ಬೆಂಗಳೂರು ನಗರ

'ಸುಳ್ಳು ಕೇಸು ಹಾಕಿಸಿದ್ದರೆ ಸಾಬೀತುಪಡಿಸಲಿ'

Published On :

ಮಾಗಡಿ:  ಎ.ಮಂಜು ಮೇಲೆ  ನಾನೇನಾದರು ಸುಳ್ಳು ಕೇಸು ಹಾಕಿಸಿದ್ದರೆ ತೋರಿಸಲಿ, ತಪ್ಪು ಮಾಡಿರುವುದು ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದ್ದಾರೆ.
ನಾನು ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ಯಾರ ಮೇಲೂ ದೌರ್ಜನ್ಯ ಮಾಡಿಲ್ಲ, ಸುಳ್ಳು ಕೇಸು ಹಾಕಿಸಿಲ್ಲ, ಸುಳ್ಳು ಕೇಸು ಹಾಕಿಸಲು ನಾನೇನಾದರೂ ಕುಮ್ಮಕ್ಕು ನೀಡಿದ್ದರೆ ತೋರಿಸಲಿ.  ಸಮ್ಮನೆ ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ಕೊಡುವುದನ್ನು ಅವರು ನಿಲ್ಲಿಸಬೇಕು.  ಮಾಧ್ಯಮಗಳ ಮುಂದೆಯೇ ಇಬ್ಬರು  ಸತ್ಯ ಯಾವುದು, ಸುಳ್ಳೇನು ಎಂಬ ಬಗ್ಗೆ   ಚರ್ಚೆಯಾಗಲಿ, ನಾನೇ ಎಲ್ಲಿಗೆ ಬೇಕಾದರೂ ಚರ್ಚೆಗೆ ಬರುತ್ತೇನೆ. ಕೆಪಿಸಿಸಿ ಸದಸ್ಯರಾದ ಎ.ಮಂಜು ಅವರೇ  ದಿನಾಂಕ, ಸ್ಥಳ ನಿಗದಿಪಡಿಸಲಿ. ಅಥವಾ ಪಟ್ಟಣದಲ್ಲಿರುವ ಅವರ  ಕಾಂಗ್ರೆಸ್  ಕಚೇರಿಯಲ್ಲಿಯೇ  ಮಾಧ್ಯಮಗಳ ಮುಂದೆ  ಚರ್ಚೆಗೆ ವೇದಿಕೆ ಸಿದ್ದಪಡಿಸಲಿ.  ನಾನೊಬ್ಬನೆ ಅಲ್ಲಿಗೆ ಬರುತ್ತೇನೆ. ಅಲ್ಲಿಯೇ  ಸರಿ, ತಪ್ಪುಗಳು ಚರ್ಚೆಯಾಗಲಿ ಎಂದು  ಬಾಲಕೃಷ್ಣ ಸವಾಲು ಹಾಕಿದರು.
ಎ.ಮಂಜು ಮೇಲಿರುವ ಪ್ರಕರಣವನ್ನು ಮಾಧ್ಯಮಗಳ ಮುಂದೆಯೇ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ಆಗ ಅವರು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು. ಕ್ಷೇತ್ರಕ್ಕೆ ಎ.ಮಂಜು ಕೊಡುಗೆ ಏನು ಎಂದು ಪ್ರಶ್ನಿಸಿದ  ಬಾಲಕೃಷ್ಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರನ್ನು ಖರೀದಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ನಿರ್ಣಾಯಕವಾದ ಆಯ್ಕೆ ಮತದಾರರು ಎಂದು  ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.