ಬೆಂಗಳೂರು ನಗರ

ವಿಜಯಾ ಬ್ಯಾಂಕ್ 126 ಕೋಟಿ ಆದಾಯ: ಉಪೇಂದ್ರ ಕಾಮತ್

Published On :

ಬೆಂಗಳೂರು: ವಿಜಯಾ ಬ್ಯಾಂಕ್ ತನ್ನ ಒಟ್ಟಾರೆ ವಹಿವಾಟಿನಲ್ಲಿ 1,50,000 ಕೋಟಿ ದಾಖಲೆ ಮೊತ್ತದ ಗಡಿ ದಾಟಿದ್ದಲ್ಲದೇ, ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ 126.73 ಕೋಟಿ ನಿವ್ವಳ ಆದಾಯ ಗಳಿಸಿದೆ.
2012-13ನೇ ಸಾಲಿನಲ್ಲಿ ಬ್ಯಾಂಕ್‌ನ ಸಾಧನೆ ಹಾಗೂ 3ನೇ ತ್ರೈಮಾಸಿಕದಲ್ಲಿನ ವಹಿವಾಟು ವಿವರ ಕುರಿತು ಬ್ಯಾಂಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ಉಪೇಂದ್ರ ಕಾಮತ್ ಗುರುವಾರ ಪ್ರಧಾನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ವ್ಯತಿರಿಕ್ತ ಆರ್ಥಿಕ ಸ್ಥಿತಿ ನಡುವೆಯೂ ವಿಜಯಾ ಬ್ಯಾಂಕ್ ಉತ್ತಮ ಸಾಧನೆ ತೋರಿದ್ದು, ಬ್ಯಾಂಕ್‌ನ ಒಟ್ಟಾರೆ ವಹಿವಾಟು 1,54,320 ಕೋಟಿ ತಲುಪಿದೆ. ಇದು ಈವರೆಗಿನ ಗರಿಷ್ಠ ವಹಿವಾಟು ಮೊತ್ತವಾಗಿದ್ದು, ಬ್ಯಾಂಕ್ ಈ ಮೂಲಕ ದಾಖಲೆ ನಿರ್ಮಿಸಿ, ಒಟ್ಟಾರೆ ವಹಿವಾಟಿನಲ್ಲಿ ಶೇ.12ರಷ್ಟು ಪ್ರಗತಿ ಕಂಡಿದೆ. ಜತೆಗೆ, ಪ್ರಸಕ್ತ ಸಾಲಿನ 3ನೇ ತ್ರೈಮಾಸಿಕದ 126.73 (ಕಳೆದ ವರ್ಷ 3ನೇ ತ್ರೈಮಾಸಿಕದಲ್ಲಿ 124.27) ಕೋಟಿ ನಿವ್ವಳ ಆದಾಯ ಗಳಿಸಿದೆ. ಮುಂಗಡಗಳ ಮೇಲಿನ ಬಡ್ಡಿ ಆದಾಯ ಈ ತ್ರೈಮಾಸಿಕದಲ್ಲಿ ಶೇ.7.50 ಹಾಗೂ ಠೇವಣಿಗಳ ಮೇಲಿನ ಆದಾಯ ಶೇ.13.03 ಏರಿಕೆ ಕಂಡಿದೆ ಎಂದು ಉಪೇಂದ್ರ ಕಾಮತ್ ಅವರು ತಿಳಿಸಿದರು.
ಕಳೆದ 9 ತಿಂಗಳಲ್ಲಿ ಬ್ಯಾಂಕ್‌ನ ಒಟ್ಟು ಬಡ್ಡಿ ಆದಾಯ 5025.1 ಕೋಟಿಯಾಗಿದ್ದು ಇದು ಕಳೆದ ಸಾಲಿನ 3 ತ್ರೈಮಾಸಿಕಗಳ ಬಡ್ಡಿ ಆದಾಯ (4403.21ಕೋಟಿ)ಕ್ಕಿಂತ ಶೇ.14.12 ಅಧಿಕ. ಅಲ್ಲದೆ ಪ್ರಸಕ್ತ ಸಾಲಿನ 3 ತ್ರೈಮಾಸಿಕಗಳ ಠೇವಣಿ ಆದಾಯ 1591.28 ಕೋಟಿ ಯಾಗಿದ್ದು, ಇದು ಕಳೆದ ವರ್ಷದ 3 ತ್ರೈಮಾಸಿಕಗಳ ಠೇವಣಿ ಆದಾ ಯಕ್ಕಿಂತ (1380.68 ಕೋಟಿ) ಹೆಚ್ಚು. ಜತೆಗೆ, ಬ್ಯಾಂಕ್‌ನ ಒಟ್ಟು ಶಾಖೆಗಳ ಸಂಖ್ಯೆ 1333 ತಲುಪಿದ್ದು, 49 ಹೊಸ ಎಟಿಎಂಗಳ ಸ್ಥಾಪನೆ ಮೂಲಕ ಎಟಿಎಂಗಳ ಸಂಖ್ಯೆ 803 ತಲುಪಿದೆ ಎಂದು ಅವರು ತಿಳಿಸಿದರು.
ಮುಂದಿನ ಗುರಿ: ಮುಂದಿನ ಆರ್ಥಿಕ ವರ್ಷ ಬ್ಯಾಂಕ್ 1,65,000 ವಹಿವಾಟು ನಡೆಸುವ ಜತೆಗೆ 98,000 ಕೋಟಿ ಠೇವಣಿ ಹೊಂದುವ ಹಾಗೂ 67,000 ಕೋಟಿ ಮುಂಗಡ ನೀಡುವ ಗುರಿ ಇರಿಸಿಕೊಂಡಿದೆ ಎಂದು ಅವರು ತಿಳಿಸಿದರು. ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ರಾಮದಾಸ್ ಶೆಣೈ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.