ಬೆಂಗಳೂರು ಗ್ರಾಮಾಂತರ

ಸದ್ದಿಲ್ಲದೆ ಟೋಲ್ ಪಾವತಿಸಿದ ಚಾಲಕರು

Published On :

ದೇವನಹಳ್ಳಿ: ನವಯುಗ ಟೋಲ್ ಸಂಸ್ಥೆಯವರು ಶುಲ್ಕವನ್ನು ಹಿಂದಿನ ದರಕ್ಕಿಂತ ನಾಲ್ಕುಪಟ್ಟು ಏರಿಕೆ ಮಾಡಿದ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಟೋಲ್ ಪ್ಲಾಜಾ ಬಳಿ ಬಿಗಿ ಪೊಲೀಸ್ ಭದ್ರತೆಯಿದ್ದು ಗುರುವಾರ ಯಾವುದೇ ಪ್ರತಿಭಟನೆಗಳು ನಡೆಯಲಿಲ್ಲ. ಎಲ್ಲ ವಾಹನಗಳ ಚಾಲಕರು ಸದ್ದಿಲ್ಲದೆ ಸುಂಕ ಪಾವತಿಸಿ ಹೋಗುತ್ತಿದ್ದರು, ಕಳೆದ ನಾಲ್ಕು ದಿನಗಳಿಂದ ಈ ಸ್ಥಳದಲ್ಲಿ ಏನು ನಡೆದಿಲ್ಲವೇನೋ ಎನ್ನುವಂತಿತ್ತು. ಶುಕ್ರವಾರ ರಾಜ್ಯ ಲಾರಿ ಮಾಲೀಕರ ಸಂಘದವರು ಇದೇ ಸ್ಥಳದಲ್ಲಿ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
ಇಂದು ವೀರಬ್ರಹ್ಮೇಂದ್ರಸ್ವಾಮಿಗಳ ಆರಾಧನೆ
ದೊಡ್ಡಬಳ್ಳಾಪುರ: ತಾಲೂಕು ವಿಶ್ವಕರ್ಮ ಮಹಾ ಮಂಡಲ ಮತ್ತು ಗುಂಡಮಗೆರೆಯ ವಿಶ್ವಕರ್ಮ ಸಮಾಜದ ನೇತೃತ್ವದಲ್ಲಿ ಪ್ರತಿವರ್ಷದಂತೆ ಶ್ರೀಮದ್ವಿರಾಟ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿಗಳ 34ನೇ ವರ್ಷದ ಆರಾಧನಾ ಮಹೋತ್ಸವ ಮೇ 9ರಂದು ನಡೆಯಲಿದೆ.



ಪೇಟೆಕೆರೆ ಉಳಿವಿಗೆ ಹೋರಾಟಕ್ಕೆ ಸಿದ್ಧ: ರವಿಕೃಷ್ಣಾರೆಡ್ಡಿ ಆರೋಪ
ಕನಕಪುರ: ಪಟ್ಟಣದ ಪೇಟೆಕೆರೆ ಅಂಗಳದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದೆಂಬ ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಸರ್ಕಾರವೇ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ರವಿಕೃಷ್ಣಾರೆಡ್ಡಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನಕಪುರದ ಪೇಟೆಕೆರೆ ಅಭಿವೃದ್ಧಿ ಪಡಿಸಬೇಕೆಂದು ಸರ್ಕಾರದ ಆದೇಶವಿದೆ, ಆದರೆ ಇಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ, ನ್ಯಾಯಾಧೀಶರ ವಸತಿ ನಿಲಯ ಮೊದಲಾದ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಸರ್ಕಾರದ ಆಸ್ತಿ ಕಾಪಾಡಬೇಕಾದವರೇ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರು. ಪೇಟೆಕೆರೆ ಉಳಿಸಿಕೊಳ್ಳಲು ಸಾರ್ವಜನಿಕ ಹೋರಾಟಕ್ಕೆ ಸಿದ್ಧರಿರುವುದಾಗಿ ತಿಳಿಸಿದರು. ರೈತಸಂಘದ ಆನಮಾನಹಳ್ಳಿ ನಾಗರಾಜು, ಮಧುಗೌಡ, ರವಿಗೌಡ, ಗೋವಿಂದಪ್ಪ,ದೇವೇಗೌಡ, ವೆಂಕಟರಮಣಪ್ಪ, ವಸಂತರಾಜೇಅರಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.