ತರಾತುರಿಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ: ಪಪಂ ಸದಸ್ಯ ದೂರು
ಕೊಟ್ಟೂರು: ಆರೋಗ್ಯ ರಕ್ಷಾ ಸಮಿತಿ ಸಭೆಗೆ ಅಧಿಕಾರೇತರ ಸದಸ್ಯರು ಪಾಲ್ಗೊಳ್ಳದಂತೆ ತಂತ್ರ ರೂಪಿಸಿ ಅಧಿಕಾರಿ ವರ್ಗ ತರಾತುರಿಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಕೈತೊಳೆದುಕೊಂಡಿದೆ ಎಂದು ಸಮಿತಿಯ ಸದಸ್ಯ, ಪಟ್ಟಣ ಪಂಚಾಯಿತಿ ಸದಸ್ಯ ಚಿರಿಬಿ ಕೊಟ್ರೇಶ್ ದೂರಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಆರೋಗ್ಯ ಸಮಿತಿ ಸಭೆ ಆ. 28ರ 10.30ರ ನಡೆಯುವ ಕುರಿತು ಸಭೆ ನಡೆಯುವ ಸಮಯಕ್ಕೆ ನೋಟಿಸ್ ಕಳುಹಿಸಲಾಗಿದೆ. ಇತ್ತ ಸದಸ್ಯರಿಗೆ ನೋಟಿಸ್ ಕಳುಹಿಸಿ ಕೂಡ್ಲಿಗಿಯತ್ತ ಅಧಿಕಾರಿಗಳು ಸಭೆ ನಡೆಸಲು ಮುಂದಾಗುವ ಮೂಲಕ ಅನುದಾನವನ್ನು ದುರುಪಯೋಗಪಡಿಸಿಕೊಳ್ಳುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಭೆಗೆ ಕನಿಷ್ಠ 2 ದಿನ ಮುಂಚಿತವಾಗಿ ನೋಟಿಸ್ ಕಳುಹಿಸುವ ಸೌಜನ್ಯವನ್ನು ಅಧಿಕಾರಿಗಳು ತೋರಿಲ್ಲದಿರುವುದು ಇದರಿಂದ ಸ್ಪಷ್ಟವಾಗಿದೆ. ಈ ಮೂಲಕ ಸದಸ್ಯರ ಹಕ್ಕನ್ನು ಮೊಟಕುಗೊಳಿಸುವ ಸಂಚು ಹೂಡಿರುವುದು ಗೊತ್ತಾಗುತ್ತದೆ. ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಸ್ಥಳೀಯ ಪಪಂನ ಅಧ್ಯಕ್ಷರಾಗಿದ್ದು, ಆಡಳಿತಾಧಿಕಾರಿ ತಹಸೀಲ್ದಾರ್ ಸದ್ಯದ ಮಟ್ಟಿಗೆ ಅಧ್ಯಕ್ಷರಾಗಿದ್ದು, ತಾಪಂ ಇಒ, ತಾಲೂಕು ಆರೋಗ್ಯಾಧಿಕಾರಿ, ಜೆಸ್ಕಾಂ ಎಇಇ, ಕೊಟ್ಟೂರು ಸಿಪಿಐ, ವೈದ್ಯಕೀಯ ಸೇವೆಯ ಸಹಾಯಕ ನಿರ್ದೇಶಕ, ಜಿಪಂ ಉಪವಿಭಾಗದ ಎಇಇಗಳು ಸದಸ್ಯರಾಗಿದ್ದಾರೆ. ಡಿಎಸ್ಎಸ್ ಮುಖಂಡ ಮರಿಸ್ವಾಮಿ ಮತ್ತು ತಾವು ಅಧಿಕಾರೇತರ ಸದಸ್ಯರಾಗಿದ್ದೇವೆ. ಸಭೆ ಕೊಟ್ಟೂರಿನಲ್ಲಿಯೇ ನಡೆಯುವುದು ವಾಡಿಕೆ ಮತ್ತು ಸೂಕ್ತ. ಈ ಬಾರಿ ಸಭೆಯನ್ನು ಕೂಡ್ಲಿಗಿಯಲ್ಲಿ ಕರೆದು ಕಾಟಾಚಾರಕ್ಕೆ ಸಭೆ ನಡೆಸುವತ್ತ ಅಧಿಕಾರಿಗಳು ಮುಂದಾಗಿರುವುದು ಅಕ್ಷಮ್ಯ ಎಂದು ಹೇಳಿದರು.
ಆರೋಗ್ಯ ರಕ್ಷಾ ಸಮಿತಿಯಂತಹ ಮಹತ್ವದ ಸಮಿತಿ ಸಭೆಯನ್ನು ಈ ರೀತಿ ಬೇಕಾಬಿಟ್ಟಿಯಾಗಿ ನಡೆಸುವ ಉದ್ಧಟತನ ತೋರಿರುವ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

