ಬೆಂಗಳೂರು ಗ್ರಾಮಾಂತರ

ರಾಮಯ್ಯ, ಬಗಿನಗೆರೆ ಕುರಿತು ಪುಸ್ತಕ ಹೊರಬರಲಿ

Published On :

ಮಾಗಡಿ: ಶಿಕ್ಷಣ ತಜ್ಞ ಟಿ.ಪಿ. ರಾಮಯ್ಯ, ಗಾಂಧಿವಾದಿ ಬಗಿನಗೆರೆ ನಾರಾಯಣಪ್ಪ ಅವರ ಕುರಿತಾದ ಪರಿಚಯ ಪುಸ್ತಕವನ್ನು ಹೊರತಂದು ಇಂದಿನ ತಲೆಮಾರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ.ದಯಾನಂದ್ ಹೇಳಿದರು.
ಅವರು ತಾಲೂಕಿನ ತಿಪ್ಪಸಂದ್ರದಲ್ಲಿ ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್  ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಣ ತಜ್ಞ, ಗಾಂಧಿವಾದಿ ಟಿ.ಪಿ.ರಾಮಯ್ಯ ಸಂಸ್ಮರಣೆ  ಮತ್ತು ಕನ್ನಡ ಗೀತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಟಿ.ಪಿ. ರಾಮಯ್ಯ ಬದುಕಿರುವವರೆವಿಗೂ  ತಮ್ಮ ಬಟ್ಟೆಯನ್ನು ತಾವೇ ನೇಯ್ಗೆ ಮಾಡಿಕೊಂಡು ತೊಡುತ್ತಿದ್ದರು. ಕಾಲ್ನೆಡೆಗೆಯಲ್ಲಿಯೇ ಬಗಿನಗೆರೆ ನಾರಾಯಣಪ್ಪ ಗಾಂಧಿ ಪುಸ್ತಕಗಳನ್ನು ಶಾಲೆಗಳಿಗೆ ಉಚಿತವಾಗಿ ನೀಡುತ್ತಿದ್ದರು. ಇಂತಹ ಸರಳ ಸಜ್ಜನಿಕೆ ವ್ಯಕ್ತಿತ್ವ ಉಳ್ಳವರ ಕುರಿತು  ಪುಸ್ತಕವನ್ನು ಹೊರ ತರುವ ಮೂಲಕ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅನಿವಾರ್ಯತೆಯಿದೆ ಎಂದರು.     ನಿವೃತ್ತ  ಪ್ರಾಂಶುಪಾಲ ಸಂಪತ್  ಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾರ್ಥ ಬಿಟ್ಟು, ಗಾಂಧೀಜಿ ಕರೆಕೊಟ್ಟ ಮಾತಿನಂತೆ ಸರ್ವೋದಯದ ಪರಿಕಲ್ಪನೆ ತಮ್ಮ ಉಸಿರಾಗಿಸಿಕೊಂಡಿದ್ದ ಟಿ.ಪಿ.ರಾಮಯ್ಯ ಮತ್ತು ಬಗಿನಗೆರೆ ನಾರಾಯಣಪ್ಪ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸುವ ಸಂಸ್ಮರಣೆ ಕಾರ್ಯಕ್ರಮವನ್ನು ತಾ.ಕಸಾಪ ಆಯೋಜಿಸಿದ್ದು ಎಲ್ಲರಿಗೂ ಸಂತಸ ತಂದಿದೆ ಎಂದರು. ಶಿಕ್ಷಣದ ಹೆಸರಿನಲ್ಲಿ ವ್ಯಾಪಾರೀಕರಣ ನಡೆಯುತ್ತಿರುವ ಇಂದಿನ ದಿನಗಳಲ್ಲಿ  ಸಮಾಜ ಸೇವಕ ಶಿಕ್ಷಣ ತಜ್ಞ ಟಿ.ಪಿ. ರಾಮಯ್ಯ ಅವರ ಸ್ಮರಣೆ ಮಾಡಲೇಬೇಕು. 1952 ರಲ್ಲಿ ತಿಪ್ಪಸಂದ್ರದಲ್ಲಿ  ಹೈಸ್ಕೂಲ್ ಪ್ರಾರಂಭಿಸಲು ಇಲಾಖೆಗೆ ಕಟ್ಟಬೇಕಾದ ಹಣ ಹೊಂದಿಸಲು  ತಮ್ಮ ಮನೆಯಲ್ಲಿನ ದೇವರ ಹುಂಡಿ ಹಣವನ್ನು ತಂದು ಇಲಾಖೆ ಕಟ್ಟಿ ಶಾಲೆ ಪ್ರಾರಂಭಕ್ಕೆ ರಾಮಯ್ಯ ಕಾರಣರಾದರು ಎಂದು ನಿವೃತ್ತ ಶಿಕ್ಷಕ ಪಿ. ನಾಗರಾಜ್ ಸ್ಮರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.