ಬಳ್ಳಾರಿ

ಜೆಸಿಐ ಕಂಪ್ಲಿ ಸೋನಾ ಪದಗ್ರಹಣ

Published On :




ಕಂಪ್ಲಿ: ಜನರ ಸರ್ವಾಂಗೀಣಾಭಿವೃದ್ಧಿಗೆ ಸಹಾಯಕವಾಗುವ ಮತ್ತು ಯುವಜನತೆಗೆ ಉಪಯುಕ್ತವಾಗುವ ವಿವಿಧ ಕಾರ್ಯಕ್ರಮಗಳನ್ನು ಜೆಸಿಐ ಕಂಪ್ಲಿ ಸೋನಾ ಮೂಲಕ ಹಮ್ಮಿಕೊಳ್ಳಲಾಗುವುದು ಎಂದು ಜೆಸಿಐ ಕಂಪ್ಲಿ ಸೋನಾ ನೂತನ ಅಧ್ಯಕ್ಷ ಎಸ್. ಅನಿಲ್‌ಕುಮಾರ್ ತಿಳಿಸಿದರು.
ಕಂಪ್ಲಿಯ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜೆಸಿಐ ಕಂಪ್ಲಿ ಸೋನಾ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ, ಸಮಾಜಮುಖಿ, ಜನತೆ ವಿಕಸನಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು.
ಹೊಸಪೇಟೆ ಬಿಇಓ ಕಚೇರಿ ಪತ್ರಾಂಕಿತ ವ್ಯವಸ್ಥಾಪಕ ಜಿ. ಗೋಣಿಬಸಪ್ಪ ಸಮಾರಂಭ ಉದ್ಘಾಟಿಸಿದರು. ನೂತನ ಅಧ್ಯಕ್ಷ ಎಸ್. ಅನಿಲ್‌ಕುಮಾರ್ ಮತ್ತು ಪದಾಧಿಕಾರಿಗಳಿಗೆ ವಲಯ 24ರ ಅಧ್ಯಕ್ಷ ಚಂದ್ರಾಮಪ್ಪ ಪ್ರಮಾಣ ವಚನ ಬೋಧಿಸಿದರು. ವಲಯ ಉಪಾಧ್ಯಕ್ಷ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ಹಾಗೂ 24ರ ವಲಯಾಧಿಕಾರಿ ರಮೇಶ್, ವಲಯ ಸಂಚಿಕೆ ಸಂಪಾದಕ ಜಿ.ಚಂದ್ರಶೇಖರಗೌಡ, ಕಾರ್ಯದರ್ಶಿ ವೈ.ಎಂ. ರಾಜೇಂದ್ರ, ಕಾರ್ಯದರ್ಶಿ ನಿರ್ದೇಶಕ ಕೆ. ಗೋವಿಂದರಾಜ್ ಮಾತನಾಡಿದರು.
ಜೆಸಿಐ ಸೋನಾದ ವಿ. ವಿದ್ಯಾಧರ, ಬಳ್ಳಾರಿ ನಿರಂಜನಗುಪ್ತ, ಪಿ. ಗಿರಿನಾಥ್ ಶೆಟ್ಟಿ, ಆಶೋಕ್, ಶಶಿಧರ, ಪ್ರಸಾದ್ ಗಡಾದ್, ಯು. ಶಿವರಾಜ್, ಸಚಿನ್ ಪುಟ್ಟಿ, ಗುರುಕೃಷ್ಣ ಧನಪಾಲ್, ಅಯ್ಯೋದಿ ರಾಘವೇಂದ್ರ, ಅಚ್ಚಪ್ಪ ನಾಗರಾಜ್, ಮಾರುತಿ, ಬಾಲಪ್ಪ, ಅಮರೇಶ್ ಗೌಡ, ಟಿ. ಸುಮಂತ್, ಅಂಗಡಿ ಮಂಜುನಾಥ್, ಮಲ್ಲಿಕಾರ್ಜುನ, ವಿಪಿನ್ ರಾಂಕಾ ಮತ್ತಿತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.