ಬೆಂಗಳೂರು ಗ್ರಾಮಾಂತರ

ನಂದಗುಡಿ ಬಳಿ ಬೈಕ್‌ಗಳ ಡಿಕ್ಕಿ: ಸವಾರ ಸಾವು

Published On :

ಸೂಲಿಬೆಲೆ: ಇಲ್ಲಿಗೆ ಸಮೀಪದ ನಂದಗುಡಿಯಲ್ಲಿ ಎರಡು ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ಸವಾರನೊಬ್ಬ ಸಾವನ್ನಪ್ಪಿ, ಮತ್ತೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.
ಮೃತ ಸವಾರರನ್ನು ಸೂಲಿಬೆಲೆ ಹೋಬಳಿಯ ದೊಡ್ಡಅರಳಿಗೆರೆ ಗ್ರಾಮದ ನಿವಾಸಿ ಕರಗಪ್ಪ (30) ಹಾಗೂ ಗಾಯಗೊಂಡ ವ್ಯಕ್ತಿಯನ್ನು ಬೆಂಗಳೂರಿನ ಜಾವಿದ್ ಪಾಷ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸಕೋಟೆಯಿಂದ ಚಿಂತಾಮಣಿಗೆ ಹೋಗುವ ನಂದಗುಡಿ ಮಾರ್ಗದ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಚಿಂತಾಮಣಿಯತ್ತ ಹಾಗೂ ನಂದಗುಡಿಯಿಂದ ದೊಡ್ಡ ಅರಳಿಗೆರೆಯತ್ತ ಬರುತ್ತಿದ್ದ ಎರಡು ಬೈಕ್ ನಡುವೆ ಡಿಕ್ಕಿ ನಡೆದಿದ್ದು, ಈ ವೇಳೆ  ಗಂಭೀರ ಗಾಯಗೊಂಡ ದೊಡ್ಡಅರಳಿಗೆರೆ ಗ್ರಾಮದ ನಿವಾಸಿ ಕರಗಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡ ಜಾವಿದ್ ಪಾಷ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ  ದಾಖಲಿಸಲಾಗಿದೆ. ಘಟನೆ ಸ್ಥಳಕ್ಕೆ ಪಿಎಸ್‌ಐ  ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಕ್ಕೇಗೌಡನದೊಡ್ಡಿ ಬಳಿ ಅಪಘಾತ: ವ್ಯಕ್ತಿ ಸಾವು
ಕ.ಪ್ರ.ವಾರ್ತೆ ಟಿ ಕನಕಪುರ  ಟಿ ಮೇ 5
ಕನಕಪುರ ತಾಲೂಕು ಜಕ್ಕೇಗೌಡನದೊಡ್ಡಿ ಬಳಿ ಪ್ಯಾಸೆಂಜರ್ ಆಟೋ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ವಿರೂಪಾಕ್ಷಿಪುರ ಹೋಬಳಿ ಭೂಹಳ್ಳಿಯ ಗೋವಿಂದರಾಜು (32)ಎಂದು ಗುರುತಿಸಲಾಗಿದೆ.
ಕನಕಪುರ ಕಡೆಯಿಂದ ಸಾತನೂರು ಕಡೆ ತೆರಳುತ್ತಿದ್ದ ಪ್ರಯಾಣಿಗರನ್ನು ಸಾಗಿಸುವ ಟಾಟಾ ಮ್ಯಾಜಿಕ್ ಆಟೋ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿಹೊಡೆದ ಪರಿಣಾಮ ವಾಹನ ಚಾಲಕ ಗೋವಿಂದರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸಾತನೂರು ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.