ಬೆಂಗಳೂರು ಗ್ರಾಮಾಂತರ

ಮಟ್ಕಾ ವಿರುದ್ಧ ಪೊಲೀಸ್ ಕಾರ್ಯಾಚರಣೆ

Published On :

ದೊಡ್ಡಬಳ್ಳಾಪುರ: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಸ್ಲಾಂಪುರ ಬಡಾವಣೆಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರ ಕುರಿತು ಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿರುವ ದೊಡ್ಡಬಳ್ಳಾಪುರ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಇಸ್ಲಾಂಪುರದ ಮೆಹಬೂಬ್(50) ಬಿನ್ ಅಮೀರ್‌ಖಾನ್, ಮುತ್ತೂರಿನ ಆಂಜಿನಪ್ಪ(59) ಬಿನ್ ಪಚ್ಚಪ್ಪ, ದರ್ಗಾಜೋಗಿಹಳ್ಳಿಯ ರಾಮಚಂದ್ರಪ್ಪ(60) ಬಿನ್ ವೆಂಕಟರಾಮಯ್ಯ, ಸುರೇಶ್(35) ಬಿನ್ ರಾಮಯ್ಯ, ತ್ಯಾಗರಾಜನಗರದ ರಾಜೇಶ್ (45) ಬಿನ್ ನಾಗೇಶ್ವರರಾವ್, ಶಾಂತಿನಗರದ ಆಟೋಬಾಬು(35) ಬಿನ್ ಸೈಯದ್, ಬ್ರಾಹ್ಮಣರ ಬೀದಿಯ ಸತ್ಯನಾರಾಯಣ(54) ಬಿನ್ ಈರಯ್ಯ, ಮುತ್ತೂರಿನ ಚಂದ್ರಶೇಖರ್(32) ಬಿನ್ ಆಂಜಿನಪ್ಪ, ಕುಮಾರ(31) ಬಿನ್ ರಂಗಣ್ಣ, ಇಸ್ಲಾಂಪುರದ ಇಮ್ರಾನ್(30) ಬಿನ್ ಭಕ್ಷು, ಶಾಂತಿನಗರದ ಬಿ.ಎಸ್.ರಾಜ(62) ಬಿನ್ ಸೂರಪ್ಪ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಒಟ್ಟು 4325 ರು.ನಗದು, ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದೊಡ್ಡಬಳ್ಳಾಪುರ ನಗರ ಮಟ್ಕಾ ನಿಗ್ರಹ ತಂಡದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಟಿ.ಕೋನಪ್ಪರೆಡ್ಡಿ, ಸಿಪಿಐ ವಿ.ಶಿವಾರೆಡ್ಡಿ, ನಗರ ಠಾಣೆ ಎಸ್‌ಐ ಕೃಷ್ಣಕುಮಾರ್, ಗ್ರಾಮಾಂತರ ಠಾಣೆ ಎಸ್‌ಐ ನವೀನ್‌ಕುಮಾರ್, ಎಎಸ್‌ಐ ರಾಮನರಸಿಂಹಯ್ಯ, ಸಿಬ್ಬಂದಿ ನರಸಿಂಹಮೂರ್ತಿ, ವೆಂಕಟೇಶ್, ಗಿರೀಶ್, ಸಿದ್ದರಾಜು, ಸಂತೋಷ್ ಕಮ್ಮಾರ್, ನಾರಾಯಣಸ್ವಾಮಿ, ರಾಜಣ್ಣ, ಮಂಜುನಾಥ್, ಸುರೇಶ್, ಸಿದ್ದಗಂಗಾ ಮತ್ತಿತರರು ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲು ಶ್ರಮಿಸಿದ್ದಾರೆ ಎಂದು ಪೊಲೀಸ್ ಪ್ರಕರಣೆ ತಿಳಿಸಿದೆ.
ಅಪರಾಧ ವಿರುದ್ಧ ಹದ್ದಿನ ಕಣ್ಣು: ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಸ್ವರೂಪದ ಅಪರಾಧ ಪ್ರಕರಣಗಳ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಸ್ವರೂಪದ ಅಪರಾಧವಾದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿವೈಎಸ್ಪಿ ಕೋನಪ್ಪರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು, ವಸೂಲಿ ದಂಧೆ, ಟ್ರಾಫಿಕ್ ಸಮಸ್ಯೆ ಸೇರಿದಂತೆ ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.