ಬೆಂಗಳೂರು ಗ್ರಾಮಾಂತರ

ಸುಗಮ ಮತದಾನಕ್ಕೆ ವಿಶೇಷ ಜಾಗೃತ ದಳ

Published On :

ಹೊಸಕೋಟೆ: ಲೋಕಸಭ ಚುನಾವಣೆ ಸಂದರ್ಭದಲ್ಲಿ ನಡೆಯಬಹದಾದ ಅಕ್ರಮಗಳನ್ನು ಪತ್ತೆ ಹಚ್ಚಲು ವಿಶೇಷ ಜಾಗೃತ ದಳಗಳ ರಚನೆಯಾಗಿದೆ ಎಂದು ಸಹಾಯಕ ಚುನಾವಣ ಅಧಿಕಾರಿ ನಟರಾಜ್ ತಿಳಿಸಿದ್ದಾರೆ.
ಅವರು ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಕವಿ ಗೋಷ್ಠಿಯಲ್ಲಿ ವಾಹನಗಳಲ್ಲಿ ಅಕ್ರಮ ಮದ್ಯ, ಹಣ, ಉಡುಗೊರೆ ಸಾಗಣೆ ಮಾಡುವುದನ್ನು ಪತ್ತೆ ಹಚ್ಚುವ ಸಲುವಾಗಿ ತಾಲೂಕಿನ ಉಪ್ಪಾರಹಳ್ಳಿ, ಬೆಂಡಿಗಾನಹಳ್ಳಿ, ಬಾಗೂರು, ಬೈಲನರಸಾಪುರ ಮತ್ತು ಕಟ್ಟಿಗೆನಹಳ್ಳಿ ಗ್ರಾಮದ ಬಳಿ 5 ವಾಹನ ತಪಾಸಣಾ ಕೇಂದ್ರವನ್ನು ಸ್ಥಾಪಿಸಿದ್ದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೊಲೀಸ್ ಅಬಕಾರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಮತ ಕೇಂದ್ರಗಳಲ್ಲಿ ಮುಕ್ತವಾದ ಮತದಾನ ಮಾಡುವ ಬಗ್ಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಲು 20 ಅಧಿಕಾರಿಗಳು, 10 ನೋಡಲ್ ಅಧಿಕಾರಿಗಳ ತಂಡ ರೂಪಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ವೀಕ್ಷಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.ತಾಲೂಕಿನಲ್ಲಿ ಒಟ್ಟು 285 ಮತಕೇಂದ್ರಗಳಿದ್ದು 189472 ಮತದಾರರಿದ್ದಾರೆ. ಪೊಲೀಸ್ ವರದಿ ಆಧಾರದ ಮೇರೆಗೆ 117 ಮತಕೇಂದ್ರಗಳನ್ನು ಅತಿ ಸೂಕ್ಷ್ಮ, 114ಸೂಕ್ಷ್ಮ, 34ಸಾಮಾನ್ಯ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.