ಬೆಂಗಳೂರು ಗ್ರಾಮಾಂತರ

ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಇಂದು

Published On :

ಮಳವಳ್ಳಿ: ಮೇ 18ರಂದು ನಡೆಯಲಿರುವ ಬ್ರಹ್ಮ ರಥೋತ್ಸವಕ್ಕೆ ಚೋಳರ ಕಾಲದ ಮಾರೇಹಳ್ಳಿ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲ ಸಜ್ಜಾಗಿದೆ. ಪಟ್ಟಣದ ಹೊರವಲಯದ ಮಾರೇಹಳ್ಳಿಯಲ್ಲಿ ದೇವಸ್ಥಾನವನ್ನು ಕ್ರಿ.ಶ 950 ರಿಂದ 1012 ರ ಅವಧಿಯಲ್ಲಿ ಚೋಳರು ನಿಮಿಸಿದ್ದಾರೆ.
ಕುಜ ದೋಷ ನಿವಾರಕ: ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಕುಜ ಮತ್ತು ಶನಿ ದೋಷ ನಿವಾರಕನೆಂದು ಬಿಂಬಿತವಾಗಿದೆ. ತೇತ್ರಾಯುಗದಲ್ಲಿ ಶ್ರೀ ರಾಮನು ಈ ಭಾಗದಲ್ಲಿ ಸಂಚರಿಸಿರುವ ಐತಿಹ್ಯವಿದೆ. ಇಲ್ಲಿ ಮಂಟಪಗಳು, ವೀರಗಲ್ಲು ಮತ್ತು ಮಾಸ್ತಿಗಲ್ಲು ಪುರಾವೆಗಳು ದೊರೆತಿದ್ದು ಸರಿಯಾದ ನಿರ್ವಹಣೆಯಿಲ್ಲಿದೆ ನಶಿಸುತ್ತಿವೆ. ಪಾರಂಪರಿಕ ಇತಿಹಾಸವುಳ್ಳ ಈ ದೇವಸ್ಥಾನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲ್ಲದೆ ಪಕ್ಕದ ತಮಿಳು ನಾಡು, ಆಂಧ್ರ, ಕೇರಳ ಹಾಗೂ ವಿದೇಶಗಳಿಂದಲೂ ಭಕ್ತರಿದ್ದಾರೆ. ಕಳೆದ ಮೇ 9ರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರಂಭವಾದ ಮಂಟಪೋತ್ಸವ ನಡೆಯಲಿದೆ.


ಎಂ. ಶೆಟ್ಟಹಳ್ಳಿ ಗ್ರಾಮದಲ್ಲಿ ಬುದ್ಧ ಪೂರ್ಣಿಮೆ ಆಚರಣೆ


ಮಳವಳ್ಳಿ: ತಾಲೂಕಿನ ಎಂ. ಶೆಟ್ಟಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಬುದ್ದ ಪೂರ್ಣಿಮೆ ಆಚರಿಸಲಾಯಿತು. ಅಂಬೇಡ್ಕರ್ ಮತ್ತು ಗೌತಮ ಬುದ್ಧ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಪತ್ರ ಬರಹಗಾರ ಸಿದ್ದರಾಜು ಮಾತನಾಡಿ, ಗೌತಮ ಬುದ್ದರು ಶಾಂತಿ ಪ್ರೀಯರಾಗಿದ್ದು, ಎಲ್ಲರಿಗೂ  ಒಳ್ಳೆಯದನ್ನು  ಬಯಸಿದವರು,  ಜೀವನದಲ್ಲಿ ಹಣವೇ ಮುಖ್ಯವಲ್ಲ ಪ್ರೀತಿ ವಿಶ್ವಾಸ ಬಹಳ ಮುಖ್ಯವಾದದ್ದು ಎಂದು ಸಾರಿಹೇಳಿದ್ದಾರೆ, ಆದ್ದರಿಂದ ಪ್ರತಿಯೊಬ್ಬರು  ಅಂಬೇಡ್ಕರ್ ಮತ್ತು ಗೌತಮ ಬುದ್ಧ  ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಘು, ಆನಂದ, ಸಿದ್ದರಾಜು,ಬಸವ, ಸುನೀಲ್, ನವಿನ್, ಹರ್ಷಿತ್, ರವಿ, ಶಿವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.