸಿ.ವಿಶ್ವನಾಥ್, ತಾಲೂಕಿನ ಕಸಾಪ ಅಧ್ಯಕ್ಷ ಎಂ.ಶಿವಮಾದು ಮುಂತಾದವರು ಉಪಸ್ಥಿತರಿದ್ದರು. ತಾಲ್ಲೂಕು ಕಸಾಪ ವತಿಯಿಂದ (ಈಶ್ವರ) ಪಾತ್ರಧಾರಿ ಹೆಚ್.ಮಂಜುನಾಥ್, (ದಕ್ಷ ಬಹ್ಮ) ಪಾತ್ರದಲ್ಲಿ ಜಿ.ಹೆಚ್.ನಾಗರಾಜು, ಹಾಗೂ ಎಸ್.ಉಮಾಶಂಕರ್(ಭ್ರಗಮುನಿ) ಪಾತ್ರದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು.
ಜೆಡಿಎಸ್ನಿಂದ ಬಿ.ಮುನೇಗೌಡಗೆ ಟಿಕೆಟ್ ನೀಡಲು ಒತ್ತಾಯ
ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠರು ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆ ಟ್ ನೀಡಲಿ ಒಂದು ವೇಳೆ ಸಾಧ್ಯವಿಲ್ಲದಿದ್ದರೆ ಈ ಕ್ಷೇತ್ರದವರೇ ಆದ ಬಿ.ಮುನೇಗೌಡರವರಿಗೆ ಟಿಕೆಟ್ ನೀಡಲಿ ಎಂದು ತಾಲೂಕು ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪ ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ನಾಳೆ ಬೂದಿಗೆರೆಯಲ್ಲಿ ಬ್ರಹ್ಮರಥೋತ್ಸವ
ದೇವನಹಳ್ಳಿ: ತಾಲೂಕಿನ ಚನ್ನಪಾಯಪಟ್ಟಣ ಹೋಬಳಿಗೆ ಸೇರಿದ ಬೂದಿಗೆರೆಯಲ್ಲಿ ಪುರಾಣ ಪ್ರಸಿದ್ಧ ಭೂನೀಳಾ ಸಮೇತ ಶ್ರೀ ದೇಶನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ನಡೆಯಲಿದೆ ಎಂದು ದೇಗುಲದ ಆಡಳಿತ ಸಮಿತಿ ತಿಳಿಸಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಬೆಳಿಗ್ಗೆಯಿಂದಲೇ ವಿವಿಧ ಕೈಂಕರ್ಯಗಳು ನಡೆಯಲಿವೆ.
ಚಪ್ರಕಲ್ ಬಳಿ ಅಕ್ರಮ ಕುಡಿವ ನೀರಿನ ಘಟಕಕ್ಕೆ ಬೀಗಮುದ್ರೆ
ದೇವನಹಳ್ಳಿ: ದೇವನಹಳ್ಳಿ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಚಪ್ರಕಲ್ ಬಳಿಯ ವೆಂಕಟೇಶ್ವರ ಕಲ್ಯಾಣ ಮಂಟಪದ ಬಳಿ ಕಳೆದ ಒಂದು ವರ್ಷದಿಂದ ಗೆಟ್ಮೋರ್ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ಹೆಸರಿನಲ್ಲಿ ಬಿಎಸ್ಐ ಪ್ರಮಾಣ ಪತ್ರ ಪಡೆಯದೆ ಕುಡಿಯುವ ನೀರಿನ ಶುದ್ಧೀಕರಣ ಘಟಕ ತೆರೆದು ಬಾಟಲ್ಗಳಲ್ಲಿ ಮಾರಾಟ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಕೆ.ತಿಮ್ಮರಾಯುಡು ಅವರ ಘಟಕಕ್ಕೆ ಆಹಾರ ಸುರಕ್ಷತಾ ಜಿಲ್ಲಾ ಅಂಕಿತ ಅಧಿಕಾರಿಗಳ ತಂಡ ಬೀಗಮುದ್ರೆ ಹಾಕಿದೆ.
ಆಹಾರ ಸುರಕ್ಷತಾ ಇಲಾಖೆಯ ರವೀಂದ್ರ ಕಾಮತ್, ದೇವನಹಳ್ಳಿಯ ಡಿ.ಎಸ್. ನಾಗರಾಜು ಹಾಗೂ ಡಿ.ಸುಬ್ರಮಣ್ಯಂ ತನಿಖಾ ತಂಡದಲ್ಲಿದ್ದರು.
ಶಾಲಾ ಮಕ್ಕಳ ನಾಟಕೋತ್ಸವ ಉದ್ಘಾಟನೆ
ಶಿಡ್ಲಘಟ್ಟ: ನಾಟಕದಂತಹ ಪ್ರದರ್ಶನ ಕಲೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮುವುದಲ್ಲದೆ ನಮ್ಮ ಸಂಸ್ಕೃತಿ ಅರಿತಂತಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಪಟ್ಟಣದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಭವನ ಸೊಸೈಟಿ ಮತ್ತು ಮಹಿಳಾ ್ತ ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಶಾಲಾ ಮಕ್ಕಳ ನಾಟಕೋತ್ಸವದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆ ಮಕ್ಕಳು ವಿವಿಧ ರಂಗಗಳಲ್ಲಿ ಪಾಲ್ಗೊಳ್ಳಬೇಕು. ಓದಿನೊಂದಿಗೆ ವಿವಿಧ ಕಲೆಗಳನ್ನು ಕಲಿಯುವಂತಾಗಬೇಕು. ನಮ್ಮ ಜಾನಪದ ಸಂಸ್ಕೃತಿಯ ತಿಳಿವಳಿಕೆ ಮೂಡಿಸಲೆಂದು ಹೀಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದರು.
ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಪ್ರಕಾಶಕುಮಾರ್ ಮಾತನಾಡಿ ಶಾಲೆ ಮಕ್ಕಳಲ್ಲಿನ ಪ್ರತಿಭೆಗೆ ಪೂರಕವಾಗಿ ವಿವಿಧ ಕಲೆಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಮಕ್ಕಳ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು, ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಹೇಳಿದರು.
ಮುಖ್ಯ ಶಿಕ್ಷಕಿ ರಾಗಿಣಿದೇವಿ, ಶಿಕ್ಷಣ ಸಂಯೋಜಕ ಬೈರಾರೆಡ್ಡಿ, ಸಂದೀಪ್, ಶಿಕ್ಷಕ ಕಲಾಧರ್, ದೇವರಾಜ್ ಇದ್ದರು.
ಮತ ಪಟ್ಟಿಗೆ ಹೆಸರು ಸೇರಿಸಲು ಕರೆ
ಕೆಜಿಎಫ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 18 ವರ್ಷ ತುಂಬಿದ ಎಲ್ಲ ಯುವಕ ಯುವತಿಯರು ಮತ್ತು ಮತದಾನ ಗುರುತಿನ ಚೀಟಿ ಇಲ್ಲದ ನಾಗರಿಕರು ಮತ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಬೇಕು ಎಂದು ಕೆಜಿಎಫ್ ನಗರಸಭೆ, ತಾಲೂಕು ಕಚೇರಿ ಹಾಗೂ ತಾಪಂ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಗರಸಭೆ ಕಾರ್ಯಾಲಯದಿಂದ ಪ್ರಾರಂಭಗೊಂಡ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ವಿಶೇಷ ತಹಸೀಲ್ದಾರ್ ವೆಂಕಟರಾಮಯ್ಯ ಹಾಗೂ ನಗರಸಭೆ ಪೌರಾಯುಕ್ತ ವಿ.ಬಾಲಚಂದ್ರ, ಮತದಾನ ಮಾಡುವುದು ಈ ದೇಶದ ಎಲ್ಲ ಜನತೆಯ ಹಕ್ಕು. ಮತದಾನ ಪಟ್ಟಿಯಿಂದ ಕೈ ಬಿಡಲಾದ ಸಾರ್ವಜನಿಕರು ಹಾಗೂ ಕ್ಷೇತ್ರದಿಂದ ಬೇರೆಡೆಗೆ ಹೋಗಿರುವ ನಾಗರಿಕರು ತಮ್ಮ ಹೆಸರುಗಳನ್ನು ಮತ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಮುಂದಾಗಬೇಕು ಎಂದರು. ನಗರಸಭೆಯಿಂದ ಚಾಲನೆಗೊಂಡ ಜಾಗೃತಿ ಜಾಥಾ ಸಾರ್ವಜನಿಕ ಆಸ್ಪತ್ರೆ ರಸ್ತೆ, ಸೂರಜ್ಮಹಲ್ ವೃತ್ತ, ಪ್ರಿಚರ್ಡ್ರಸ್ತೆ, ಗಾಂಧಿ ವೃತ್ತ, ಗೀತಾ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಧ್ವನಿವರ್ಧಕ ಮೂಲಕ ಕ್ಷೇತ್ರದ ನಾಗರಿಕರಿಗೆ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ನಗರಸಭೆ ವ್ಯವಸ್ಥಾಪಕ ನಂಜುಂಡಸ್ವಾಮಿ, ಬೇತಮಂಗಲ ಜಲಮಂಡಳಿ ಕಾರ್ಯಪಾಲಕ ಅಭಿಯಂತರ ರಘುನಾಥಶೆಟ್ಟಿ, ಅಧಿಕಾರಿಗಳಾದ ಅಶ್ವಥ್, ಜಯರಾಮರೆಡ್ಡಿ, ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ
ಕೋಲಾರ: ನಗರದ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ತಮ್ಮ ಆತ್ಮರಕ್ಷಣೆಗಾಗಿ ಕರಾಟೆ ಕಲಿಯಲಾರಂಭಿಸಿದ್ದಾರೆ. ನಗರದ ಬ್ರೂಸ್ಲಿ ಕರಾಟೆ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಚಿತ್ರನಟ ಶ್ರೀನಿವಾಸ್ ತರಬೇತಿ ನೀಡುತ್ತಿದ್ದಾರೆ.
ಈಗಾಗಲೇ ಪ್ರೌಢಶಾಲೆಗಳ ಒಬ್ಬ ಶಿಕ್ಷಕರಿಗೆ ಕರಾಟೆ ತರಬೇತಿ ನೀಡಿದ್ದು, ಶಿಕ್ಷಣ ಇಲಾಖೆ ಸೂಚನೆಯಂತೆ ಶಾಲೆಗಳಲ್ಲಿ ಹೆಣ್ಣು ಮಕ್ಕಳು ತರಬೇತಿ ಪಡೆಯುತ್ತಿದ್ದಾರೆಂದು ಶ್ರೀನಿವಾಸ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಆತ್ಮರಕ್ಷಣೆಗಾಗಿ ಈ ತರಬೇತಿ ಅಗತ್ಯವಿದ್ದು, ವಿದ್ಯಾರ್ಥಿಗಳು ಯಾವುದೇ ಮುಜುಗರವಿಲ್ಲದೆ ತರಬೇತಿ ಪಡೆಯುವಂತೆ ಮನವಿ ಮಾಡಿದರು.
ದೈಹಿಕ ಶಿಕ್ಷಕರಿಲ್ಲದ ಶಾಲಾ ಕಾಲೇಜುಗಳಲ್ಲಿ ಕರಾಟೆ ಕಲಿಕೆಗೆ ಸ್ವಲ್ಪ ಹಿನ್ನಡೆಯಾಗಿದ್ದು, ಅದನ್ನು ಸರಿದೂಗಿಸಿಕೊಂಡು ವಾರಕ್ಕೆ ಕನಿಷ್ಠ ಮೂರು ದಿನಗಳಲ್ಲಿ ತಲಾ ಒಂದೊಂದು ಗಂಟೆಯಾದರೂ ಕರಾಟೆ ಕಲಿಕೆಗೆ ಮೀಸಲಿಡುವಂತೆ ಅಧ್ಯಾಪಕರಲ್ಲಿ ಕೋರಿದರು.
ಕಾಲೇಜಿನ ಪ್ರಾಂಶುಪಾಲ ಆಂಜಿನಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾದ ಯಶೋಧಮ್ಮ, ಸಹಾಯಕ ಪ್ರಾಧ್ಯಾಪಕ ಎಂ.ಗಂಗಾರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

