ಕೊನೆಗೂ ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರ ಆರಂಭ
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರವನ್ನು ತೆರೆಯಲು ಜಿಲ್ಲಾಧಿಕಾರಿ ಬಿಸ್ವಾಸ್ ತಹಸೀಲ್ದಾರ್ಗೆ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಹಳೇ ಹಗರಿಬೊಮ್ಮನಹಳ್ಳಿಯ ಗೊಲ್ಲರ ಓಣಿಯ ಶಿಶು ವಿಹಾರ ಕೇಂದ್ರ ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರ ಕಾರ್ಯಾರಂಭ ಮಾಡಿದೆ.
ಈ ಹೆಚ್ಚುವರಿ ಕೇಂದ್ರ ತೆರೆಯುವ ಮೂಲಕ ಹಲವು ತಿಂಗಳಿನಿಂದಲೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಉದ್ಭವಿಸಿದ್ದ ಆಧಾರ್ ನೋಂದಣಿ ಸಮಸ್ಯೆಯನ್ನು ನಿವಾರಿಸಲು ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರ ತೆರೆಯುವ ಮೂಲಕ ತಾಲೂಕಿನಲ್ಲಿ ಆಧಾರ್ ಕಾರ್ಡ್ ಪಡೆಯಲು ಉಂಟಾಗಿದ್ದ ಕಗ್ಗಂಟನ್ನು ಜಿಲ್ಲಾಡಳಿತ ಬಿಡಿಸಲು ಯತ್ನಿಸಿದೆ. ಪಟ್ಟಣದ ರಾಮನಗರದಲ್ಲಿನ ಅಂಚೆ ಕಚೇರಿ ಆವರಣದಲ್ಲಿರುವ ಆಧಾರ್ ನೋಂದಣಿ ಕೇಂದ್ರದ ಮುಂದೆ ಅರ್ಜಿ ಪಡೆಯಲು ಮಧ್ಯರಾತ್ರಿಯಿಂದಲೇ ನಿದ್ದೆಗೆಟ್ಟು, ಕೆಲಸಬಿಟ್ಟು ಸರದಿಯಲ್ಲಿ ನಿಂತು ಪ್ರತಿ ತಿಂಗಳು ಅರ್ಜಿಗಾಗಿ ಸಾವಿರಾರು ನಾಗರಿಕರು ಕಾಯುತ್ತಿದ್ದರು.
ಅರ್ಜಿ ಪಡೆಯುವಾಗ ಸಾಕಷ್ಟು ತಳ್ಳಾಟ, ನೂಕಾಟ, ಪರಸ್ಪರ ಜಗ್ಗಾಟಗಳೆ ಸಂಭವಿಸುತ್ತಿದ್ದವು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ಆದರೆ ಬಹುತೇಕ ಜನರಿಗೆ ಅರ್ಜಿಗಳು ಸಿಗುತ್ತಿರಲಿಲ್ಲ. ಅರ್ಜಿ ಸಿಗದವರು ತಾಲೂಕು ಆಡಳಿತವನ್ನು ಶಪಿಸಿಕೊಂಡೆ ಮನೆ ಸೇರುತ್ತಿದ್ದರು. ತಾಲೂಕಿನಲ್ಲಿ ಉದ್ಬವಿಸಿರುವ ಆಧಾರ್ ನೋಂದಣಿ ಸಮಸ್ಯೆ ಬಗ್ಗೆ 'ಕನ್ನಡಪ್ರಭ' ಹಲವು ಬಾರಿ ವಿಶೇಷ ವರದಿ ಪ್ರಕಟಿಸಿತ್ತು.
ಕೊನೆಗೂ ಜಿಲ್ಲಾಡಳಿತ ಹಳೇ ಹಗರಿಬೊಮ್ಮನಹಳ್ಳಿಯಲ್ಲಿ ಹೆಚ್ಚುವರಿ ಆಧಾರ್ ನೋಂದಣಿ ಕೇಂದ್ರ ತೆರೆದು ಸದ್ಯದ ಮಟ್ಟಿಗೆ ಆಧಾರ್ ಕಾರ್ಡ್ ಸಮಸ್ಯೆಯನ್ನು ತಗ್ಗಿಸಿದೆ ಎಂಬ ಸಮಾಧಾನ ತಾಲೂಕಿನ ಜನತೆಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

