ಬೆಂಗಳೂರು ಗ್ರಾಮಾಂತರ

ಭಾರತೀಯ ವಿದ್ಯಾಪೀಠ ಶಾಲೆಗೆ ಶೇ.95 ಫಲಿತಾಂಶ

Published On :

ರಾಮನಗರ: ಇಲ್ಲಿನ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆಗೆ ಶೇ.95ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 74 ವಿದ್ಯಾರ್ಥಿಗಳ ಪೈಕಿ 6 ಉನ್ನತ ದರ್ಜೆ, 30 ಪ್ರಥಮ ದರ್ಜೆ, 17 ದ್ವಿತೀಯ ದರ್ಜೆ ಹಾಗೂ 17 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆರ್.ತೇಜಸ್ವಿನಿ 578(ಶೇ.92.48), ಪಿ.ಲಾವಣ್ಯ 577(ಶೇ.98.32), ಆರ್.ಎಚ್.ಸಹನಾ 547(ಶೇ.88), ಸಿ.ರಾಧಿಕಾ ಮತ್ತು ಎಸ್.ವರಲಕ್ಷ್ಮಿ 544(ಶೇ.87.04) ಹಾಗೂ ಆರ್.ವಿದ್ಯಾಶ್ರೀ 533(ಶೇ.85.60) ಅಂಕಗಳನ್ನು ಗಳಿಸಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಐಜೂರಿನ ಹನುಮಂತೇಗೌಡರ ಪುತ್ರಿ ಆರ್.ಎಚ್.ಸಹನಾ ಪ್ರಥಮ ಭಾಷೆ ಸಂಸ್ಕೃತದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ. ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯ ಎಸ್.ಪಿ.ಹೊದಲೂರು ಅಭಿನಂದಿಸಿದ್ದಾರೆ.


ಜೂನ್‌ನಲ್ಲಿ ಪೂರಕ ಪರೀಕ್ಷೆ
ಎಸ್‌ಎಸ್‌ಎಲ್‌ಸಿ. ಪೂರಕ ಪರೀಕ್ಷೆಯು ಜೂನ್ ಮಾಹೆಯಲ್ಲಿ ನಡೆಯಲಿದೆ. ಜೂ.16-ಗಣಿತ, 17-ಪ್ರಥಮ ಭಾಷೆ, 18-ವಿಜ್ಞಾನ, 19-ಇಂಗ್ಲಿಷ್, 20- ತೃತೀಯ ಭಾಷೆ, 21ರಂದು ಭಾರತೀಯ ಅರ್ಥಶಾಸ್ತ್ರ, 23-ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿವೆ. ಪರೀಕ್ಷಾ ಶುಲ್ಕ ಪಾವತಿಸಲು ಮೇ 26 ಕೊನೆಯ ದಿನವಾಗಿದ್ದು, ಒಂದು ವಿಷಯಕ್ಕೆ ರು.200, ಎರಡಕ್ಕೆ ರು.250, ಮೂರು ಅದಕ್ಕಿಂತ ಹೆಚ್ಚು ವಿಷಯಗಳಿಗೆ ರು.315 ಆಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಹ್ಲಾದಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.