ಬೆಂಗಳೂರು ಗ್ರಾಮಾಂತರ

ಎಸ್ಸೆಸ್ಸೆಲ್ಸಿ: ರಾಮನಗರ 17ನೇ ಸ್ಥಾನ

Published On :

ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮೇ 13
2014ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಶೇಕಡ 85.22ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 17ನೇ ಸ್ಥಾನ ಗಳಿಸಿದೆ.
ಪರೀಕ್ಷೆ ಬರೆದಿದ್ದ ಒಟ್ಟು 14128 ವಿದ್ಯಾರ್ಥಿಗಳ ಪೈಕಿ 12040 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಮಾಗಡಿಯ 2867ರಲ್ಲಿ 2565 ವಿದ್ಯಾರ್ಥಿಗಳು(ಶೇ.89.47), ಕನಕಪುರದ 4398ರಲ್ಲಿ 3933 ವಿದ್ಯಾರ್ಥಿಗಳು(ಶೇ.89.43), ಚನ್ನಪಟ್ಟಣದ 3203ರಲ್ಲಿ 2590 ವಿದ್ಯಾರ್ಥಿಗಳು(ಶೇ.80.86), ರಾಮನಗರದ 3660ರಲ್ಲಿ 2952(ಶೇ.80.65) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಜಿಲ್ಲೆಯ 85 ಸರ್ಕಾರಿ, 50 ಅನುದಾನಿತ ಹಾಗೂ 61 ಅನುದಾನ ರಹಿತ ಶಾಲೆಗಳು ಶೇ.80ಕ್ಕಿಂತಲೂ ಹೆಚ್ಚು ಫಲಿತಾಂಶ ಪಡೆದಿವೆ. 30 ಸರ್ಕಾರಿ ಶಾಲೆಗಳು ಶೇ.60 ರಿಂದ 80ರಷ್ಟು, 14 ಅನುದಾನಿತ ಹಾಗೂ 7 ಅನುದಾನರಹಿತ ಶಾಲೆಗಳು ಶೇ.40ರಿಂದ 60ರಷ್ಟು ಫಲಿತಾಂಶ ಪಡೆದಿದ್ದು, 7 ಸರ್ಕಾರಿ, 4 ಅನುದಾನಿತ ಹಾಗೂ 3 ಅನುದಾನ ರಹಿತ ಶಾಲೆಗಳು ಶೇ.0 ರಿಂದ 40 ಫಲಿತಾಂಶವನ್ನಷ್ಟೆ ಪಡೆದಿವೆ.
ಕನಕಪುರ ತಾಲೂಕಿನ ಜೈನ್ ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ವರ್ಣಿತಾ 607 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಅದೇ ಶಾಲೆಯ ಎಂ.ವಿ.ಅನನ್ಯ 602 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಶಿಲ್ಪಶ್ರೀ ಹಾಗೂ ಪ್ರೀತಂ ತಲಾ 601 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಶೇ.100 ಫಲಿತಾಂಶ: ಜಿಲ್ಲೆಯ 41 ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದಿದ್ದು, ಈ ಪೈಕಿ ಮಾಗಡಿಯ 14, ಚನ್ನಪಟ್ಟಣದ 3, ರಾಮನಗರದ 13 ಹಾಗೂ ಕನಕಪುರದ 11 ಶಾಲೆಗಳು ಸೇರಿವೆ.
ಮಾಗಡಿ ತಾಲೂಕು: ಬಾಚೇನಹಟ್ಟಿ, ಹರ್ತಿಗೇಟ್, ಮಣಿಗನಹಳ್ಳಿ, ಮಾದಿಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ವಸತಿ ಶಾಲೆ ಹುಲಿಕಟ್ಟೆ, ಕಿತ್ತೂರು ರಾಣಿ ವಸತಿ ಶಾಲೆ, ಗುರುಕುಲ ಪ್ರೌಢಶಾಲೆ ಕುದೂರು, ಸರಸ್ವತಿ ವಿದ್ಯಾಮಂದಿರ, ರಂಗನಾಥ ಪ್ರೌಢಶಾಲೆ ತಿಪ್ಪಸಂದ್ರಗೇಟ್, ಸೆಂಟ್‌ಮೈಕಲ್ ಆಂಗ್ಲಶಾಲೆ, ವಾಸವಿ ಪ್ರೌಢಶಾಲೆ, ಕೆಂಪೇಗೌಡ ಪ್ರೌಢಶಾಲೆ, ಮಹಂತೇಶ್ವರ ಪ್ರೌಢಶಾಲೆ ಕುದೂರು, ಮಾರುತಿ ಪ್ರೌಢಶಾಲೆ.
ಚನ್ನಪಟ್ಟಣ ತಾಲೂಕು: ಸರ್ಕಾರಿ ಪ್ರೌಢಶಾಲೆ ಹೊನ್ನನಾಯಕಹಳ್ಳಿ, ಸೆಂಟ್‌ಆನ್ಸ್ ಪ್ರೌಢಶಾಲೆ, ನಿವೇದಿತಾ ಪ್ರೌಢಶಾಲೆ.
ರಾಮನಗರ ತಾಲೂಕು: ಕ್ಯಾಸಾಪುರ ಸರ್ಕಾರಿ ಪ್ರೌಢಶಾಲೆ, ಐಜೂರು ಹಾಗೂ ಆನಮಾನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ರಾಮನಗರದ ಮುಸ್ಲಿಂ ವಸತಿ ಶಾಲೆ, ದ್ಯಾವರಸೇಗೌಡನದೊಡ್ಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಿಡದಿಯ ವಿಶ್ವಸಾಯಿ ಪ್ರೌಢಶಾಲೆ, ಬಿ.ಜಿ.ಎಸ್. ಅಂಧರ ಶಾಲೆ, ನ್ಯೂಮಿಲ್ಲೇನಿಯಂ ಪ್ರೌಢಶಾಲೆ, ಶರತ್ ಮೆಮೋರಿಯಲ್ ಪ್ರೌಢಶಾಲೆ, ಪಂಡಿತ್ ನೆಹರು ಪ್ರೌಢಶಾಲೆ, ಸುವಿಶೇಷ ಪ್ರೌಢಶಾಲೆ, ಅವ್ವೇರಹಳ್ಳಿ ನೊಬೆಲ್ ಪ್ರೌಢಶಾಲೆ ಹಾಗೂ ಜಾಲಮಂಗಲದ ಗಿರಿಯಪ್ಪ ಮೆಮೋರಿಯಲ್ ಪ್ರೌಢಶಾಲೆ.





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.