ಬಳ್ಳಾರಿ

ಯುವತಿ, ಯವಕನ ಮೇಲೆ ಹಲ್ಲೆ: ಇಬ್ಬರು ವಶಕ್ಕೆ

Published On :

ಬಳ್ಳಾರಿ: ಹಳೆ ಸೇಡು ತೀರಿಸಿಕೊಳ್ಳಲು ವೇಶ್ಯಾವಾಟಿಕೆ ನಡೆದಿದೆ ಎಂದು ಸುಳ್ಳು ಹೇಳಿ ಒಬ್ಬ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಥಳಿಸಿದ ಘಟನೆ ನಗರದ ಕೋಟೆ ಪ್ರದೇಶದಲ್ಲಿ ಬುಧವಾರ ನಡೆದಿದೆ.
ಕೌಲ್‌ಬಜಾರ್ ಠಾಣೆ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇವರನ್ನು ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಅವರ ಕಡೆಯವರೆಂದು ಆರೋಪಿಸಲಾಗಿದೆ. ಬುಧವಾರ ಬಳ್ಳಾರಿಯ ಕೋಟೆ ಪ್ರದೇಶದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ, ಅಲ್ಲಿನ ಕೆಲವರು ಭಾಗ್ಯಮ್ಮ ಮನೆಗೆ ನುಗ್ಗಿ ಭಾಗ್ಯಮ್ಮ ಅವರ ಪುತ್ರಿ ಲಕ್ಷ್ಮೀ ಹಾಗೂ ಆಕೆಯ ಸ್ನೇಹಿತ ಅತಹಾರ್ ಎಂಬ ಯುವಕನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಕೂಡಲೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಥಳಿತಕ್ಕೊಳಗಾದ ಲಕ್ಷ್ಮೀ ಗೆಳೆಯ ಅತಹಾರ್ ಮಾತ್ರ ಇಲ್ಲಿ ವೇಶ್ಯವಾಟಿಕೆ ನಡೆದಿದ್ದರಿಂದ ಇಲ್ಲಿಗೆ ಬಂದಿದ್ದೇನೆ ಎಂದು ಉಲ್ಟಾ ಹೊಡೆದಿದ್ದರಿಂದ ಪ್ರಕರಣ ಮತ್ತೊಂದು ರೂಪ ಪಡೆದುಕೊಂಡಿದೆ.
ಸೇಡು ತೀರಿಸಿಕೊಳ್ಳಲು ಹಲ್ಲೆ: ಲಕ್ಷ್ಮೀ ಹೇಳುವ ಪ್ರಕಾರ ಅತಹಾರ್ ನನ್ನ ಕ್ಲಾಸ್‌ಮೇಟ್. ನಾವಿಬ್ಬರೂ ವಾರ್ಡ್ಲಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತೇವೆ.
ನಾವಿಬ್ಬರೂ ಸ್ನೇಹಿತರು. ಇಲ್ಲಿ ಯಾವುದೇ ವೇಶ್ಯಾವಾಟಿಕೆ ನಡೆಯುತ್ತಿಲ್ಲ. ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಅತಹಾರ್‌ನನ್ನು ಥಳಿಸಿದ್ದರಿಂದ ಆತ ಭಯದಿಂದ ಈ ರೀತಿ ಉಲ್ಟಾ ಹೇಳಿಕೆ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.