ಬೆಂಗಳೂರು ಗ್ರಾಮಾಂತರ

'ಬುದ್ಧ ತತ್ವಗಳು ವಿಜ್ಞಾನಕ್ಕೆ ಪೂರಕ'

Published On :

ಕನ್ನಡ ಪ್ರಭವಾರ್ತೆ,ಮಾಲೂರು.ಮೇ.18
ಕಾರಣ-ಪರಿಣಾಮದ ತತ್ವಗಳೇ ವಿಜ್ಞಾನದ ಮೂಲ ತತ್ವಗಳು ಎಂದು ಎರಡೂವರೆ ಸಾವಿರ ವರ್ಷಗಳ ಹಿಂದಯೇ ಸಾರಿದ್ದ ಭಗವಾನ್ ಬುದ್ಧರ ತತ್ವಗಳು ಇಂದಿಗೂ ವಿಜ್ಞಾನಕ್ಕೆ ಪೂರಕವಾಗಿದೆ ಎಂದು ಉತ್ತರ ಪ್ರದೇಶದ ಮಾತಾಜಿ ಭುಕ್ಕುನಿ ಧರ್ಮನಯನಾಜಿ ಹೇಳಿದರು.
ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬೆಂಗಳೂರಿನ ಹೆಚ್.ಎ.ಎಲ್.ಬುದ್ಧ ಪ್ರತಿಷ್ಠಾನ ಮತ್ತು ಭಾರತೀಯ ಬೌದ್ಧ ಮಹಾಸಭಾ ಮತ್ತು ಸ್ಥಳೀಯ ದಲಿತ ಸಂಘರ್ಷ(ಅಂಬೇಡ್ಕರ್‌ವಾದ)ಸಹಯೋಗದಲ್ಲಿ ಭಾನುವಾರ ನಡೆದ 2448 ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಮಾನವರು ಅತಿಶ್ರಮ ಕೆಲಸಗಳಿಂದ ಮುಕ್ತವಾಗಿ ಜೀವನವನ್ನು ಸುಖಮಯ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಸಮಪಾಲು-ಸಮಬಾಳು ದೊರಕಬೇಕಾದದ್ದು ಪ್ರಕೃತಿಯ ನಿಯಮ ಎಂದು ಸಾರಿದ ತಥಾಗತ ಬುದ್ಧರ ಭೋದನೆಗಳು ಮಾನವ ಕುಲದ ಅಮೂಲ್ಯ ರತ್ನಗಳು. ಬುದ್ದ ನಡಿಗೆ ನಮ್ಮ ನಡಿಗೆಯಾಗಬೇಕಾದರೆ ನಾವೂ ಅಜ್ಞಾನದಿಂದ ಜ್ಞಾನ, ವಿಜ್ಞಾನ-ತಂತ್ರಜ್ಞಾನದ ಕಡೆ ಸಾಗಬೇಕಾಗಿದೆ ಎಂದರು.
ಹೆಚ್‌ಎಎಲ್ ಕಂಪನಿ ಮಾನ್ಯೇಜರ್ ಮಲ್ಲಿಕಾರ್ಜುನ ಬಲ್ಕಿ ಮಾತನಾಡಿ, ಸಮಾಜದ ಎಳ್ಗೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬುದ್ಧ ಜಂಯತಿಯನ್ನು ರಾಜ್ಯಾದ್ಯಂತ ಪ್ರತಿ ಗ್ರಾಮದಲ್ಲೂ ಆಚರಿಸಲಾಗುತ್ತಿದೆ ಎಂದರು.
ಚಿಂತಕ ಪ್ರೊ. ಕೆ. ಎನ್. ದಾಸ್ ಉಪನ್ಯಾಸ ನೀಡಿದರು. ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ದಸಂಸ(ಅಂಬೇಡ್ಕರ್‌ವಾದ)ತಾಲೂಕು ಸಂಚಾಲಕ ಎಟ್ಟುಕೋಡಿ ವೆಂಕಟೇಶ್, ಜಿಲ್ಲಾಖಜಾಂಚಿ ಲಕ್ಕೂರು  ವೆಂಕಟೇಶ್, ಪರಮನಹಳ್ಳಿ ಚಿನ್ನಸ್ವಾಮಿ, ಬೌಧ್ಧ ಪ್ರತಿಷ್ಠಾನದ ಎಂ. ಪಾಪಣ್ಣ, ವಿಜಯಕುಮಾರ್, ಅಬ್ಬೇನಹಳ್ಳಿ ನಾಗರಾಜ್, ರಾಜೇನಹಳ್ಳಿ ಅಂಬರೀಷ್, ನಂಬಿಗಾನಹಳ್ಳಿ ನಾರಾಯಣಸ್ವಾಮಿ, ತೂರ್ನಹಳ್ಳಿ ಮುನಿರಾಜು, ಹೆಚ್‌ಎಎಲ್.ಕಂಪನಿ ಮ್ಯಾನೇಜರ್ ಸತ್ಯಶೀಲನ್, ಮು.ತಿಮ್ಮಯ್ಯ, ಹೆಚ್.ಹನುಮಪ್ಪ,ನಾರಾಯಣ್, ಸೋಮಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.