ಸೀಮಾಂಧ್ರ ಹೋರಾಟ: ಸಾರಿಗೆ ಸಂಸ್ಥೆಗೆ ಕೋಟಿ ನಷ್ಟ
-ಶಶಿಧರ ಮೇಟಿ
ಬಳ್ಳಾರಿ: ಬಳ್ಳಾರಿ ಮೂಲಕ ಆಂಧ್ರಪ್ರದೇಶಕ್ಕೆ ಹಾದು ಹೋಗುವ ಎನ್ಇಕೆಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಕೆಎಸ್ಆರ್ಟಿಸಿಯ 74 ರೂಟ್ಗಳಲ್ಲಿ ಸಂಚರಿಸುತ್ತಿರುವ ಬಸ್ಗಳ ಸಂಚಾರ ಜು.31ರಿಂದ ಸ್ಥಗಿತವಾಗಿದ್ದರಿಂದ ಆ.21ರವರೆಗೆ ಸುಮಾರು 2.84 ಕೋಟಿ ನೇರ ನಷ್ಟವನ್ನು ಸಾರಿಗೆ ಸಂಸ್ಥೆ ಅನುಭವಿಸುತ್ತಿದೆ.
ಜು.31ರಂದು ಆಂಧ್ರಪ್ರದೇಶದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯಾದ ಹಿನ್ನೆಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಿದ್ದವು. ಇದರಿಂದ ಆಂಧ್ರಕ್ಕೆ ಹೋಗುವ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಬಳ್ಳಾರಿ ಹಾಗೂ ಬಳ್ಳಾರಿ ಮೂಲಕ ಆಂಧ್ರಪ್ರದೇಶಕ್ಕೆ ಹಾದು ಹೋಗುವ 74 ರೂಟ್ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಂಸ್ಥೆಗೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ. ಕೇವಲ ಹಾನಿ ಮಾತ್ರವಲ್ಲದೆ, ಬಸ್ಗಳನ್ನು ಇತರೆ ರೂಟ್ಗಳಿಗೆ ಬಿಟ್ಟಿರುವುದರಿಂದ ಪರೋಕ್ಷವಾಗಿ ಇತರೆ ಬಸ್ ಆದಾಯದ ಮೇಲೂ ಪರಿಣಾಮ ಬೀರಿದೆ.
ಪ್ರತಿದಿನ ಬಳ್ಳಾರಿ ವಿಭಾಗಕ್ಕೆ 4.70 ಲಕ್ಷ ನಷ್ಟ: ಬಳ್ಳಾರಿ ಜಿಲ್ಲೆಯಿಂದ ಸುಮಾರು 45 ರೂಟ್ಗಳಲ್ಲಿ ಆಂಧ್ರಪ್ರದೇಶಕ್ಕೆ ಬಸ್ ಸಂಚಾರವಿತ್ತು. ಈಗ ಬಳ್ಳಾರಿಯಿಂದ ವಯಾ ರಾಯಚೂರು ಮೂಲಕ ಹೈದರಾಬಾದ್ಗೆ ತೆರಳುತ್ತಿರುವ ಸ್ಲೀಪರ್, ರಾಜಹಂಸ, ಎರಡು ಎಕ್ಸ್ಪ್ರೆಸ್ ಬಸ್ಸುಗಳ ಸಂಚಾರ ಮಾತ್ರವಿದೆ. ಬಳ್ಳಾರಿಯಿಂದ ಆಂಧ್ರಪ್ರದೇಶಕ್ಕೆ ತೆರಳುವ 29 ರೂಟ್ಗಳ ಬಸ್ಸುಗಳಿಗೆ ಪ್ರತಿದಿನ ಪ್ರತಿಬಸ್ಸಿಗೆ 10 ಸಾವಿರ ನಷ್ಟವಾದರೆ, ಹೊಸಪೇಟೆಯಿಂದ ಆಂಧ್ರಪ್ರದೇಶಕ್ಕೆ ತೆರಳುವ ಬಸ್ಗಳಿಗೆ ಪ್ರತಿದಿನ 15 ಸಾವಿರ ನಷ್ಟವಾಗುತ್ತಿದೆ. ಇದರಿಂದ ಬಳ್ಳಾರಿ ಜಿಲ್ಲೆ ವಿಭಾಗಕ್ಕೆ ಪ್ರತಿದಿನ 4.70 ಲಕ್ಷ ನಷ್ಟವಾಗುತ್ತಿದೆ ಎನ್ನುತ್ತದೆ ಸಂಸ್ಥೆಯ ಲೆಕ್ಕ.
ಪ್ರತಿದಿನ 12.95 ಲಕ್ಷ ನಷ್ಟ: ಬಳ್ಳಾರಿ ಜಿಲ್ಲೆಯ 41 ರೂಟ್ಗಳ ಸಾರಿಗೆ ಸಂಸ್ಥೆ ಬಸ್ಗಳು, ಎನ್ಡಬ್ಲ್ಯುಕೆಆರ್ಟಿಸಿ, ಕೆಎಸ್ಆರ್ಟಿಸಿ ಬಸ್ಗಳು ಬಳ್ಳಾರಿಯಿಂದ ಹಾದು ಹೋಗುತ್ತಿರುವ 33 ರೂಟ್ಗಳ ಬಸ್ಗಳ ಸಂಚಾರ ಸ್ಥಗಿತವಾಗಿದ್ದರಿಂದ ಪ್ರತಿದಿನ ಸಂಸ್ಥೆ 12.95 ಲಕ್ಷ ನಷ್ಟ ಅನುಭವಿಸುತ್ತಿದೆ. ಎನ್ಡಬ್ಲ್ಯೂಕೆಆರ್ಟಿಸಿಯ ಬಾದಾಮಿಯಿಂದ ಮಂತ್ರಾಲಯ, ಶಿರಿಸಿಯಿಂದ ಮಂತ್ರಾಲಯ ಸೇರಿದಂತೆ ಇತರೆ ರೂಟ್ಗಳ ಸಂಚಾರ, ಕೆಎಸ್ಆರ್ಟಿಸಿಯ ತುಮಕೂರಿನಿಂದ ಮಂತ್ರಾಲಯ, ಬೆಂಗಳೂರಿನಿಂದ ಮಂತ್ರಾಲಯ, ದಾವಣಗೆರೆಯಿಂದ ಶ್ರೀಶೈಲ, ಹರಿಹರದಿಂದ ಶ್ರೀಶೈಲ, ಶಿವಮೊಗ್ಗದಿಂದ ಶ್ರೀಶೈಲ ಸೇರಿದಂತೆ ಬಳ್ಳಾರಿ ಮೂಲಕ ಹಾದು ಹೋಗುವ 33 ರೂಟ್ಗಳ ಬಸ್ಗಳ ಸಂಚಾರ ಇಲ್ಲದೆ ಅಲ್ಲಿನ ಸಂಸ್ಥೆಗೆ ಪ್ರತಿದಿನ, ಪ್ರತಿ ಬಸ್ಸಿಗೆ 25 ಸಾವಿರ ನಷ್ಟವಾಗುತ್ತಿದೆ. ಒಟ್ಟಾರೆ ಎರಡು ಸಂಸ್ಥೆಗಳಿಗೆ 33 ರೂಟ್ಗಳಿಂದ 8.25 ಲಕ್ಷ ನಷ್ಟವಾಗುತ್ತಿದೆ. ಬಳ್ಳಾರಿ ವಿಭಾಗ, ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಎಸ್ಆರ್ಟಿಸಿಗಳಿಗೆ ಪ್ರತಿದಿನ 12.95 ಲಕ್ಷ ನಷ್ಟವಾಗುತ್ತಿದೆ.
ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಆಗಮಿಸಿದ ಪ್ರಯಾಣಿಕರು ರಾಜ್ಯದ ಸಾರಿಗೆ ಸಂಸ್ಥೆ ಬಸ್ಗಳ ಮೂಲಕ ಇತರೆ ಭಾಗಕ್ಕೆ ಸಂಚರಿಸುವುದರಿಂದ, ಆ ಆದಾಯವೂ ಸ್ಥಗಿತವಾಗಿದೆ. ಆಂಧ್ರಪ್ರದೇಶದ ಬಂದ್ ಹಿನ್ನೆಲೆಯಲ್ಲಿ ಕೇವಲ ಆಂಧ್ರಪ್ರದೇಶಕ್ಕೆ ಮಾತ್ರವಲ್ಲದೆ, ರಾಜ್ಯಕ್ಕೆ ಕೋಟ್ಯಂತರ ರು.ಗಳ ನಷ್ಟವಾಗಿದೆ.
ಆಂಧ್ರಪ್ರದೇಶಕ್ಕೆ ತೆರಳುವ ಬಸ್ಗಳ ಸಂಚಾರದಿಂದ ಕೇವಲ ಸಾರಿಗೆ ಸಂಸ್ಥೆಯ ಆದಾಯಕ್ಕೆ ನಷ್ಟ ಮಾತ್ರವಲ್ಲದೆ, ನಿವೃತ್ತ ನೌಕರರಿಗೆ ನಿವೃತ್ತ ವೇತನ, ಸಾರಿಗೆ ಸಂಸ್ಥೆಯ ನೌಕರರಿಗೆ ಭತ್ಯೆಗಳು, ಹಿಂದಿನ ಬಾಕಿ, ನ್ಯಾಯಾಲಯದಲ್ಲಿನ ಎಂವಿಸಿ ಪ್ರಕರಣಗಳ ಠೇವಣಿ ಮೇಲೆಯೂ ನೇರ ಪರಿಣಾಮ ಬಿದ್ದಿದೆ. ಇದೀಗ ನೌಕರರ ಸಂಬಳದ ಮೇಲೂ ಪರಿಣಾಮ ಬೀಳುತ್ತಿದೆ.
- ದುರ್ಗಪ್ಪ, ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

