ದೇವದಾಸಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರ
ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯಲ್ಲಿ ವಾಹಿನಿ ಸಂಸ್ಥೆಯು ದೇವದಾಸಿರಿಗೆ ನಾನಾ ಕೌಶಲ್ಯ ಅಭಿವೃದ್ಧಿ ತರಬೇತಿ ಶಿಬಿರವನ್ನು ಹಮ್ಮಿಕೊಂಡಿತ್ತು.
ಶಿಬಿರದಲ್ಲಿ ಮಾತನಾಡಿದ ಪೊಲೀಸ್ ಠಾಣೆ ಎಎಸ್ಐ ಆರ್.ಎಲ್.ಎನ್. ಶಾಸ್ತ್ರಿ, ದೇಶ ವೈಜ್ಞಾನಿಕವಾಗಿ ಸಾಕಷ್ಟು ಪ್ರಗತಿ ಹೊಂದಿದ್ದರೂ, ಸಾಮಾಜಿಕ ಅನಿಷ್ಟ ಪದ್ಧತಿಗಳು ಮಾತ್ರ ನಿರ್ಮೂಲನೆಯಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಇಂತಹ ಸಮಾಜ ಬಾಹಿರ ಚಟುವಟಿಕೆಗಳಿಗೆ ತಿಲಾಂಜಲಿ ಹಾಕಬೇಕಿದೆ. ಅಲ್ಲದೆ ಈಗಾಗಲೆ ಈ ದುಷ್ಟ ಪದ್ಧತಿಗೆ ಬಲಿಯಾದವರು, ಸರ್ಕಾರ ಕೊಡುವ ಹತ್ತು ಹಲವು ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಉತ್ತಮ ತರಬೇತಿ ಹೊಂದಿ ಸ್ವಾವಲಂಬಿ ಬದುಕು ಸಾಗಿಸುವಂತೆ ಸಲಹೆ ನೀಡಿದರು.
ಸಿಡಿಪಿಒ ಇಲಾಖೆ ಸಿಬ್ಬಂದಿ ರಾಮನಗೌಡ ಹಾಗೂ ಅಂಗನವಾಡಿ ಮೇಲ್ವಿಚಾರಕಿ ನಾಗರತ್ನಾ ಮಾತನಾಡಿ, ತರಬೇತಿ ಪಡೆದ ದೇವದಾಸಿಯರು ನಾನಾ ಕೌಶಲ್ಯಗಳನ್ನು ಉತ್ಪಾದಿಸಬಹುದು. ಆ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬೇಕು. ಮೂಢನಂಬಿಕೆ ತೊರೆದು ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹೊಸಪೇಟೆ ತಾಲೂಕಿನ ಯೋಜನಾಕಾರಿ ವಿಶ್ವನಾಥ ಹೂಗಾರ, ತರಬೇತಿ ಪಡೆದ ದೇವದಾಸಿಯರಾದ ಸೊಲ್ಲಮ್ಮ, ಮೈಲಮ್ಮ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಗಂಗಾಧರ, ವೇದಮೂರ್ತಿ, ಹಾಲನಗೌಡ, ತರಬೇತುದಾರ ವಾಹಿನಿ ಸಂಸ್ಥೆಯ ಸುಮಂಗಲಾ, ಈಶ್ವರ್ ಹಾಗೂ ಇತರರಿದ್ದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾಮಾಕ್ಷಿ, ಸುರೇಶ ಮಾಗಳ ನಿರ್ವಹಿಸಿದರು. ಸ್ವಸಹಾಯ ಪರಿಕಲ್ಪನೆ ಹೊಂದಿ ಆರ್ಥಿಕವಾಗಿ ಬಲವರ್ಧನೆಯಾಗುವುದು, ಕುರಿ ಸಾಕಣೆ, ಬ್ಯಾಂಕ್ ವ್ಯವಹಾರ, ಹೈನುಗಾರಿಕೆ, ಬೇವಿನ ಮುಲಾಮು ತಯಾರಿಕೆ, ಉತ್ಪಾದನೆ ಮತ್ತು ಮಾರುಕಟ್ಟೆ ಸೌಲಭ್ಯ, ಜ್ಯೂಮರ್, ಬೀಸಣಿಕೆ ತಯಾರಿಕೆ ಇತ್ಯಾದಿ ಕೌಶಲ್ಯಗಳ ಕುರಿತು ತರಬೇತಿ ನೀಡಿದರು. 50ಕ್ಕೂ ಹೆಚ್ಚು ದೇವದಾಸಿಯರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

