ಬೆಂಗಳೂರು ಗ್ರಾಮಾಂತರ

10ಎಕರೆ ಅರಣ್ಯ ಪ್ರದೇಶ ಆಗ್ನಿಗೆ ಆಹುತಿ

Published On :

ವಿಜಯಪುರ: ಪಟ್ಟಣ ಸಮೀಪದ ಸುಮಾರು 10ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಾಹಸದಿಂದ ಬೆಂಕಿ ನಂದಿಸಲಾಯಿತು.
ಪಟ್ಟಣದಿಂದ ಕೂಗಳತೆಯ ದೂರದಲ್ಲಿರುವ ಮಂಡಿಬೆಲೆ ಗ್ರಾಮ ರಸ್ತೆಯ ಇಕ್ಕೆಲೆಯಲ್ಲಿರುವ ಸುಮಾರು 750 ಎಕರೆ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ 12ರ ಸಮಯದಲ್ಲಿ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 10 ಎಕರೆ ಪ್ರದೇಶವನ್ನು ಹರಡಿತು. ಇಲ್ಲಿ ನೀಲಗಿರಿ ಮರಗಳು ಹೆಚ್ಚಿಗೆ ಇರುವುದರಿಂದ ಸಣ್ಣ ಪುಟ್ಟ ಕುರುಚಲು ಗಿಡಗಳು ಅಗ್ನಿಗೆ ಆಹುತಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಕರೆಮಾಡಿ ಅವರೊಂದಿಗೆ ಬೆಂಕಿ ನಂದಿಸಿ ಹೆಚ್ಚಿನ ನಷ್ಟವಾಗದಂತೆ ನೋಡಿಕೊಂಡರು. ಇದೇ ಸಂದರ್ಭದಲ್ಲಿ ಉಪವಲಯಾಧಿಕಾರಿ ಎಂ.ಎಸ್. ಯೋಗೇಶ್ ಮಾತನಾಡಿ, ಅರಣ್ಯ 750 ಎಕರೆಯಷ್ಟು ವಿಸ್ತೀರ್ಣಹೊಂದಿದ್ದು ನೀಲಗಿರಿ, ಬೇವು, ಹುಣಸೆಗಳಂತಹ ಸಾಕಷ್ಟು ವನ ಸಂಪತ್ತನ್ನು ಹೊಂದಿದೆ. ಕಾಡುಹಂದಿ, ನವಿಲು, ಮೊಲಗಳಂತಹ ವನ್ಯ ಜೀವಿಗಳು ವಾಸವಾಗಿವೆ. ಕೆಲ ಕಿಡಿಗೇಡಿಗಳು ಬೇಸಿಗೆ  ಬಂತೆಂದರೆ ಬೆಂಕಿ ಹತ್ತಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ತಡೆಯಲು ಪ್ರಯತ್ನಿಸುವುದಾಗಿ ತಿಳಿಸಿದರು. ಗ್ರಾಮಸ್ಥರಾದ ಮುನಿರಾಜು ಮಾತನಾಡಿ, ರಾತ್ರಿ ವೇಳೆಯಲ್ಲಿ ಸಾಕಷ್ಟು ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ.ಇದನ್ನು ವಿರೋಧಿಸಿದರೆ ಅರಣ್ಯಕ್ಕೆ ಬೆಂಕೆ ಹತ್ತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಧಿಕಾರಿ ಕಳೆದ 4 ತಿಂಗಳಿಂದ 4 ರಿಂದ 5 ಪ್ರಕರಣಗಳನ್ನು ಹಿಡಿಯಲಾಗಿದ್ದು ಸಿಬ್ಬಂದಿಯ ಕೊರತೆ ಇದೆ ಎಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.