ಬೆಂಗಳೂರು ಗ್ರಾಮಾಂತರ

ಅಕ್ರಮವಾಗಿ ಸಂಗ್ರಹಿಸಿದ್ದ ಕಲ್ಲು ಬಂಡೆಗಳ ವಶ

Published On :

ದೇವನಹಳ್ಳಿ: ದೇವನಹಳ್ಳಿ ತಾಲೂಕು ಸಾದಹಳ್ಳಿ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 10 ಲಕ್ಷ ರು. ಬೆಲೆ
ಬಾಳುವ ಕಲ್ಲಿನ ದಿಮ್ಮಿಗಳನ್ನು ತಹಸೀಲ್ದಾರ್ ಕೇಶವಮೂರ್ತಿ ತಮ್ಮ ಸಹ ಅಧಿಕಾರಿಗಳೊಂದಿಗೆ ಸೋಮವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಸಾದಹಳ್ಳಿ ಚೌಡನಹಳ್ಳಿ ರಸ್ತೆಯ ಬದಿಯಲ್ಲಿ ಬಂಡೆಯಿಂದ ಪಾಳಿ ಮಾಡಿ ತಂದಿಡಲಾಗಿದ್ದ 10 ರಿಂದ 15 ಅಡಿ ಉದ್ದದ ಸುಮಾರು 100 ಕ್ಕೂ ಹೆಚ್ಚು ಕಲ್ಲಿನ ದಿಮ್ಮಿಗಳಿರುವುದು ಕಂಡು ಬಂದಿದ್ದು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಯಾರೂ ವಾರಸುದಾರರು ಬಾರದೆ ಇದ್ದ ಕಾರಣದಿಂದ ಎಲ್ಲ ಕಲ್ಲುಗಳಿಗೆ ಸಂಖ್ಯೆಯನ್ನು ಗುರುತು ಮಾಡಿ ಪೊಲೀಸರ ವಷಕ್ಕೆ ಒಪ್ಪಿಸಿದ್ದಾರೆ.
ಈ ಕಲ್ಲಿನ ದಿಮ್ಮಿಗಳನ್ನು ಅನಧಿಕೃತವಾಗಿ ಕಲ್ಲಿನ ಕೆಲಸ ಮಾಡುವ ದಳ್ಳಾಳಿಗಳು  ಸರಿಯಾದ ಅಳತೆಗೆ  ತಕ್ಕಂತೆ ಯಂತ್ರಗಳಿಂದ ಕತ್ತರಿಸಿ ಬೇಡಿಕೆ ಬಂದಂತೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು ಬಂಡೆಯಲ್ಲಿ ಕೆಲಸ ಮಾಡುವುದನ್ನು ಸರ್ಕಾರ ನಿಷೇಧಿಸಿದ್ದರೂ ಕಂಡೂ ಕಾಣದಂತೆ ಕಲ್ಲಿನ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
  ರೆವಿನ್ಯೂ ಅಧಿಕಾರಿಗಳಾದ ರಾಜಪ್ಪ, ಸುದರ್ಶನ್, ಶ್ರೀನಿವಾಸ್ ಹಾಗೂ ಶ್ರೀರಾಮಪ್ಪ  ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.