ಬಳ್ಳಾರಿ

ನೇಮಿರಾಜ ನಾಯ್ಕ್‌ಗೆ ಚುನಾವಣೆಯಲ್ಲಿ ಪಾಠ

Published On :

ಹಗರಿಬೊಮ್ಮನಹಳ್ಳಿ:  ನೀರಾವರಿ ಯೋಜನೆ ಜಾರಿ ವಿಚಾರದಲ್ಲಿ ಸುಳ್ಳು ಹೇಳುವ ಮೂಲಕ ಕ್ಷೇತ್ರದ ಜನತೆಯನ್ನು ಹಾದಿತಪ್ಪಿಸುವ ಕೆಲಸದಲ್ಲಿ ನಿರತರಾಗಿರುವ ಶಾಸಕ ನೇಮಿರಾಜ ನಾಯ್ಕ್‌ಗೆ ಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವಂತೆ ಜೆಡಿಎಸ್ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ವೈ. ಮಲ್ಲಿಕಾರ್ಜುನ ಕರೆ ನೀಡಿದರು.
ಕ್ಷೇತ್ರ ಜೆಡಿಎಸ್ ಸಮಿತಿ ಆಯೋಜಿಸಿದ್ದ ಮಾಲ್ವಿ ಜಲಾಶಯಕ್ಕೆ ನೀರು, ರೈತರಿಗೆ ಉಸಿರು, ಜನತಾದಳ ನಡಿಗೆ ಜನರ ಬಳಿಗೆ ಪಾದಯಾತ್ರೆಯ 2ನೇ ದಿನವಾದ ಗುರುವಾರ ತಾಲೂಕಿನ ಗಡಿ ಗ್ರಾಮ ಅಲಬೂರಿನಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಮಾತನಾಡಿ, ಮಾಲ್ವಿ ಡ್ಯಾಂಗೆ ಶಾಶ್ವತ ನೀರೋದಗಿಸುವ ಯೋಜನೆ ಜಾರಿಗಾಗಿ ಆಗ್ರಹಿಸಿ ಜೆಡಿಎಸ್ ಪಾದಯಾತ್ರೆ ಆರಂಭಿಸುತ್ತಿದ್ದಂತೆಯೇ ಈ ಬಾರಿಯ ಬಜೆಟ್‌ನಲ್ಲಿ ರು. 200 ಕೋಟಿ ಮಂಜೂರು ಮಾಡಿಸುವುದಾಗಿ ಶಾಸಕರು ಹೇಳುತ್ತಿದ್ದು, ಇದು ಜನತೆಯನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದೆಯೇ ಹೊರತು ಮಾಲ್ವಿ ಜಲಾಶಯಕ್ಕೆ ನೀರೊದಗಿಸಲು ಶಾಸಕರಿಗೆ ಇಚ್ಛಾಶಕ್ತಿ ಇಲ್ಲ. ಇಂತಹ ಹಸಿ ಸುಳ್ಳುಗಳನ್ನು ಜನತೆ ನಂಬಬಾರದೆಂದು ಮನವಿ ಮಾಡಿಕೊಂಡರು.
ಕಿಂಚಿತ್ತೂ ಯೋಚಿಸಲಿಲ್ಲ: ಮಾಲ್ವಿ ಡ್ಯಾಂಗೆ ನೀರು ತರುವ ಹುಸಿ ಭರವಸೆ ನೀಡಿಯೇ 2008ರಲ್ಲಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನೇಮಿರಾಜ್ ನಾಯ್ಕ್ ತಮ್ಮ 4 ವರ್ಷ 10 ತಿಂಗಳ ಕಾಲಾವಧಿಯಲ್ಲಿ  ಡ್ಯಾಂಗೆ ನೀರೊದಗಿಸುವ ಯೋಜನೆ ಬಗ್ಗೆ ಯೋಚಿಸಲಿಲ್ಲ. ಚುನಾವಣೆ ಬಂದಿದ್ದು ಮತದಾರರ ಬಳಿಗೆ ಹೋಗಲು ಮಾಲ್ವಿ ಡ್ಯಾಂಗೆ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿಸುವುದಾಗಿ  ಹೇಳುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದರು.
ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬನ್ನಿಗೋಳ ವೆಂಕಣ್ಣ, ಮುಖಂಡರಾದ ಮಾತಾಗ್ಯಾಸ್ ಎರ್ರಿಸ್ವಾಮಿ, ಪೋಟೋ ರಾಮಣ್ಣ, ಎಂ.ಎ. ರಾಮಪ್ಪ, ಸುಭಾನ್‌ಸಾಬ್, ಬಾಳಿಕಾಯಿ ವೀರೇಶ, ಮಹಿಳಾ ಘಟಕದ ಅಧ್ಯಕ್ಷೆ ಕಲ್ಗುಡಿ ಕಮಲಮ್ಮ, ರೈತ ಘಟಕದ ಅಧ್ಯಕ್ಷ ಡಿ. ಶರಣಪ್ಪ, ಯುವ ಘಟಕದ ಅಧ್ಯಕ್ಷ ಡಿಶ್ ಪಾಂಡುರಂಗ ನಾಯ್ಕ್, ಎಸ್ಟಿ ಘಟಕದ ಅಧ್ಯಕ್ಷ ಸಣ್ಣಪವಾಡಿ ಹನುಮಂತಪ್ಪ, ಕಾರ್ಯದರ್ಶಿ ಹನಸಿ ಚಂದ್ರಶೇಖರ, ದಾದಮ್ಮನವರ ಪರಶುರಾಮ, ಗ್ರಾಮದ ಪ್ರಕಾಶ, ಬ್ರಹ್ಮಜ್ಜ, ಚಂದ್ರಪ್ಪ, ಸಿದ್ದೇಶ, ನಾಗರಾಜಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.