ಕುಮಾರಸ್ವಾಮಿ ಕುತಂತ್ರಕ್ಕೆ ಬಚ್ಚೇಗೌಡ ಬಲಿ?
ಸೂಲಿಬೆಲೆ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲೆಂದೆ ಕಡೇ ಕ್ಷಣದಲ್ಲಿ ಕುಮಾರಸ್ವಾಮಿಯವರನ್ನು ಇಳಿಸಿದ್ದಾರೆಂದು ಬಚ್ಚೇಗೌಡರು ಬಹಿರಂಗ ಭಾಷಣದಲ್ಲಿ ಮತ ಯಾಚನೆ ವೇಳೆ ಹೇಳಿದ್ದು ಕಡೆಗೂ ನಿಜವಾಯಿತು ಎಂಬ ಮಾತುಗಳು ಹೊಸಕೋಟೆ ಕ್ಷೇತ್ರಾದ್ಯಂತ ಜನರ ಬಾಯಿಯಲ್ಲಿ ಹರಿದಾಡುತ್ತಿವೆ.
ತಮ್ಮ ನಾಯಕ ಬಚ್ಚೇಗೌಡರು ಸೋತಿದಕ್ಕೆ ಜೆಡಿಎಸ್ ಕಾರಣ. ಲೋಕಸಭೆಗೆ ಸ್ವರ್ಧಿಸುವ ಮನಸ್ಸಿದ್ದರೆ ರಾಮನಗರದಲ್ಲಿ ಸ್ವರ್ಧಿಸಬಹುದಿತ್ತು. ಕಾರ್ಯಕರ್ತರ ಒತ್ತಾಯದ ಮೇಲೆ ಸ್ವರ್ಧಿಸುತ್ತಿದ್ದೇನೆ ಎಂದು ಜನರ ಕಿವಿಯ ಮೇಲೆ ಹೂ ಇಟ್ಟ ಕುಮಾರಸ್ವಾಮಿ, ಕಾರ್ಯಕರ್ತರು ಇಚ್ಛೆ ಪಟ್ಟೆ ಚಿಕ್ಕಬಳ್ಳಾಪುರಕ್ಕೆ ನಿಲ್ಲಿ ಎಂದಿದ್ದರೆ ಅದ್ಯಾಕೆ ಗೆಲ್ಲಿಸದೇ ಮೂರನೇ ಸ್ಥಾನಕ್ಕೆ ದೂಡಿದರು. ಅಷ್ಟೋ, ಇಷ್ಟೋ ತಮ್ಮಗಿದ್ದ ವರ್ಚಸ್ಸು ಹಾಳು ಮಾಡಿಕೊಂಡ ಕುಮಾರಸ್ವಾಮಿ ಬಚ್ಚೇಗೌಡರನ್ನು ಸೋಲಿಸುವ ಮುಖಾಂತರ ತಮಗೆ ಎದುರಾದವರು ಉಳಿಯಬಾರದು ಎಂದು ತೋರಿಸಿದ್ದಾರೆ. ದೇವೇಗೌಡರ ಗರಡಿಯಲ್ಲಿದ್ದಾಗಲೇ ಅವರ ರಾಜಕಾರಣವನ್ನು ಅರಿತಿದ್ದ ಬಚ್ಚೇಗೌಡರು ತಮ್ಮ ಮತ ಯಾಚನೆ ವೇಳೆಯಲ್ಲಿ ತಮ್ಮನ್ನು ಸೋಲಿಸಲೆಂದೇ ಕುಮಾರಸ್ವಾಮಿ ಬಂದಿದ್ದಾರೆ ಎಂಬ ನೇರ ಆರೋಪ ಈಗ ನಿಜವಾಗಿದೆ.
ಪೂರ್ಣ ಬಹುಮಾತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯಿಂದ ಬಚ್ಚೇಗೌಡರು ಗೆದಿದ್ದರೆ ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿಗೆ ಕಾರಣವಾಗುತಿತ್ತು. ಬಚ್ಚೇಗೌಡರಿಗೆ ದಕ್ಕಬೇಕಾದ ಮತಗಳನ್ನು ತಾವು ಸೆಳೆದು ಮೊಯ್ಲಿ ಗೆಲವಿಗೆ ಕುಮಾರಸ್ವಾಮಿ ಕಾರಣವಾದರು. ಮತ್ತೇ ಮೊಯ್ಲಿ ಗೆದ್ದಿದ್ದಾರೆ. ಮಂತ್ರಿಯಾದಾಗಲೇ ಕ್ಷೇತ್ರಕ್ಕೆ ಏನು ಮಾಡಲಾಗದ ಮೊಯ್ಲಿ ಈಗ ಬಿಜೆಪಿ ಅಧಿಕಾರದಲ್ಲಿ ಏನು ಮಾಡಲು ಸಾಧ್ಯ? ಇದಕ್ಕೆಲ್ಲ ಕುಮಾರಸ್ವಾಮಿ ಕಾರಣ ಎಂದು ಜನ ಕೋಪ ತಾಪ ಪ್ರದರ್ಶನ ಮಾಡುತ್ತಿದ್ದಾರೆ.
ಎಲ್ಲಿ ಎಷ್ಟು : ಗೆಲ್ಲುವ ಕುದುರೆ ಎಂದೇ ಬಿಂಬಿತವಾಗಿದ್ದ ಬಚ್ಚೇಗೌಡರಿಗೆ ಬಾಗೇಪಲ್ಲಿ, ಗೌರಿಬಿದನೂರು, ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮತ ಬಂದಿಲ್ಲ. ಯಲಹಂಕ-44033, ಹೊಸಕೋಟೆ-12866,ದೊಡ್ಡಬಳ್ಳಾಪುರ-6212 ಬಿಜೆಪಿಗೆ ಲೀಡ್ ಬಂದಿದೆ.
ಹೊಸಕೋಟೆಯಲ್ಲಿ ಜೆಡಿಎಸ್ಗೆ ಅಸ್ತಿತ್ವ ಇರಲಿಲ್ಲ. ಈ ಬಾರಿ ಕುಮಾರಸ್ವಾಮಿ ಸ್ವರ್ಧಿಸಿದರೂ ಎಂದು ಮಾಲೂರು ಜೆಡಿಎಸ್ ಶಾಸಕ ಮಂಜುನಾಥ ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದ ಕಾರಣ 15455 ಮತಗಳು ಜೆಡಿಎಸ್ ಪಾಲಾದವು. ಇದು ಕೂಡ ಬಿಜೆಪಿಗೆ ಎಡವಟ್ಟಾಯಿತು. ಬಹುಮುಖ್ಯವಾಗಿ ತಾನೂ ಬೆಳೆಸಿದ ವ್ಯಕ್ತಿಗಳು, ಕುಮಾರಸ್ವಾಮಿ ಅವರೇ ಬಚ್ಚೇಗೌಡರ ಸೋಲಿಗೆ ಕಾರಣವಾಗಿದ್ದು ದುರಂತ ಎಂಬ ಮಾತು ಕೇಳಿ ಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

