ಬೆಂಗಳೂರು ಗ್ರಾಮಾಂತರ

ಕನ್ನಡಿಗರಿಗೆ ಗಾಯದ ಮೇಲೆ ಬರೆ ಎಳೆದಂತೆ

Published On :

ಮಾಗಡಿ: ಕನ್ನಡ ಕುರಿತ ಸುಪ್ರೀಂ ಕೋರ್ಟಿನ ತೀರ್ಪು ಕನ್ನಡಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು,ಈ ತೀರ್ಪು ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗಂ. ದಯಾನಂದ್ ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಕನ್ನಡ ಭಾಷೆ ಬಳಸುವವರ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ 100 ವರ್ಷಗಳೂ ತುಂಬಿದ ಸಂತಸದಲ್ಲಿದ್ದಾಗ ಸುರ್ಪೀಕೋರ್ಟಿನ ತೀರ್ಪು ಕನ್ನಡಗರಲ್ಲಿ ಆತಂಕ ಮೂಡಿಸಿದೆ ಎಂದರು.   ವಾದ ಮಂಡಿಸುವವರು ಸಮರ್ಥವಾಗಿ ಮಂಡನೆ ಮಾಡಿಲ್ಲದ ಕಾರಣ ನ್ಯಾಯಾಲಯಕ್ಕೆ ಮತ್ತೊಮ್ಮೆ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಮೊರೆ ಹೋಗಬೇಕೆಂದು ದಯಾನಂದ್ ತಿಳಿಸಿದ್ದಾರೆ.
ಬಿ.ಶ್ರೀನಿವಾಸ್ ಜೆಡಿಎಸ್ ಅಭ್ಯರ್ಥಿ
ದೇವನಹಳ್ಳಿ: ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ಸ್ಥಾನಕ್ಕೆ ಮೇ 25 ರಂದು ಚುನಾವಣೆ ನಡೆಯಲಿದ್ದು ದೇವನಹಳ್ಳಿ ತಾಲೂಕಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇರಿಗೇನಹಳ್ಳಿ ಶ್ರೀನಿವಾಸ್ ರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಳಿಸಿದ್ದಾರೆ.    ನಾಮಪತ್ರ  ಮೇ 10 ರಿಂದ 18ರವರೆಗೂ ಸಲ್ಲಿಸಬಹುದಾಗಿದೆ.
ಕೃಷಿ ಪ್ರೇರಣಾ ಶಿಬಿರ
ದೊಡ್ಡಬಳ್ಳಾಪುರ: ಕೃಷಿ ಮತ್ತು ಕೃಷಿ ಸಂಬಂಧಿತ ಉದ್ಯಮಶೀಲತೆಯಲ್ಲಿ ಆಸಕ್ತಿ ಇರುವ ವಿದ್ಯಾವಂತ ಯುವಜನರಿಗಾಗಿ ಒಂದು ದಿನದ ವಿಶೇಷ ಪ್ರೇರಣಾ ಶಿಬಿರ ಆಯೋಜಿಸಲಾಗಿದೆ. ಸಾವಯವ ಕೃಷಿ, ಹೈನುಗಾರಿಕೆ, ಆಹಾರ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟದ ಹೊಸ ತಂತ್ರಗಳ ಕುರಿತು ಮಾಹಿತಿಯನ್ನು ಶಿಬಿರದಲ್ಲಿ ನೀಡಲಾಗುವುದು. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಆಸಕ್ತರು 9611562121 ಸಂಪರ್ಕಿಸಿ.
ಪ್ರವೇಶಕ್ಕೆ ಅರ್ಜಿ
ಕನಕಪುರ: ತ್ರಿವಿಧ ದಾಸೋಹಗಳಿಗೆ ಹೆಸರಾಗಿರುವ ಕನಕಪುರದ ದೇಗುಲಮಠದಲ್ಲಿ ನಿರ್ವಾಣಸ್ವಾಮಿ ಅನಾಥಾಲಯ, ಶ್ರೀ ನಿರ್ವಾಣ ಸ್ವಾಮಿ ಅನಾಥಶಿಶು ಸಂರಕ್ಷಣಾಲಯ (ಕಾಟೇಜ್) ಹಾಗೂ ಹುಣಸನಹಳ್ಳಿಯ  ನಿರ್ವಾಣಸ್ವಾಮಿ ವಿದ್ಯಾರ್ಥಿ ನಿಲಯಗಳಿಗೆ ಪ್ರಾಥಮಿಕ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಸೇರಿ ಅಭ್ಯಾಸಮಾಡಲು ಉಚಿತ ಊಟ, ವಸತಿ, ವಿದ್ಯಾಭ್ಯಾಸ ಹಾಗೂ ಇತರೆ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಅನಾಥ, ಬಡವ ಹಾಗೂ ನಿರ್ಗತಿಕ ಮಕ್ಕಳಿಗೆ ಒದಗಿಸಲಾಗುತ್ತದೆ. ಪ್ರವೇಶವನ್ನು ಬಯಸುವ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ದೇಗುಲಮಠದ ಕಾರ್ಯಾಲಯದಿಂದ ಪಡೆದು, ಮೇ 31ರೊಳಗಾಗಿ ಸಲ್ಲಿಸಲುಕೋರಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.