ದೇವರಾಜ ಅರಸ್ ಕಾಲೇಜಿಗೆ ಶೇ.80 ಫಲಿತಾಂಶ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀದೇವರಾಜ ಅರಸ್ ಪದವಿ ಪೂರ್ವ ಕಾಲೇಜಿಗೆ ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಶೇ.80ರಷ್ಟು ಫಲಿತಾಂಶ ದೊರೆತಿರುವುದು ಬೆಂ.ಗ್ರಾ.ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆಯಾಗಿದೆ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದ 25 ಮತ್ತು ವಾಣಿಜ್ಯ ವಿಭಾಗದ 7 ಮಂದಿ ಸೇರಿದಂತೆ 38 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ 192 ಮತ್ತು ವಾಣಿಜ್ಯ ವಿಭಾಗದ 104 ವಿದ್ಯಾರ್ಥಿಗಳು ಸೇರಿದಂತೆ 296 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದರು. ಆ ಪೈಕಿ 158 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 28 ವಿದ್ಯಾರ್ಥಿಗಳು ದ್ವಿತೀಯ ಮತ್ತು 11 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಶ್ವಾಸ್ ಪ್ರಥಮ: ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಚ್.ಎನ್. ವಿಶ್ವಾಸ್ 574 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಭೌತಶಾಸ್ತ್ರದಲ್ಲಿ ವಿಶ್ವಾಸ್ ಮತ್ತು ಎ.ಆರ್. ಮಂಜುನಾಥ್ 100ಕ್ಕೆ 100 ಅಂಕ ಗಳಿಸಿದ್ದಾರೆ. ಅದೇ ರೀತಿ ಗಣಿತದಲ್ಲಿ ಎ.ಆರ್. ಮಂಜುನಾಥ್, ಟಿ.ಜಿ. ಸುಪ್ರೀತ್, ಕಂಪ್ಯೂಟರ್ ವಿಜ್ಞಾನದಲ್ಲಿ ಎಸ್. ಸಹನ, ಯು. ವಿನುತ, ಡಿ.ಸಿ. ರೂಪೇಶ್, ಎಲ್. ಮದನ್ಕುಮಾರ್, ವ್ಯವಹಾರ ಅಧ್ಯಯನದಲ್ಲಿ ಎಸ್. ಸಹನ, ಲೆಕ್ಕಶಾಸ್ತ್ರದಲ್ಲಿ ಸ್ನೇಹರಶ್ಮಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
38 ಉನ್ನತ ಶ್ರೇಣಿ: ಕಾಲೇಜಿನ ಎಚ್.ಎನ್. ವಿಶ್ವಾಸ್(574), ಎಸ್. ಭವ್ಯ(571), ಎ.ಆರ್. ಮಂಜುನಾಥ್ (569), ಎಸ್. ಸಹನ(568), ಕೆ.ಎಲ್. ಮನೋಜ್(564), ವಿ. ವೇದಶ್ರೀ(555), ಯು. ವಿನುತ(554), ಎಂ. ಮಾನಸ(552), ಚೇತನ್(551), ಕೆ. ಸುಹಾಸ್(547), ಎ. ವಂದನಾ(547), ವಿಶಾಲ್ ಸಿಂಗ್(545), ಆರ್. ಸಾಗರ್(542), ಎನ್. ವಿಜಯಲಕ್ಷ್ಮಿ(540), ಎಂ. ಪವನ್(537), ಕೆ.ಎಲ್. ನಾಗೇಂದ್ರ(536), ಡಿ.ಸಿ. ರೂಪೇಶ್(535), ಆರ್. ರಕ್ಷಿತ್ ಗೌಡ(532), ಎಂ.ಎನ್. ಶ್ರೀಕಾಂತ್(531), ಮನ್ಸೂರ್ಪಾಷಾ(528), ಕೆ. ಮದನ್ಕುಮಾರ್(528), ಎಸ್. ಸ್ವಾತಿ(525), ಎಂ.ಎನ್. ರಚನಾ(524), ಪಿ.ವಿ. ಚೇತನ(523), ನಿಖತ್ಉನ್ನೀಸಾ(520), ಎಂ. ಪುನೀತ್(518), ಪಿ. ಮೇಘನಾ(517), ಎನ್. ವಿಜಯಕುಮಾರ್(515), ಕೆ.ಬಿ. ಕಾವ್ಯ(514), ಅಕ್ಷತಾ ವಿ. ಕುಲಕರ್ಣಿ(513), ಎಸ್. ಮಧು(511) ಮತ್ತು ಎನ್. ರಾಕೇಶ್(510) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

