ಇಂದಿನಿಂದ ಕಸದ ತೂಕ ಕಾರ್ಯ ಆರಂಭಿಸಿ: ಸಿದ್ದಯ್ಯ
ಬೆಂಗಳೂರು: ಅಂತೂ ಬಿಬಿಎಂಪಿ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸದ ನೈಜ ಪ್ರಮಾಣ ತಿಳಿಯಲು ಮುಂದಾಯಿತು.
ಅದರಲ್ಲೂ ಹೈಕೋರ್ಟ್ ನಗರದ ಕಸದ ತೂಕ ತಿಳಿಯಲು ವೈಜ್ಞಾನಿಕ ರೀತಿ ಅನುಸರಿಸಬೇಕೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಕಸದ ತೂಕ ಕಾರ್ಯ ಆರಂಭಿಸುವಂತೆ ಆಯುಕ್ತ ಸಿದ್ದಯ್ಯ ಸೂಚಿಸಿದ್ದಾರೆ.
ಈ ಸಂಬಂಧ ವಲಯ ಮುಖ್ಯ ಎಂಜಿನಿಯರ್ ಮತ್ತು ಅಧೀಕ್ಷಕ ಎಂಜಿನಿಯರ್ಗಳ ಸಭೆ ನಡೆಸಿದ ಅವರು, ಕಸದ ತೂಕ ಮಾಡುವುದಕ್ಕಾಗಿ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಪ್ರತಿ ವಾರ್ಡ್ ಮತ್ತು ವಲಯಗಳಲ್ಲಿ ಉತ್ಪತ್ತಿಯಾಗುವ ಕಸದ ತೂಕ ದಾಖಲಿಸಲು ಮತ್ತು ಒಣ ಹಾಗೂ ಹಸಿ ವಿಂಗಡಿಸಿ ಅವುಗಳ ತೂಕ ನಮೂದಿಸಲು ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ.
ಅಧಿಕಾರಿಗಳು ಫೆ.1ರವರೆಗೂ ಕಸ ಸಂಗ್ರಣೆ ವಿವರ ಮತ್ತು ತೂಕದ ಮಾಹಿತಿಗಳನ್ನು ಒದಗಿಸಬೇಕು. ಇದರಿಂದ ಒಂದು ತಿಂಗಳಲ್ಲಿ ನಗರದಲ್ಲಿ ಎಷ್ಟು ಪ್ರಮಾಣದ ಕಸ ಸಂಗ್ರಹವಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಂಡಂತಾಗುತ್ತದೆ ಎಂದು ಸಿದ್ದಯ್ಯ ತಿಳಿಸಿದ್ದಾರೆ.
ಇದೇ ವೇಳೆ, ನಗರದ ಕಸ ತಾಣವಾದ ಮಂಡೂರಿನಲ್ಲಿ ಕಸ ತೂಕ ಮಾಡುವ ಯಂತ್ರ ಸ್ಥಾಪಿಸುವುದಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.
ಹಾಗೆಯೇ ಇತರ ಕಸ ತಾಣಗಳಲ್ಲೂ ತೂಕ ಯಂತ್ರ ಘಟಕಗಳ ಆರಂಭಿಸಲೂ ಚಿಂತನೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

