'ನದಿಪಾತ್ರ ಕಾಲುವೆ ಪುನಶ್ಚೇತನಗೊಳಿಸಿ'
ನೆಲಮಂಗಲ: ನದಿಪಾತ್ರದ ಕಾಲುವೆಗಳನ್ನು ಪುನಶ್ಚೇತನಗೊಳಿಸುವಲ್ಲಿ ಪ್ರತಿಯೊಬ್ಬರು ಆಸಕ್ತಿ ತೋರಬೇಕು ಎಂದು ಅರ್ಕಾವತಿ ಕುಮದ್ವತಿ ನದಿ ಪುನಶ್ಚೇತನ ಸಮಿತಿ ನಿದೇಶಕ ಜನಾರ್ದನ್ ಕೆಸರಗದ್ದೆ ತಿಳಿಸಿದರು.
ಅವರು ಭಾನುವಾರ ಪಟ್ಟಣದ ದಾದಾಪೀರ್ ಬಡಾವಣೆಯಲ್ಲಿರುವ ನೆಮ್ಮದಿ ಸಂಸ್ಥೆಯ ಆವರಣದಲ್ಲಿ ಕುಮದ್ವತಿ, ಅರ್ಕಾವತಿ ನದಿ ಪುನಶ್ಚೇತನ ಸಮಿತಿ ಹಮ್ಮಿಕೊಂಡಿದ್ದ, ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಳೆ ನೀರಿನ ಸದ್ಬಳಕೆಯಾಗದೆ ನದಿಗಳು, ಬತ್ತು ಹೋಗುತ್ತಿವೆ. ನದಿಪಾತ್ರಗಳ ಕಾಲುವೆ ಪುನಶ್ಚೇತನವಾಗದ ಹೊರತು ನದಿಗಳಲ್ಲಿ ನೀರು ಕಾಣಲು ಸಾಧ್ಯವಿಲ್ಲ ಎಂದರು. ಕೆರೆ, ಕುಂಟೆ, ಬಾವಿ, ಗೋಕಟ್ಟೆಗಳನ್ನು ಸಂರಕ್ಷಿಸಿದ್ದ ಕಾರಣ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಕೆರೆಗಳು ಹೂಳು ತುಂಬಿ ತಟ್ಟೆಯಾಕಾರವಿರುವುದರಿಂದ ಬಿದ್ದ ಮಳೆ ನೀರು ಆವಿಯಾಗಿ ಬಹಳ ಬೇಗ ಬತ್ತಿ ಹೋಗುತ್ತಿರುವುದರಿಂದ ಅಂತರ್ಜಲ ಕುಸಿಯುತ್ತಿದೆ ಎಂದು ನೆಮ್ಮದಿ ಸಂಸ್ಥೆ ನಿರ್ದೇಶಕ ರಾಮು ಜೋಗಿಹಳ್ಳಿ ಹೇಳಿದರು. ಕುಮದ್ವತಿ ನದಿ ಪುನಶ್ಚೇತನ ಸಮಿತಿ ಅಧ್ಯಕ್ಷ ಬಾಳೇಕಾಯಿ ನಾಗರಾಜು, ಕೀರ್ತಿ ಹಾಗೂ ಹಲವಾರು ಸಂಘ ಸಂಸ್ಥೆಯವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

