ಸಂಸದ ಪ್ರತಾಪ ಸಿಂಹಗೆ ಮೈಸೂರು ಸಿಂಹ ಬಿರುದು
ರಾಮನಗರ : ಹದಿನೇಳು ವರ್ಷ ಆಳಿದ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಎನಿಸಿಕೊಂಡರು. ಅದೇ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿರುವ ಖ್ಯಾತ ಪತ್ರಕರ್ತ ಪ್ರತಾಪ ಸಿಂಹ ಅವರಿಗೆ ರಾಮನಗರದ ಅಭಿಮಾನಿಗಳು ಮೈಸೂರು ಸಿಂಹ ಎಂದು ಬಿರುದಿತ್ತಿದ್ದಾರೆ. ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಅಳವಡಿಸಿದ್ದ ಪ್ರಚಾರ ಸಾಮಗ್ರಿಗಳ ಪೈಕಿ ಪ್ರತಾಪ ಸಿಂಹ ಅವರನ್ನು ಮೈಸೂರು ಸಿಂಹ ಎಂದು ಬಿಂಬಿಸಿದ್ದ ಕೆಲ ಫ್ಲೆಕ್ಸ್ಗಳು ಅಲ್ಲಲ್ಲಿ ರಾರಾಜಿಸುತ್ತಿದ್ದವು. ರಾಮನಗರ ಗೆಳೆಯರ ಬಳಗದ ಹೆಸರಿನಲ್ಲಿ ಈ ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ನರೇಂದ್ರ ಮೋದಿ ಅವರೊಟ್ಟಿಗೆ ಪ್ರತಾಪ ಸಿಂಹ ಅವರಿಗೂ ಶುಭಾಶಯ ಕೋರಲಾಗಿತ್ತು. ಪ್ರತಾಪ ಸಿಂಹ ಭಾವಚಿತ್ರದ ಮೇಲೆ ಘರ್ಜಿಸುತ್ತಿರುವ ಸಿಂಹದ ತಲೆಯಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

