ವಿದ್ಯುತ್ ಕಂಬ ಅಳವಡಿಸಿ
ಬಳ್ಳಾರಿ: ತಾಲೂಕಿನ ಸಂಗನಕಲ್ಲು ಗ್ರಾಮದ 4ನೇ ವಾರ್ಡ್ಗೆ ವಿದ್ಯುತ್ ಕಂಬಗಳನ್ನು ಅಳವಡಿಸುವಂತೆ ಒತ್ತಾಯಿಸಿ, ಚಲವಾದಿ ಮಹಾಸಭಾ ಗ್ರಾಮ ಘಟಕದ ಕಾರ್ಯಕರ್ತರು ಸ್ಥಳೀಯ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು.
ಬಹುಪಾಲು ಪರಿಶಿಷ್ಟ ಜನಾಂಗವೇ ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿರುವ ಗ್ರಾಮದ 4ನೇ ವಾರ್ಡ್ಗೆ ಸಮರ್ಪಕ ವಿದ್ಯುತ್ ಕಂಬಗಳಿಲ್ಲದಿರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ವಾರ್ಡ್ನ ನಿವಾಸಿಗಳು ಕತ್ತಲಲ್ಲೇ ವಾಸಿಸುವಂತಾಗಿದೆ.
ಈ ಕುರಿತು ಹಲವು ಬಾರಿ ಗ್ರಾಪಂ ಸದಸ್ಯರಿಗೆ, ಅಧಿಕಾರಿಗಳ ಗಮನ ಸೆಳೆದಿದ್ದರೂ, ಒಮ್ಮೆಯೂ ಎಚ್ಚೆತ್ತುಕೊಳ್ಳದಿರುವುದು, ಇವರಲ್ಲಿ ವಾರ್ಡ್ ಮೇಲಿರುವ ನಿರ್ಲಕ್ಷ್ಯ ಎತ್ತಿ ತೋರಿಸಲಿದೆ.
ವಾರ್ಡ್ನಿಂದ ಅನತಿ ದೂರದಲ್ಲೇ ಸ್ಮಶಾನವಿದ್ದು, ರಾತ್ರಿ ಕತ್ತಲಲ್ಲಿ, ಮಕ್ಕಳು, ವೃದ್ಧರು ಸಂಚರಿಸಲು ಭಯ ಪಡುವರು. ಹೀಗಾಗಿ ಇನ್ನಾದರೂ, ಅಧಿಕಾರಿಗಳು, ಗ್ರಾಪಂ ಸದಸ್ಯರು ನಿರ್ಲಕ್ಷ್ಯ ವಹಿಸದೆ ಕೂಡಲೇ ವಿದ್ಯುತ್ ಕಂಬಗಳನ್ನು ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಪಂ ಪಿಡಿಒಗೆ ಸಲ್ಲಿಸಿದ ಪತ್ರದಲ್ಲಿ ಘಟಕದ ಅಧ್ಯಕ್ಷ ಮಲ್ಲಯ್ಯ ಮನವಿ ಮಾಡಿದ್ದಾರೆ.
ಸಮುದಾಯದ ಮುಖಂಡರಾದ ಸಿ. ಜಂಬಯ್ಯ, ಮರಿಯಪ್ಪ, ಯುವಜಾಗೃತಿ ವೇದಿಕೆ ಉಪಾಧ್ಯಕ್ಷ ವಿಜಯ್, ಸಿ. ನಾಗಾರ್ಜುನ, ಚಂದ್ರಶೇಖರ್, ಸಂತೋಷ್, ಟಿ. ನಾಗರಾಜ್, ಈರಣ್ಣ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

