21ರಿಂದ ಭಜನೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಕೆಚ್ಚಿನಬಂಡಿ ರಸ್ತೆಯಲ್ಲಿನ ಶ್ರೀವಿಠ್ಠಲ ರಖುಮಾ ದೇವಸ್ಥಾನದಲ್ಲಿ ಆ. 21ರಿಂದ 23ರ ವರೆಗೆ ಮಂಚರೀ ಗಾಥಾ ಭಜನಾ ಮಹೋತ್ಸವ ಜರುಗಲಿದೆ. ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜ ಭಜನಾ ಮಂಡಳಿ ಆಯೋಜಿಸಿರುವ ಈ ಮಹೋತ್ಸವದಲ್ಲಿ ರಾಜ್ಯ ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಿಂದ ಉತ್ತಮ ಪ್ರವಚನ ಕೀರ್ತನಕಾರರು, ಸಂಗೀತಾ, ಭಜನಾಕಾರರು, ಬಾರೋಡಕಾರರು ಹಾಗೂ ಭಜನಾ ಮಂಡಳಿಯವರು ಭಾಗವಹಿಸಲಿದ್ದಾರೆ. ಆ. 21ರಂದು ಬೆಳಗ್ಗೆ 6ಕ್ಕೆ ಪೋತಿ ಸ್ಥಾಪನೆ ನಂತರ 7ರಿಂದ 9 ಗಂಟೆವರೆಗೂ ಶ್ರೀಮಂಚರೀ ಗಾಥಾ ಭಜನಾ ಆರಂಭವಾಗಲಿದ್ದು, ರಾತ್ರಿ 10.30ರ ವರೆಗೂ ಜಾಗರ ಸಂಗೀತಾ ಭಜನೆ ನಡೆಯಲಿದೆ. ಆ. 22ರಂದು ಬೆಳಗ್ಗೆ 4.30ರಿಂದ 6ರ ವರೆಗೂ ಕಾಕಡಾರತಿ ಭಜನೆ ನಂತರ ಯಥಾಪ್ರಕಾರ ಕಾರ್ಯಕ್ರಮಗಳು ಹಾಗೂ ಆ. 23ರಂದು ದಿಂಡಿಉತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಗ್ರಾಪಂಗೆ ನೂತನ ಅಧ್ಯಕ್ಷೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಕಡ್ಲಬಾಳು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಪಟ್ಟಣದ ರಾಮನಗರ ವಾರ್ಡ್ನ ಸದಸ್ಯೆ ಬಡಲಡಿಕಿ ಮಂಜುಳಾ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕುರದಗಡ್ಡಿ ನಾಗಪ್ಪ ಅವರನ್ನು 12-6 ಮತಗಳ ಅಂತರದಿಂದ ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. 18 ಸದಸ್ಯ ಬಲದ ಗ್ರಾಪಂನ ನೂತನ ಅಧ್ಯಕ್ಷೆಯಾಗಿ ಮಂಜುಳಾ ಕೃಷ್ಣಪ್ಪ ಆಯ್ಕೆಯಾದರು. ಶಾಸಕ ಎಸ್. ಭೀಮಾನಾಯ್ಕ, ತಾಪಂ ಮಾಜಿ ಸದಸ್ಯರಾದ ಆರ್. ವೆಂಕಟೇಶ್, ಎಚ್.ಕೆ. ಗುರು, ಗ್ರಾಪಂ ಮಾಜಿ ಅಧ್ಯಕ್ಷರಾದ ಕೊಟ್ರಗೌಡ, ಮಂಜುನಾಥಗೌಡ, ಗ್ರಾಪಂ ಉಪಾಧ್ಯಕ್ಷೆ ಜಯಮ್ಮ, ಮಾಜಿ ಉಪಾಧ್ಯಕ್ಷ ಸಿ. ಚಂದ್ರಶೇಖರ, ನಾಗರಾಜ ಜನ್ನು, ಸಂಪತ್ಕುಮಾರ, ಬಂಗಾರಿ ಗಾಳೆಪ್ಪ, ನೀಲಕಂಠಪ್ಪ ನೂತನ ಅಧ್ಯಕ್ಷೆಯನ್ನು ಅಭಿನಂದಿಸಿದರು.
ಮಂಗನಾಟ: ತೊಂದರೆ
ಹೊಸಪೇಟೆ: ನಗರ ಹೊರವಲಯದ ಪುರಾಣ ಪ್ರಸಿದ್ಧ ಜಂಬುನಾಥ ದೇವಸ್ಥಾನದಲ್ಲಿ ಕೋತಿಗಳ ಹಾವಳಿ ಮಿತಿ ಮೀರಿದ್ದು, ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಕೋತಿಗಳು ಕಿರಿಕಿರಿ ಉಂಟು ಮಾಡುತ್ತಿವೆ. ಭಕ್ತರು ದೇವಸ್ಥಾನಕ್ಕೆ ತೆರಳುವಾಗ ಕೋತಿಗಳು ಭಕ್ತರ ಕೈಯಲ್ಲಿನ ಚೀಲ ಕಸಿದು ಕಾಯಿ, ಹೂವು, ಹಣ್ಣು ಕಿತ್ತುಕೊಳ್ಳುವುದು ಸಾಮಾನ್ಯವಾಗಿದೆ. ದೇವಸ್ಥಾನಕ್ಕೆ ನೈವೇದ್ಯಕ್ಕೆ ತರುವ ಹಣ್ಣು, ಇತರೆ ವಸ್ತುಗಳನ್ನು ಜಾಗರೂಕತೆಯಿಂದ ತೆಗೆದುಕೊಂಡು ಹೋಗುವ ಪರಿಸ್ಥಿತಿ ದೆ. ದೇವಸ್ಥಾನದ ಒಳಗೂ ನುಗ್ಗಿ ಭಕ್ತರನ್ನು ಕಾಡುತ್ತಿವೆ. ತಕ್ಷಣ ಅರಣ್ಯ ಇಲಾಖೆಯವರು ಕೋತಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಬೇಕೆಂದು ಆಗ್ರಹಿಸಿದ್ದಾರೆ.
ಗ್ರಾಪಂ ಪಿಡಿಒಗಳಿಗೆ ಅಧಿಕಾರ ನೀಡಲು ಆಗ್ರಹ
ಹೊಸಪೇಟೆ: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಮೊದಲಿನಂತೆ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಜವಳಿ ಹಾಗೂ ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರು ಅವರಿಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಜನರ ನಿವೇಶನ ಹಕ್ಕುದಾರಿಕೆಯನ್ನು ಫಾರ್ಮ್ ನಂ. 9ರಲ್ಲಿ ನೀಡುವ ಅಧಿಕಾರವನ್ನು ಗ್ರಾಪಂ ಪಿಡಿಒಗೆ ನೀಡಲಾಗಿತ್ತು. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು 2012 ಡಿಸೆಂಬರ್ 31ರಂದು ಆದೇಶ ಹೊರಡಿಸಿ, ಸದರಿ ಫಾರ್ಮ್ ನಂ. 9 ನೀಡುವ ಅಧಿಕಾರವನ್ನು ಪಿಡಿಒಗಳಿಂದ ಹಿಂಪಡೆದು, ತಹಸೀಲ್ದಾರ್ಗೆ ನೀಡಿದ್ದಾರೆ. ಈ ಆದೇಶದಿಂದ ಗ್ರಾಮೀಣ ಜನರಿಗೆ ಬಹಳಷ್ಟು ಅನಾನುಕೂಲವಾಗಿದೆ. ಅಲ್ಲದೇ, ತಹಸೀಲ್ದಾರ್ ಕಚೇರಿಗೆ ತಿಂಗಳುಗಟ್ಟಲೆ ಅಲೆದಾಡಿದರೂ ಗ್ರಾಮೀಣ ಜನರು ತಮ್ಮ ಹಕ್ಕುದಾರಿಕೆಯ ನಿವೇಶನ ಪತ್ರ ದೃಢೀಕರಣ ಪಡೆಯುವುದು ಕಷ್ಟಕರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಈ ಹಿಂದೆ ಇದ್ದಂತೆ ಸದರಿ ಅಧಿಕಾರವನ್ನು ಗ್ರಾಪಂ ಪಿಡಿಒಗಳಿಗೆ ನೀಡಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವೈ. ಯಮುನೇಶ್, ನೌಕರ ಸಂಘದ ಅಧ್ಯಕ್ಷ ಶೇಖರ ಹೊರಪೇಟೆ, ಸಂಘಟನಾ ಕಾರ್ಯದರ್ಶಿ ರವಿಶಂಕರ್ ದೇವರಮನಿ, ವರಪ್ರಸಾದ್, ಅಂಜಿನಪ್ಪ, ಕುಬೇರ ಮನವಿಪತ್ರದಲ್ಲಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

