ಕ.ಪ್ರ.ವಾರ್ತೆ, ಬೆಂಗಳೂರು, ಆ. 28-
ಶಿವಾಜಿನಗರದಲ್ಲಿರುವ ಸೇಂಟ್ ಮೇರಿ ಬೆಸಲಿಕಾ ಚರ್ಚ್ನ ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮ ಗುರುವಾರ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ನಗರದ ಕೆಲವು ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ.
ಸಂಚಾರ ನಿಷೇಧ ರಸ್ತೆಗಳು
- ಜ್ಯೋತಿ ಕೆಫೆ ವೃತ್ತದಿಂದ ರಸಲ್ ಮಾರ್ಕೆಟ್
- ಬ್ರಾಡ್ವೇ ರಸ್ತೆಯಲ್ಲಿ ರಸಲ್ ಮಾರುಕಟ್ಟೆ ಕಡೆಗೆ
-ಧರ್ಮರಾಜ ಕೋಯಿಲ್ ರಸ್ತೆಯಿಂದ ಓಪಿಎಚ್, ರಸಲ್ ಮಾರುಕಟ್ಟೆ ಕಡೆಗೆ, ತಾ ವೃತ್ತ
-ಬಿ.ಆರ್.ವಿ. ಜಂಕ್ಷನ್ನಿಂದ ಶಿವಾಜಿನಗರದ ಬಸ್ ನಿಲ್ದಾಣದ ಕಡೆಗೆ(ಬಿಎಂಟಿಸಿ ಬಸ್ ಸೇರಿ)
-ಬಾಳೇಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ
ವಾಹನ ನಿಲುಗಡೆ ನಿಷೇಧ
- ರಸಲ್ ಮಾರ್ಕೆಟ್ ಸುತ್ತಮುತ್ತ, ಬ್ರಾಡ್ವೇ ರಸ್ತೆ, ಮೀನಾಕ್ಷಿ ಕೋಯಿಲ್ ರಸ್ತೆ, ಸೆಂಟ್ರಲ್ ರಸ್ತೆ, ಶಿವಾಜಿ ರಸ್ತೆ, ಬಾಳೇಕುಂದ್ರಿಯಿಂದ ಚಂದ್ರಿಕಾ ಹೋಟೆಲ್, ಯೂನಿಯನ್ ರಸ್ತೆ, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಲೇಡಿ ಕರ್ಜನ್ ರಸ್ತೆ, ವಿ.ಎಸ್.ಎನ್. ರಸ್ತೆ, ಪ್ಲೇನ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ.
ನಿಲುಗಡೆಗೆ ಸ್ಥಳ
ಕಾಮರಾಜ ರಸ್ತೆ, ಸಫೀನಾ ಪ್ಲಾಜಾ, ಕಬ್ಬನ್ ಪಾರ್ಕ್, ಜೆಸ್ಮಾ ಭವನ್ ರಸ್ತೆ, ಆರ್ಬಿಎಎಸ್ಎಂಎಲ್ ಮೈದಾನ, ಡಿಕನ್ಸನ್ ರಸ್ತೆ.