ಬೆಂಗಳೂರು ಗ್ರಾಮಾಂತರ

ಕ್ಷುಲ್ಲಕ ಕಾರಣಕ್ಕೆ ಯೋಧನಿಂದ ಗಲಾಟೆ

Published On :

ಹಾನಗಲ್ಲ: ಸಿಆರ್‌ಪಿಎಫ್ ಯೋಧನೊಬ್ಬ ಕ್ಷುಲ್ಲಕ ಕಾರಣಕ್ಕೆ ಅಡುಗೆ ತಯಾರಕರೊಂದಿಗೆ ತಂಟೆ ತೆಗೆದ ಪರಿಣಾಮ ಹಿರೇಬಾಸೂರು ಗ್ರಾಮದ ಚಿಲುಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಗದ್ದಲವಾಗಿ, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ರಜೆ ಹಿನ್ನೆಲೆಯಲ್ಲಿ ಹಿರೇಬಾಸೂರು ಗ್ರಾಮಕ್ಕೆ ಆಗಮಿಸಿರುವ ಸಿಆರ್‌ಪಿಎಫ್ ಯೋಧ ಪ್ರಕಾಶ ನಿಂಗಪ್ಪ ಗೋಡಿ ಜಾತ್ರೆಯ ಅನ್ನಸಂತರ್ಪಣೆ ವಿಭಾಗದಲ್ಲಿ ತಕರಾರು ತೆಗೆದಿದ್ದಾನೆ. ಆಗ ಮಾತಿಗೆ ಮಾತು ಬೆಳೆದು, ಜಗಳ ನಡೆದಿದೆ. ಆಗ ಜಾತ್ರಾ ಸಮಿತಿ ಪದಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಪ್ರಕಾಶ್‌ಗೆ ಬುದ್ಧಿವಾದ ಹೇಳಿದರೂ ಪುಂಡಾಟಿಕೆ ಮುಂದುವರಿಸಿದ್ದಾನೆ. ಆಡೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ ಪ್ರಕಾಶ್ ಹಾಗೂ ಆತನ ಸಂಗಡಿಗರ ಗದ್ದಲ ನಿಲ್ಲಲಿಲ್ಲ. ಪೊಲೀಸರನ್ನೂ ಏಕವಚನದಲ್ಲಿ ನಿಂದಿಸಿ, ತಳ್ಳಾಡಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಶಿವರಾಜ್ ರೇವಣಪ್ಪ ತೋಟಗೇರ(19) ಎಂಬ ಯುವಕನೂ ಅಸ್ವಸ್ಥನಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್‌ನ ಸಂಗಡಿಗರು ಪೊಲೀಸ್ ವಾಹನದ ಗಾಲಿಗೆ ಕಲ್ಲಿಟ್ಟು, ತಡೆದಿದ್ದರಿಂದ, ಸ್ಥಳದಲ್ಲಿ ಕೆಲವು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.