ಬೆಂಗಳೂರು ಗ್ರಾಮಾಂತರ

ಚರಿತ್ರಕಾರರ ಮೇಲೆ ಮಹತ್ತರ ಹೊಣೆಗಾರಿಕೆ

Published On :

ಕನಕಪುರ: ಸದೃಢವಾದ ಯುವಸಮುದಾಯ ಹಾಗೂ ದೇಶವನ್ನು ನಿರ್ಮಿಸಬೇಕಾದರೆ ನಮ್ಮ ಪೂರ್ವಜರ ಚರಿತ್ರೆಯನ್ನು ವಸ್ತು ನಿಷ್ಠವಾಗಿ ಕಟ್ಟಿಕೊಡಬೇಕಾದ ಮಹತ್ತರ ಹೊಣೆಗಾರಿಕೆ ಚರಿತ್ರಕಾರರ ಮೇಲಿದೆ ಎಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಕೆ.ಕೃಷ್ಣಪ್ಪ ಹೇಳಿದ್ದಾರೆ.
ಅವರು ಕನಕಪುರದ ರೂರಲ್ ಪದವಿ ಕಾಲೇಜಿನಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆಯೋಜಿಸಿದ್ದ ಶಾಸನ ಕಲಿಕಾ ಕಮ್ಮಟದ ಸಮಾರೋಪ ಭಾಷಣ ನೀಡಿ ಮಾತನಾಡುತ್ತಿದ್ದರು. ಪ್ರಾಂಶುಪಾಲ ಡಾ. ಶಿವಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು. ಪೂರ್ವಜರ ಚರಿತ್ರೆಯ ಅರಿವಿಲ್ಲದಿದ್ದರೆ ವರ್ತಮಾನದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಕಷ್ಟವಾಗುತ್ತದೆ, ಚರಿತ್ರೆಯನ್ನು ವಿಶಾಲವಾದ ನೆಲೆಯಲ್ಲಿ ಗ್ರಹಿಸುವ ಕಾರ್ಯವನ್ನು ಕಮ್ಮಟಗಳ ಮೂಲಕ ನೆರವೇರಿಸಬೇಕಾಗಿದೆ ಎಂದು ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿಚಾರಗೋಷ್ಠಿಗಳಲ್ಲಿ ಶಾಸನ, ವಾಸ್ತುತಜ್ಞ ಡಾ.ಎಂ.ಎನ್.ಪ್ರಭಾಕರ್ ಅವರು ಶಾಸನಗಳು ಹಾಗೂ ದೇವಾಲಯಗಳ ವಾಸ್ತುಶಿಲ್ಪ ಕುರಿತು, ಭಾರತೀಯ ಪ್ರಾಚ್ಯವಸ್ತು ಅನುಸಂಧಾನ ಪರಿಷತ್ (ಐಸಿಹೆಚ್‌ಆರ್) ಪ್ರಾದೇಶಿಕ ನಿರ್ದೇಶಕ ಡಾ.ಕೆ.ಎಸ್.ಅರುಣಿ ಅವರು ಪುರಾತತ್ವ ಮತ್ತು ಶಾಸನಗಳು ವಿಚಾರವಾಗಿ, ಪ್ರಾಧ್ಯಾಪಕ ಡಾ.ಪಾರ್ಥಸಾರಥಿ ಅವರು ಕನಕಪುರ ತಾಲೂಕಿನ ಶಾಸನಗಳ ಬಗ್ಗೆ, ಡಾ.ಗೋವಿಂದಪ್ಪ ಅವರು ಇತ್ತೀಚಿನ ಚರಿತ್ರೆಯ ರಚನೆಯಲ್ಲಿ ಶಾಸನಗಳ ಪಾತ್ರ ವಿಷಯವಾಗಿ ಉಪನ್ಯಾಸಗಳನ್ನು ನೀಡಿದರು.
ಮುಖ್ಯಅತಿಥಿಗಳಾಗಿ ಡಾ.ಮುನಿರಾಜಪ್ಪ, ಡಾ.ಭುವನೇಶ್ವರ, ಡಾ.ವೆಂಕಟೇಶ್, ಡಾ.ಶಾಂತಕುಮಾರಿ,  ಪ್ರೊ. ರಂಗನಾಯಕಮ್ಮ, ಪ್ರೊ. ಲಕ್ಷ್ಮೀನಾರಾಯಣ, ಡಾ.ಮಂಜುನಾಥ್, ಡಾ.ಶಕುಂತಲಮ್ಮ ಪಾಲ್ಗೊಂಡಿದ್ದರು. ಬಸವರಾಜು ಸ್ವಾಗತಿಸಿದರು. ಅರುಣ್‌ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.