ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಅಗತ್ಯ
ಖಾನಾಪುರ: ದೇಶದಲ್ಲಿ ದಲಿತರಿಗೆ, ಬಡವರಿಗೆ ಮತ್ತು ಮಹಿಳೆಂುರಿಗೆ ಉತ್ತಮ ಶಿಕ್ಷಣ ದೊರೆಂುತ್ತಿಲ್ಲ. ಇಂದು ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕಾದ ಅಗತ್ಯವಿದೆ ಎಂದು ರಾಜಸ್ತಾನ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ವಿಷಾದಿಸಿದರು.
ಮರಾಠಾ ಮಂಡಳ ಶಿಕ್ಷಣ ಸಂಸ್ಥೆಂು ಪಪೂ ನೂತನ ಕಟ್ಟಡ ಮತ್ತು ಮಹಿಳಾ ವಸತಿ ನಿಲಂುವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ಭಾಷೆ, ಧರ್ಮ ಹೆಸರಿನಲ್ಲಿ ಮಹಿಳೆಂುರ ಮೇಲೆ ದೌರ್ಜನ್ಯ ನಡೆಂುತ್ತಿದ್ದು, ಜನರಲ್ಲಿ ಆರ್ಥಿಕ ಅಂತರ ಕಡಿಮೆಂಾಗಬೇಕು ಎಂದರು.
ಮರಾಠಾ ಮಂಡಳ ಶಿಕ್ಷಣ ಸಂಸ್ಥೆ 1931 ರಿಂದ ಶಿಕ್ಷಣವನ್ನು ಪ್ರಮುಖವಾಗಿ ಉದ್ದೇಶ ಇಟ್ಟುಕೊಂಡು ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಉತ್ತಮ ಕೆಲಸ ಮಾಡುತ್ತಿದೆ. ಹಲಗೇಕರ ಅವರ ಅವಿರತ ಪರಿಶ್ರಮವನ್ನು ನಾನು ಗಮನಿಸುತ್ತ ಬಂದಿದ್ದೇನೆ. ಖಾನಾಪುರದಲ್ಲಿ ಮೆಡಿಕಲ್ ಕಾಲೇಜ ಮತ್ತು ಆಸ್ಪತ್ರೆ ತೆರೆಂುವ ನಿರ್ಧಾರ ಮಾಡಿದ್ದೇನೆ. ಅದಕ್ಕೆ ನನ್ನಿಂದ ಎಲ್ಲ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಚುನಾವಣೆಂುಲ್ಲಿ ಸೋತ ನಂತರ ನಾನು ಬರಲಿಲ್ಲ. ರಾಜ್ಯಪಾಲರಾಗಿ ವೃದ್ದಾಪದಲ್ಲಿ ಒಂದಿಷ್ಟು ಅರಾಮವಾಗಿರುವೆ. ಈ ಭಾಗದ ಪ್ರತಿ ಹಳ್ಳಿ ತಿರುಗಾಡಿ ಗ್ರಾಮ ಸಮಸ್ಯೆ ರಸ್ತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿರುವೆ. ಆದರೆ ನನಗೆ ಕೆಲಸ ಮಾಡಲು ಆಸಕ್ತಿ ಇದೆ. ನೀವು ಬೇಡ ಎಂದು ನನ್ನನ್ನು ಕಳಹಿಸಿದ್ದರ ಬಗ್ಗೆ ಬೇಸರವಿದೆ. ತಾಲೂಕಿನಲ್ಲಿ ಸಾಕಷ್ಟು ಬಡತನವಿದೆ. ಭಾಷೆ, ಜಾತಿ ಧರ್ಮ ಹೆಸರಿನಲ್ಲಿ ಇಲ್ಲಿ ರಾಜಕೀಂುಕ್ಕೆ ಬೆಂಬಲಿಸಿದರೆ ಹಿಂದೆ ಇರಬೇಕಾಗುತ್ತದೆ ಎಂದು ರಾಜ್ಯಪಾಲರು ಕಿವಿ ಮಾತು ಹೇಳಿದರು.
ಮುಂದಿನ 25 ವರ್ಷಗಳ ಭವಿಷ್ಯ ಬಗ್ಗೆ ಚಿಂತಿಸಬೇಕಾಗಿದೆ. ಜನರು ಉದ್ಯೋಗಕ್ಕೆ ವಲಸೆ ಹೋಗುವದನ್ನು ತಪ್ಪಿಸಬೇಕಾದರೆ ಕೈಗಾರಿಕೆಗಳು ಹಲವಾರು ಅಭಿವೃದ್ಧಿ ಂೋಜನೆಗಳನ್ನು ಇಲ್ಲಿಗೆ ತರಬೇಕು. ತಾಲೂಕಿನ ಮಕ್ಕಳಿಗೆ ಂುವಕರಿಗೆ ಹೊಸ ಜೀವನ ನೀಡುವ ದೃಷ್ಟಿ ಇಟ್ಟುಕೊಂಡು ನಿಮ್ಮ ತೀರ್ಮಾನ ಕೈಗೊಳ್ಳಿ ಎಂದು ಹೇಳಿದರು.
ಅಮರಜೀವಿ ಹಲಗೇಕರ, ಮಾರುತಿ ಕೊಡಚವಾಡಕರ, ಶಿವಾಜಿ ಪಾಟೀಲ,ಪರಶರಾಮ ಗುರವ, ನಿವೇದಿತ ಆಳ್ವಾ ಉಪಸ್ಥಿತರಿದ್ದರು. ಮರಾಠಾ ಮಂಡಳ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ನಾಗರಾಜು ಸ್ವಾಗತಿಸಿದರು. ಎಂ.ನಾಗರಾಜು ಅವರು ಆಳ್ವಾ ಅವರು ತಾಲೂಕಿನಲ್ಲಿ ಮಾಡಿದ ಸೇಮೆಂುನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಆಳ್ವಾ ಫೌಂಡೇಶನ್ ಮೂಲಕ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

