ಬೆಂಗಳೂರು ಗ್ರಾಮಾಂತರ

ವಿದ್ಯುತ್ ವ್ಯತ್ಯಯ ಇಂದು, ನಾಳೆ

Published On :

ಮಂಡ್ಯ: 220 ಕೆ.ವಿ ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರದ 100 ಒಗಿಂ ಪವರ್ ಪರಿವರ್ತಕದ ತೈಲ ಶುದ್ಧೀಕರಣ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮೇ 18 ಮತ್ತು 19 ರವರೆಗೆ ವಿದ್ಯುತ್ ವಿತರಣಾ ಕೇಂದ್ರಗಳಗೆ ಒಳಪಡುವ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮಂಡ್ಯ ವಿದ್ಯುತ್ ವಿತರಣಾ ಕೇಂದ್ರ, ಬಸರಾಳು ವಿದ್ಯುತ್ ವಿತರಣಾ ಕೇಂದ್ರ, ಚಿಕ್ಕ ಮಂಡ್ಯ ವಿದ್ಯುತತ್ವಿತರಣಾ ಕೇಂದ್ರ, ಹಂಪಾಪುರ ವಿದ್ಯುತತ್ವಿತರಣಾ ಕೇಂದ್ರ ಮತ್ತು  ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರ. ವಿದ್ಯುತ್ ವ್ಯತ್ಯಯವಾಗುವ ನಗರ ಪ್ರದೇಶಗಳು - ಸುಭಾಷ್ ನಗರ, ಆಶೋಕ ನಗರ, ವಿವಿ ರೋಡ್, ಹೊಸಹಳ್ಳಿ, ವಿನಾಯಕ ಬಡಾವಣೆ, ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಸುಂಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕು ಎಂದು ಅಭಿಯಂತರರುತಿಳಿಸಿದ್ದಾರೆ.


ಪೈಪ್ ಲೈನ್ ದುರಸ್ತಿಗೆ ಆಗ್ರಹಿಸಿ ಪ್ರದರ್ಶನ


ಭಾರತೀನಗರ: ಸಮೀಪದ ಕೂಳಗೆರೆ ಗ್ರಾಮದಲ್ಲಿ ಕೀಡಿಗೆಡಿಗಳು ಏತ ನೀರವಾರಿ ಪೈಪ್ ಲೈನ್ ಜಖಂಗೊಳಿಸಿದ್ದು, ಅದನ್ನು ದುರಸ್ತಿ ಪಡಿಸಬೇಕೆಂದು ಆಗ್ರಹಿಸಿ ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಅಣೆಕಟ್ಟೆ ಬಳಿ ಇರುವ ಕಾವೇರಿ ನೀರಾವರಿ ನಿಗಮ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಕೂಳಗೆರೆ ಗ್ರಾಮದಿಂದ ಆಗಮಿಸಿದ್ದ ಪ್ರತಿಭಟನಾಕಾರರು ನಿಗಮದ ಅಧಿಕಾರಿಗಳನ್ನು ಒಳಗೆ ಕೂಡಿ ಹಾಕಿ ಕಚೇರಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪೈಪ್‌ಲೈನ್ ದುರಸ್ತಿ ಪಡಿಸುವಲ್ಲಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುತಿದ್ದಾರೆಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಕೆ.ಎಲ್. ಯೋಗಾನಂದ, ದೇಶಿಗೌಡ, ವೆಂಕಟೇಶ್, ಜಗದೀಶ್, ಸಿದ್ದೇಗೌಡ, ಉಮೇಶ್, ಸತೀಶ್, ಪಾಪಣ್ಣ, ಶಿವಮಾಧು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.