ಬೆಂಗಳೂರು ಗ್ರಾಮಾಂತರ

ಜಾಗತೀಕರಣದಿಂದ ರಂಗಭೂಮಿ ನಾಶ

Published On :

ನೆಲಮಂಗಲ: ಜಾಗತೀಕರಣದಿಂದಾಗಿ  ರಂಗಭೂಮಿ ನಶಿಸುತ್ತಿದೆ. ಅದರ ಉಳಿವಿಗಾಗಿ ರಂಗಕರ್ಮಿಗಳು ಹಾಗೂ ರಂಗ ಕಲಾವಿದರು ದುಡಿಯಬೇಕು  ಎಂದು ಶ್ರೀ ಸಿದ್ದಗಂಗಾ ಕಾಲೇಜಿನ ಉಪನ್ಯಾಸಕ ಗಂಗರಾಜು ಹೇಳಿದರು.
ಅವರು ಸೋಮವಾರ ಪಟ್ಟಣದ ಸುಭಾಷ್‌ನಗರ, ವಿಜಯನಗರದ ಶ್ರೀ ಗಣಪತಿ  ಸಭಾಂಗಣದಲ್ಲಿ ಪ್ರತಿಭಾ ರಂಗದ ವತಿಯಿಂದ ಹಿರಿಯ ರಂಗಭೂಮಿ ನಿರ್ದೇಶಕ ಹಾಗೂ ಧಾರವಾಹಿ ನಟ ಬಿ.ರಾಮಯ್ಯ ಅವರ  ಮೂಗುದ್ದ ಎಂಬ ರಾಜಕೀಯ ನಾಟಕದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸರ್ಕಾರದ ವತಿಯಿಂದ ರಂಗ ಕರ್ಮಿಗಳಿಗೆ ಸಿಗಬೇಕಾದ ಸವಲತ್ತು ಹಾಗೂ ಅನುಕೂಲತೆ ಕೊಡಿಸಿ ಕೊಡುವುದಾಗಿ ತಿಳಿಸಿದರು. ರಂಗ ಕಲೆಯನ್ನು ಎಲ್ಲರೂ ಪ್ರೋತ್ಸಾಹಿಸಿದಾಗ ಮಾತ್ರ ಬೆಳೆದು ಹೆಮ್ಮರವಾಗಲು ಸಾಧ್ಯ. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
 ನಟ ಬಿ.ರಾಮಯ್ಯ  ಮಾತನಾಡಿ ಜನತೆ ಸಿನಿಮಾ ರಂಗಕ್ಕೆ ನೀಡುವ ಪ್ರಾಶಸ್ತ್ಯದ ಅರ್ಧಭಾಗ ಜೀವಂತ ಕಲೆಗಳಿಗೆ ನೀಡಿದರೆ ರಂಗ ಕರ್ಮಿ ಕಲಾವಿದರು ಅತಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿದ್ದ ಪೌರಾಣಿಕ ನಾಟಕಗಳು ಕಣ್ಮರೆಯಾಗುತ್ತಿರುವುದು ಒಂದು ದುರಂತ. ರಂಗ ಕರ್ಮಿಗಳಿಗೆ ತಮ್ಮ ಕಲಾ ಪ್ರದರ್ಶನಕ್ಕೆ ಸೂಕ್ತ ಸ್ಥಳ ಹಾಗೂ ಅವಕಾಶಗಳು ಸಿಕ್ಕರೆ ಕಲೆ ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.