25ರಂದು ಭವನ ಶಕ್ತಿಯ ಅದ್ಭುತ ಸ್ತಂಭ ಅನಾವರಣ
ಕ.ಪ್ರ.ವಾರ್ತೆ ಬೆಂಗಳೂರು ಮಾ.22
ಶ್ರೀರಾಮಪುರದ 'ಭಾರತೀಯ ವಿದ್ಯಾಭವನ- ಬಿಬಿಎಂಪಿ ಪಬ್ಲಿಕ್ ಶಾಲೆ'ಯಲ್ಲಿ ಸ್ಥಾಪಿಸಲಾಗಿರುವ 'ಭವನ ಶಕ್ತಿಯ ಅದ್ಭುತ ಸ್ತಂಭ'ಗಳನ್ನು ರಾಜ್ಯಪಾಲ ಡಾ. ಹಂಸರಾಜ್ ಭಾರದ್ವಾಜ್ ಅವರು ಮಾ. 25ರಂದು ಸಂಜೆ 5.30ಕ್ಕೆ ಶಾಲಾ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಎಸ್. ಸುರೇಶ್ಕುಮಾರ್, ಶಾಸಕ ದಿನೇಶ್ ಗುಂಡೂರಾವ್, ಪಾಲಿಕೆ ಸದಸ್ಯೆ ಶಕೀಲಾ ಮುನಿರಾಜು, ಶಿಲ್ಪಿ ಕನಕಮೂರ್ತಿ, ಭಾರತೀಯ ವಿದ್ಯಾಭವನ-ಮುಂಬಯಿ ಟ್ರಸ್ಟಿ ಐ.ಆರ್. ಖಂಡ್ವಾಲ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ಮೌಲ್ಯಾಧರಿತ ಹಾಗೂ ಆದರ್ಶ ವಿಚಾರಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಭಾರತೀಯ ವಿದ್ಯಾಭವನದ ಸ್ಥಾಪಕ ಡಾ.ಕೆ.ಎಂ. ಮುನ್ಷಿ ಮತ್ತಿತರ ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಸ್ತಂಭಗಳನ್ನು ನಿರ್ಮಿಸಲಾಗಿದೆ.
ಪ್ಲಾಟಿನಂ ಜುಬಿಲಿ ಆಚರಣೆ ಪ್ರಯುಕ್ತ ನಿರ್ಮಿಸಲಾಗಿರುವ ಪ್ರತಿಯೊಬ್ಬ ಸ್ತಂಭಗಳಲ್ಲಿ 12 ಅಡಿ ಎತ್ತರವಿದ್ದು, 2.5 ಅಡಿ ಸುತ್ತಳತೆ ಹೊಂದಿದೆ. ಪ್ರತಿ ಸ್ತಂಭದ ತುತ್ತತುದಿಯಲ್ಲಿ ಮಹಾತ್ಮ ಗಾಂಧೀಜಿಯ ಪ್ರತಿಮೆ ಅಳವಡಿಸಲಾಗಿದ್ದು, 2.5 ಅಡಿ ಎತ್ತರದ ತಳಹದಿ ಮೇಲೆ ಸ್ತಂಭ ಸ್ಥಾಪಿಸಲಾಗಿದೆ.
ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಕೆಳಗೆ ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ.ಕೆ.ಎಂ. ಮುನ್ಷಿ, ಡಾ.ಎಸ್. ರಾಧಾಕೃಷ್ಣನ್, ಡಾ. ರಾಜೇಂದ್ರಪ್ರಸಾದ್, ಸಿ.ರಾಜಗೋಪಾಲಾಚಾರಿ, ಪಂಡಿತ್ ಜವಹರಲಾಲ್ ನೆಹರು, ಡಾ.ಝಾಕೀರ್ ಹುಸೇನ್, ಡಾ.ಫಕ್ರುದ್ದೀನ್ ಅಲಿ ಅಹಮದ್, ಡಾ.ವಿ.ವಿ.ಗಿರಿ, ನೀಲಂ ಸಂಜೀವರೆಡ್ಡಿ, ಮೊರಾರ್ಜಿ ದೇಸಾಯಿ, ಜಯಪ್ರಕಾಶ್ ನಾರಾಯಣ್, ಆರ್.ವೆಂಕಟರಾಮನ್, ಎಸ್.ನಿಜಲಿಂಗಪ್ಪ, ಜೆ.ಆರ್.ಡಿ.ಟಾಟಾ, ಜಿ.ಡಿ.ಬಿರ್ಲಾ, ಡಾ.ಆರ್.ಆರ್.ದಿವಾಕರ್, ಮದರ್ ತೆರೆಸಾ, ಡಾ.ಎಂ.ಎಸ್.ಸುಬ್ಬುಲಕ್ಷ್ಮಿ, ಡಾ.ಕೆ.ಶಿವರಾಮ ಕಾರಂತ, ಎಸ್. ರಾಮಕೃಷ್ಣನ್ ಮತ್ತು ಸಿ.ಸುಬ್ರಹ್ಮಣ್ಯನ್ ಅವರ ಪ್ರತಿಮೆಗಳು ಸ್ತಂಭದ ಉದ್ದಕ್ಕೂ ಸುತ್ತಲೂ ಇರಲಿವೆ. ಹೀಗೆ ವಿಶೇಷವಾಗಿ ನಿರ್ಮಿಸಿರುವ ಪ್ರತಿಯೊಂದು ಸ್ತಂಭವೂ ಒಟ್ಟು 16.5 ಅಡಿ ಎತ್ತರವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

